twitter
    For Quick Alerts
    ALLOW NOTIFICATIONS  
    For Daily Alerts

    ದುರ್ಬಲ ವರ್ಗದವರ ಏಳಿಗೆಗಾಗಿ ಕೆಲಸ ಮಾಡುವೆ: ಆರ್ಯನ್ ಖಾನ್ ಭರವಸೆ

    By ರವೀಂದ್ರ ಕೊಟಕಿ
    |

    ಶಾರುಖ್ ಖಾನ್ ಮಗನ ಭವಿಷ್ಯ ಇನ್ನು ಡೋಲಾಯಮಾನವಾಗಿದೆ. ಅಕ್ಟೋಬರ್ 20ರಂದು ಬೇಲ್ ಸಿಗಬಹುದು ಅಥವಾ ಮತ್ತಷ್ಟು ಕಾಲ ಮುಂದೂಡಬಹುದು. ಇಂತಹ ಅನಿಶ್ಚಿತ ವಾತಾವರಣದಲ್ಲಿ ಮಗ ಜೈಲಿನಲ್ಲಿ, ಅಪ್ಪ- ಅಮ್ಮ ಮನೆಯಲ್ಲಿ ಬುಧವಾರದ ಕೋರ್ಟ್ ಕಲಾಪಕ್ಕಾಗಿ ಎದುರುನೋಡುತ್ತಿದ್ದಾರೆ. ಅಕ್ಟೋಬರ್ 2ರಂದು ಬಂಧನ ವಾಗಿರುವ ಆರ್ಯನ್ ಖಾನ್ ಸಂಕಷ್ಟಗಳು ಇನ್ನೂ ಮುಗಿದಿಲ್ಲ. NCB ಅಧಿಕಾರಿಗಳು ದಿನೇ ದಿನೇ ಹೊಸ ಹೊಸ ವಿಷಯಗಳೊಂದಿಗೆ ಪ್ರಕರಣದ ದಿಕ್ಕನ್ನೇ ಬದಲಾಯಿಸುತ್ತಿದ್ದಾರೆ. ಹೀಗಾಗಿಯೇ ದೇಶದ ದುಬಾರಿ ವಕೀಲರ ತಂಡಗಳೇ ಕೆಲಸ ಮಾಡುತ್ತಿದ್ದರು ಶಾರುಖ್ ಖಾನ್ ಮಗನಿಗೆ ಬಿಡುಗಡೆಯ ಭಾಗ್ಯ ಇನ್ನೂ ದೊರೆಯುತ್ತಿಲ್ಲ.

    'ಮನ್ನತ್ 'ನಲ್ಲಿ ಆರ್ಯನ್ ಖಾನ್ ತಾಯಿ ಗೌರಿ ಮಗನ ಬಿಡುಗಡೆಗಾಗಿ ದೇವರಲ್ಲಿ ಮನ್ನತ್ (ಕೋರಿಕೆ) ಸಲ್ಲಿಸಿ ಮಗ ಬಿಡುಗಡೆಯಾಗುವವರೆಗೂ ಸಿಹಿ ಪದಾರ್ಥಗಳನ್ನು ವರ್ಜಿಸಿ ದೀಕ್ಷೆ ಹಿಡಿದಿದ್ದಾರೆ. ಶಾರುಖ್ ಖಾನ್ ಮಗ ಜೈಲುಪಾಲಾದ ದಿನದಿಂದಲೂ ಮಗನ ಕೊರಗಿನಲ್ಲಿ ಅನ್ನಾಹಾರಗಳನ್ನು ಕಾಲಕಾಲಕ್ಕೆ ಸೇವಿಸುವುದನ್ನು ಮರೆತುಬಿಟ್ಟಿದ್ದಾರೆ. ಕುಟುಂಬ ಕೂಡ ಈಗ ಯಾರೊಂದಿಗೂ ಹೆಚ್ಚಿಗೆ ಮಾತನಾಡುತ್ತಿಲ್ಲ. ಈಗ ಅವರ ಆಲೋಚನೆಯಲ್ಲಾ ಮಗನನ್ನು ಬೇಲ್ ಮೇಲೆ ಹೇಗೆ ಹೊರಗೆ ತೆಗೆದುಕೊಂಡು ಬರಬೇಕು ಎಂಬುದೇ ಆಗಿದೆ.

    ಸಾಧಾರಣವಾಗಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವವರಿಗೆ ಎನ್‌ಸಿಬಿ ಕಸ್ಟಡಿಯಲ್ಲಿ ಕೌನ್ಸಲಿಂಗ್ ನಡೆಸಲಾಗುತ್ತದೆ.

    ಇದರಲ್ಲಿ ಅವರಿಗೆ ಡ್ರಗ್ಸ್ ತೆಗೆದುಕೊಳ್ಳುವುದರಿಂದ ಉಂಟಾಗುವ ಮಾನಸಿಕ ಮತ್ತು ದೈಹಿಕ ದೂರಗಾಮಿ ಸಮಸ್ಯೆಗಳ ಬಗ್ಗೆ ವಿವರಿಸಲಾಗುತ್ತದೆ. ಮಾನಸಿಕ ಒತ್ತಡಗಳಿಂದ ಹೊರಬರಲು ಅವರಿಗೆ ಬೇಕಾದ ಇತರ ಸಲಹೆ ಸೂಚನೆಗಳನ್ನು ಕೂಡ NCB ಅಧಿಕಾರಿಗಳು ಆ ಸಂದರ್ಭದಲ್ಲಿ ನೀಡುತ್ತಾರೆ. ಈ ತಿಂಗಳ ಆರಂಭದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕ್ರೂಸ್ ನಲ್ಲಿ ವಶಪಡಿಸಿಕೊಂಡ ಡ್ರಗ್ಸ್‌ಗೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಲಾಗಿತ್ತು. ಆತನನ್ನು ಬಂಧಿಸಿ ಕೆಲವು ವಾರಗಳು ಕಳೆದಿವೆ. ಅವರ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಿದ ನಂತರ, ಆರ್ಯನ್ ಖಾನ್ ಪ್ರಕರಣವನ್ನು ಅಕ್ಟೋಬರ್ 14 ಕ್ಕೆ ಮುಂದೂಡಲಾಯಿತು. ಮತ್ತೊಮ್ಮೆ ಜಾಮೀನು ಆದೇಶವನ್ನು ಅಕ್ಟೋಬರ್ 20 ರವರೆಗೆ ಕಾಯ್ದಿರಿಸಲಾಗಿದೆ. ಅಲ್ಲಿಯವರೆಗೂ ಆರ್ಥರ್ ರೋಡ್ ಜೈಲಿನಲ್ಲಿ ಕೈದಿ ನಂಬರ್ 956 ಆರ್ಯನ್ ಖಾನ್ ಅವರನ್ನು ಇರಿಸಲಾಗಿದೆ.

    ಆರ್ಯನ್ ಖಾನ್‌ಗೆ ಎನ್‌ಸಿಬಿ ಕೌನ್ಸಲಿಂಗ್

    ಆರ್ಯನ್ ಖಾನ್‌ಗೆ ಎನ್‌ಸಿಬಿ ಕೌನ್ಸಲಿಂಗ್

    ವರದಿಗಳ ಪ್ರಕಾರ, ಆರ್ಥರ್ ರೋಡ್ ಜೈಲಿಗೆ ಕಳಿಸುವ ಮೊದಲು ಆತನಿಗೆ ಎನ್‌ಸಿಬಿ ಕಸ್ಟಡಿಯಲ್ಲಿ ಕೌನ್ಸೆಲಿಂಗ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಆರ್ಯನ್ ಖಾನ್ NCB ನಿರ್ದೇಶಕ ಸಮೀರ್ ವಾಂಖೆಡೆ ಅವರಿಗೆ 'ತಾವು ಹೆಮ್ಮೆಪಡುವಂತಹ ಕಾರ್ಯಗಳನ್ನು ನಾನು ಮುಂದೆ ಮಾಡುತ್ತೇನೆ' ಅಂತ ಹೇಳಿದ್ದಾನೆ ಅಂತ ವರದಿಯಾಗಿದೆ.

