69th Filmfare Awards: ಇಲ್ಲಿದೆ ಸಂಪೂರ್ಣ ವಿಜೇತರ ಪಟ್ಟಿ: ರಣ್‌ಬೀರ್-ಆಲಿಯಾ ಜೋಡಿ ಕಮಾಲ್

ಬಾಲಿವುಡ್ ಪ್ರತಿಷ್ಟಾತ್ಮಕ ಫಿಲ್ಮ್‌ಫೇರ್ ಸಿನಿಮಾ ಪ್ರಶಸ್ತಿ ಸಮಾರಂಭ ಎರಡು ದಿನಗಳ ಕಾಲ ಗುಜರಾತ್‌ ಗಾಂಧೀನಗರದಲ್ಲಿ ಅದ್ಧೂರಿಯಾಗಿ ನಡೀತು. ಮೊನ್ನೆ ಟೆಕ್ನಿಕಲ್ ವಿಭಾಗಗಳಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ ಘೋಷಣೆ ಬಳಿಕ ನಿನ್ನೆಆಕ್ಟಿಂಗ್, ಡೈರೆಕ್ಷನ್, ಸಂಗೀತ ಕೇಟಗಿರಿಯಲ್ಲಿ ವಿಜೇತರನ್ನು ಘೋಷಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಟೆಕ್ನಿಕಲ್ ವಿಭಾಗದಲ್ಲಿ ಅನಿಮಲ್, ಜವಾನ್, ಸಾಮ್ ಬಹದೂರ್ ಸಿನಿಮಾಗಳು ಸದ್ದು ಮಾಡಿದವು. ನಿನ್ನೆ ಅನಿಮಲ್, 12th ಫೇಲ್ ಚಿತ್ರಗಳ ಆರ್ಭಟ ಜೋರಾಗಿತ್ತು. 'ಅನಿಮಲ್' ಚಿತ್ರದ ನಟಗೆಗಾಗಿ ರಣ್‌ಬೀರ್ ಕಪೂರ್ ಅತ್ಯುತ್ತಮ ನಟರಾಗಿ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರಕ್ಕಾಗಿ ಆಲಿಯಾ ಭಟ್ ಅತ್ಯುತ್ತಮ ನಟಿಯಾಗಿ ಪ್ರಶಸ್ತಿ ಸ್ವೀಕರಿಸಿರು.

Winners of the 69th Filmfare Awards 2024, here is complete list

ಒಂದೇ ವರ್ಷ ಬಾಲಿವುಡ್ ತಾರಾ ಜೋಡಿ ಅತ್ಯುತ್ತಮ ನಟ-ನಟಿಯಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದು ವಿಶೇಷ.

ಈ ರಂಗುರಂಗಿನ ಕಾರ್ಯಕ್ರಮವನ್ನು ಕರಣ್ ಜೋಹರ್ ನಿರೂಪಣೆ ಮಾಡಿದರು. ಕರೀನಾ ಕಪೂರ್, ಕರಿಷ್ಮಾ ಕಪೂರ್, ವರುಣ್ ಧಾವನ್, ಕಾರ್ತಿಕ್ ಆರ್ಯನ್ ಮುಂತಾದವರು ತಮ್ಮ ಪರ್ಫಾರ್ಮನ್ಸ್‌ನಿಂದ ಗಮನ ಸೆಳೆದರು. 'ಅನಿಮಲ್', '12th ಫೇಲ್' ಚಿತ್ರಗಳು ಹೆಚ್ಚು ಪ್ರಶಸ್ತಿ ಪಡೆದುಕೊಂಡವು. 'ಅನಿಮಲ್' ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಜೊತೆಗೆ ಅತ್ಯುತ್ತಮ ಸಂಗೀತ, ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ ಪ್ರಶಸ್ತಿಗಳು ಸಿಕ್ತು. ಇನ್ನು '12th ಫೇಲ್' ಚಿತ್ರಕ್ಕೆ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ ಡೈರೆಕ್ಟರ್, ಅತ್ಯುತ್ತಮ ನಟ(ಕ್ರಿಟಿಕ್ಸ್), ಅತ್ಯುತ್ತಮ ಚಿತ್ರಕತೆ ಸೇರಿ ಹಲವು ಪ್ರಶಸ್ತಿ ಲಭಿಸಿತು.

ಕಳೆದ ವರ್ಷ 'ಅನಿಮಲ್' ಸಿನಿಮಾ ಭಾರೀ ಸದ್ದು ಮಾಡಿತ್ತು. ಚಿತ್ರದ ಬಗ್ಗೆ ಕೆಲವರು ಭಾರೀ ಟೀಕೆ ಮಾಡಿದರು. ಹಿಂಸೆಯ ವೈಭವಿಕರಣ ಸೇರಿದಂತೆ ಸಾಕಷ್ಟು ಸನ್ನಿವೇಶಗಳ ಬಗ್ಗೆ ಚಕಾರ ತೆಗೆದರು. ಆದರೂ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇನ್ನು ಆರಂಭದಿಂದಲೂ '12th ಫೇಲ್' ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮ ಜೀವನದ ಕಥೆ ಆಧರಿಸಿ ಈ ಸಿನಿಮಾ ಮೂಡಿ ಬಂದಿತ್ತು.

69ನೇ ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತರ ಪಟ್ಟಿ

ಅತ್ಯುತ್ತಮ ಸಿನಿಮಾ - '12th ಫೇಲ್'
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್) - ಜೋರಾಮ್
ಅತ್ಯುತ್ತಮ ನಿರ್ದೇಶಕ ವಿಧು- ವಿನೋದ್ ಚೋಪ್ರಾ(12th ಫೇಲ್ )
ಅತ್ಯುತ್ತಮ ನಟ - ರಣಬೀರ್ ಕಪೂರ್(ಅನಿಮಲ್)
ಅತ್ಯುತ್ತಮ ನಟಿ - ಅಲಿಯಾ ಭಟ್(ರಾಖಿ ಔರ್ ರಾಣಿಕೀ ಪ್ರೇಮ್ ಕಹಾನಿ)
ಅತ್ಯುತ್ತಮ ನಟ (ಕ್ರಿಟಿಕ್ಸ್) - ವಿಕ್ರಾಂತ್ ಮೆಸ್ಸೆ (12th ಫೇಲ್)
ಅತ್ಯುತ್ತಮ ನಟಿ(ಕ್ರಿಟಿಕ್ಸ್) - ರಾಣಿ ಮುಖರ್ಜಿ(ಮಿಸೆಸ್ ಛಟರ್ಜಿ ವರ್ಸೆಸ್ ನಾರ್ವೆ), ಶಫಾಲಿ ಶಾ(ತ್ರೀ ಆಫ್ ಅಜ್)
ಅತ್ಯುತ್ತಮ ಪೋಷಕ ನಟ - ವಿಕ್ಕಿ ಕೌಶಲ್ (ಡಂಕಿ)
ಅತ್ಯುತ್ತಮ ಪೋಷಕ ನಟಿ - ಶಬಾನಾ ಅಜ್ಮಿ(ರಾಖಿ ಔರ್ ರಾಣಿಕೀ ಪ್ರೇಮ್ ಕಹಾನಿ)
ಅತ್ಯುತ್ತಮ ಸಾಹಿತ್ಯ - ಅಮಿತಾಬ್ ಭಟ್ಟಾಚಾರ್ಯ (ತೇರೆ ವಾಸ್ತೆ ಸಾಂಗ್ - ಜರ ಹಾಟ್ಕೆ ಜರ ಬಚ್ಕೆ)
ಅತ್ಯುತ್ತಮ ಸಂಗೀತ ಆಲ್ಬಮ್ - ಅನಿಮಲ್
ಅತ್ಯುತ್ತಮ ಹಿನ್ನೆಲೆ ಗಾಯಕ - ಭೂಪೇಂದ್ರ ಬಾಬಲ್(ಅರ್ಜನ್ ವೆಯಿಲಿ ಸಾಂಗ್ - ಅನಿಮಲ್)
ಅತ್ಯುತ್ತಮ ಹಿನ್ನೆಲೆ ಗಾಯಕಿ - ಶಿಲ್ಪರಾವ್ (ಚೆಲೆಯ - ಜವಾನ್)
ಅತ್ಯುತ್ತಮ ಕಥೆ - ಅಮಿತ್ ರಾಯ್ (OMG-2)
ಅತ್ಯುತ್ತಮ ಚಿತ್ರಕಥೆ - ವಿಧು ವಿನೋದ್ ಚೋಪ್ರಾ (12th ಫೇಲ್)
ಅತ್ಯುತ್ತಮ ಸಂಭಾಷಣೆ - ಇಶಿತಾ ಮೊಯಿತ್ರಾ (ರಾಖಿ ಔರ್ ರಾಣಿಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಸೌಂಡ್ ವಿನ್ಯಾಸ - ಕುನಾಲ್ ಶರ್ಮ(ಸಾಮ್ ಬಹದೂರ್), ಸಿಂಕ್ ಸಿನಿಮಾ(ಯಾನಿಮಲ್)
ಅತ್ಯುತ್ತಮ ಬ್ಯಾಕ್‌ ಗ್ರೌಂಡ್ ಸ್ಕೋರ್ - ಹರ್ಷವರ್ಧನ್ ರಾಮೇಶ್ವರ್ (ಅಮಲ್)
ಅತ್ಯುತ್ತಮ ನಿರ್ಮಾಣ ವಿನ್ಯಾಸ - ಸುಬ್ರತಾ ಚಕ್ರವರ್ತಿ, ಅಮಿತ್ ರೇ(ಸಾಮ್ ಬಹದೂರ್)
ಅತ್ಯುತ್ತಮ VFX - ರೆಡ್ ಚಿಲ್ಲಿಸ್(ಜವಾನ್)
ಅತ್ಯುತ್ತಮ ಎಡಿಟಿಂಗ್ರ್ ಸಿಂಗ್, ವಿಧು ವಿನೋದ್ ಚೋಪ್ರಾ(12th ಫೇಲ್)
ಅತ್ಯುತ್ತಮ ವಸ್ತ್ರ ವಿನ್ಯಾಸ - ಸಚಿನ್ ಲೋವೆಲ್ಕರ್, ದಿವ್ಯ ಗಂಭೀರ್, ನಿಧಿ ಗಂಭೀರ್ (ಸಾಮ್ ಬಹದೂರ್)
ಅತ್ಯುತ್ತಮ ಸಿನಿಮಾಟೋಗ್ರಫಿ - ಅವಿನಾಶ್ ಅರುಣ್ (ತ್ರಿ ಆಫ್ ಅಜ್)
ಬೆಸ್ಟ್ ಕೊರಿಯೋಗ್ರಫಿ - ಗಣೇಶ್ ಆಚಾರ್ಯ(ವಾಟ್ ಜುಂಖಾ - ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಆಕ್ಷನ್ - ಜವಾನ್

More from Filmibeat

English summary
Filmfare Awards 2024: Here is the complete list of winners;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X