    ಒಳ್ಳೆಯ ಕೆಲಗಳನ್ನು ಮಾಡುವೆ: ಆರ್ಯನ್ ಖಾನ್

    ಒಳ್ಳೆಯ ಕೆಲಗಳನ್ನು ಮಾಡುವೆ: ಆರ್ಯನ್ ಖಾನ್

    ಇಂಡಿಯಾ ಟುಡೇ ಪ್ರಕಾರ, "ಆರ್ಯನ್ ಖಾನ್ ಅವರು NCB ಯ ಮುಂಬಯಿ ಘಟಕದ ವಲಯ ನಿರ್ದೇಶಕ ಸಮೀರ್ ವಾಂಖೆಡೆಗೆ ಕೌನ್ಸಲಿಂಗ್ ಸಮಯದಲ್ಲಿ ಈ ಬಗ್ಗೆ ಭರವಸೆ ನೀಡಿದ್ದು 'ನಾನು ಜೈಲಿನಿಂದ ಹೊರಗೆ ಹೋದಮೇಲೆ ಒಳ್ಳೆಯ ಕೆಲಸ ಕೆಲಸಗಳನ್ನು ಮಾಡುತ್ತೇನೆ. ಅದರಲ್ಲೂ ವಿಶೇಷವಾಗಿ ಬಡವರು ಮತ್ತು ಕೆಳವರ್ಗದ ಜನರಿಗೆ ಸೇವೆ ಮಾಡುತ್ತೇನೆ. ಮತ್ತು ಒಂದು ದಿನ ನೀವು ನಾನು ಮಾಡುವ ಸೇವಾಕಾರ್ಯಗಳನ್ನು ನೋಡಿ ಹೆಮ್ಮೆ ಪಡುತ್ತೀರಿ' ಎಂದು 23 ವರ್ಷದ ಆರ್ಯನ್ ವಾಂಖೆಡೆ ಅವರಿಗೆ ಹೇಳಿದ್ದಾನಂತೆ.

    ಉತ್ತಮ ವ್ಯಕ್ತಿಯಾಗುವ ಭರವಸೆ ಕೊಟ್ಟ ಆರ್ಯನ್ ಖಾನ್

    ಉತ್ತಮ ವ್ಯಕ್ತಿಯಾಗುವ ಭರವಸೆ ಕೊಟ್ಟ ಆರ್ಯನ್ ಖಾನ್

    NCB ಮೂಲಗಳ ಪ್ರಕಾರ ಸಮಾಲೋಚನೆಯ ಸಮಯದಲ್ಲಿ ಆರ್ಯನ್ ಖಾನ್ ಜೈಲಿನಿಂದ ಹೊರಬಂದ ನಂತರ ಉತ್ತಮ ವ್ಯಕ್ತಿಯಾಗುವುದಾಗಿ ಭರವಸೆ ನೀಡಿದರು. ಆರ್ಯನ್ ಖಾನ್ ಮತ್ತು ಪ್ರಕರಣದಲ್ಲಿ ಬಂಧಿತರಾದ ಇತರರಿಗೆ ಸಮೀರ್ ವಾಂಖೆಡೆ ಸೇರಿದಂತೆ ಎನ್‌ಸಿಬಿ ಅಧಿಕಾರಿಗಳು ಅವರ ಭವಿಷ್ಯದ ದೃಷ್ಟಿಯಿಂದ ಸಮಾಲೋಚನಾ ಸಭೆಯಲ್ಲಿ ಅನೇಕ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

    ಅಕ್ಟೋಬರ್ 20ರವರೆಗೆ ಜೈಲಿನಲ್ಲಿರಲಿದ್ದಾರೆ

    ಅಕ್ಟೋಬರ್ 20ರವರೆಗೆ ಜೈಲಿನಲ್ಲಿರಲಿದ್ದಾರೆ

    ಆರ್ಯನ್ ಖಾನ್ ಹಾಗೂ ಇತರ ಬಂಧಿತ ಅರೋಪಿಗಳಾದ ಮುನ್ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸತಿಜಾ ಮತ್ತು ವಿಕ್ರಾಂತ್ ಚೋಕರ್ ಈ ಕೌನ್ಸಿಲಿಂಗ್ ಇಂದ ತಮ್ಮ ತಪ್ಪುಗಳ ಬಗ್ಗೆ ಅರಿತುಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪಗೊಳ್ಳುತ್ತವೆ ಅಂತ ಸಮಾಲೋಚನೆಯ ನಂತರ ಹಿರಿಯ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರಂತೆ.ಏತನ್ಮಧ್ಯೆ, ಆರ್ಯನ್ ಖಾನ್ ಕನಿಷ್ಠ ಅಕ್ಟೋಬರ್ 20 ರವರೆಗೆ ಜೈಲಿನಲ್ಲಿ ಮುಂದುವರಿಯಲಿದ್ದಾರೆ.

    English summary
    Will work for uplift poor people says Shah Rukh Khan's son Aryan Khan in NCB counseling. He arrested in drug case by NCB on October 03.
    Sunday, October 17, 2021, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X