'ಈ' ನಟಿ ಇದ್ದರೆ ಖಂಡಿತ ಬಯೋಪಿಕ್ ನಲ್ಲಿ ನಟಿಸುವುದಾಗಿ ಹೇಳಿದ ವಿರಾಟ್ ಕೊಹ್ಲಿ
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಿನಿಮಾದಲ್ಲಿ ಬಣ್ಣಹಚ್ಚಲು ರೆಡಿ ಎಂದು ಹೇಳಿದ್ದಾರೆ. ಅಂದ್ರೆ ವಿರಾಟ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ರಾ? ಅಂತ ಅಚ್ಚರಿ ಪಡಬೇಡಿ. ವಿರಟ್ ತಮ್ಮ ಜೀವನ ಆಧಾರಿತ ಸಿನಿಮಾದಲ್ಲಿ ಖುದ್ದು ತಾವೆ ನಟಿಸುವುದಾಗಿ ಹೇಳಿದ್ದಾರೆ. ಜೊತೆಗೆ ಒಂದು ಷರತ್ತನ್ನು ಹಾಕಿದ್ದಾರೆ.
Recommended Video
ಇತ್ತೀಚಿಗೆ ವಿರಾಟ್ ಕೊಹ್ಲಿ ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಜೊತೆ ಇನ್ಸ್ಟಾಗ್ರಾಮ್ ಲೈವ್ ಚಾಟ್ ನಲ್ಲಿ ಮಾತನಾಡಿದ್ದರು. ಈ ವೇಳೆ ವಿರಾಟ್ ಬಯೋಪಿಕ್ ವಿಚಾರ ಚರ್ಚೆಗೆ ಬಂದಿದೆ. ಸುನಿಲ್ ಕೇಳಿದ ಪ್ರಶ್ನೆಗೆ ವಿರಾಟ್ 'ಖಂಡಿತ ನಟಿಸುತ್ತೇನೆ ಎಂದಿದ್ದಾರೆ. ಆದರೆ ಪತ್ನಿ ಅನುಷ್ಕಾ ಶರ್ಮಾ ಸಹ ಇರಬೇಕು ಎಂದು ಹೇಳಿದ್ದಾರೆ. ಮುಂದೆ ಓದಿ...

ಅನುಷ್ಕಾ ಇದ್ದರೆ ಖಂಡಿತ ನಟಿಸುತ್ತೇನೆ
"ಅನುಷ್ಕಾ ಇದ್ದರೆ ನನ್ನ ಪಾತ್ರದಲ್ಲಿ ನಾನೆ ನಟಿಸುತ್ತೇನೆ. ಆದರೆ ನಾನು ನಟಿಸುತ್ತೇನೆ ಎಂದು ತಪ್ಪು ತಿಳಿದುಕೊಂಡಿದ್ದಾರೆ. ನಾನು ಫುಟ್ ಬಾಲ್ ಸಹ ಆಡುತ್ತೇನೆ, ನೀವು ನನ್ನನ್ನು ಐ ಎಸ್ ಎಲ್ ನಲ್ಲಿ ಆಡಲು ಅವಕಾಶ ಮಾಡಿಕೊಡುವಿರಾ?" ಎಂದು ಛೆಟ್ರಿ ಅವರನ್ನು ಕೇಳಿದ್ದಾರೆ. ವಿರಾಟ್ ಪ್ರಶ್ನೆಗೆ ಫುಟ್ಬಾಲ್ ಆಟಗಾರ ಯಾವುದೆ ಪ್ರತಿಕ್ರಿಯೆ ನೀಡದೆ ನಕ್ಕು ಸುಮ್ಮನಾಗಿದ್ದಾರೆ.

ನನಗಿಂತ ಚೆನ್ನಾಗಿ ಬೇರೆಯವರು ನಟಿಸಿದರೆ ಅವರೆ ಮಾಡಲಿ
"ನಾನು ನನ್ನ ಬಯೋಪಿಕ್ ನಲ್ಲಿ ನಟಿಸುತ್ತೇನೆ. ನನ್ನ ಪಾತ್ರವನ್ನು ನಾನು ಚೆನ್ನಾಗಿ ಮಾಡಬಲ್ಲೆ ಎಂದು ಭಾವಿಸಿದ್ದೇನೆ. ಆದರೆ ನನಗಿಂತ ಚೆನ್ನಾಗಿ ಬೇರೆಯವರು ಈ ಪಾತ್ರವನ್ನು ನಿರ್ವಹಿಸಿದರೆ ಖಂಡಿತ ಅವರೇ ಮಾಡಬಹುದು" ಎಂದು ಹೇಳಿದ್ದಾರೆ.

ಜನರಲ್ಲಿ ನನ್ನ ಬಗ್ಗೆ ತಪ್ಪು ತಿಳುವಳಿಕೆ ಇದೆ
"ನಾನು ಅಭಿನಯಿಸುತ್ತೇನೆ ಎಂದು ಜನರಿಗೆ ತಪ್ಪು ತಿಳುವಳಿಗೆ ಇದೆ. ಜಾಹಿರಾತಿನಲ್ಲಿ ನನ್ನ ನೋಡಿ ಅನೇಕರು ಹೀಗೆ ತಿಳಿದುಕೊಂಡಿದ್ದಾರೆ. ಜಾಹಿರಾತಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವುದನ್ನು ಯಾರು ಬೇಕಾದರು ಮಾಡುತ್ತಾರೆ. ಅಭಿನಯ ಎನ್ನುವುದು ಒಂದು ಕಲೆ. ನಾನು ವೃತ್ತಿಪರ ಕ್ರಿಕೆಟಿಗ" ಎಂದು ವಿರಾಟ್ ಹೇಳಿದ್ದಾರೆ.

ಪತ್ನಿಯನ್ನು ಹಾಡಿಹೊಗಳಿದ ವಿರಾಟ್
ಇನ್ನೂ ಪತ್ನಿ ಅನುಷ್ಕಾ ಅವರನ್ನು ಲೈವ್ ನಲ್ಲಿ ಹಾಡಿಹೊಗಳಿದ್ದಾರೆ. "ನನ್ನ ವ್ಯಕ್ತಿತ್ವ ರೂಪಿಸಲು ಪತ್ನಿ ಅನುಷ್ಕಾ ಬಹಳ ನೆರವಾಗಿದ್ದಾರೆ. ನಾನು ಮೊದಲು ಹೀಗೆ ಇರಲಿಲ್ಲ. ಅನುಷ್ಕಾ ಸಿಕ್ಕ ಮೇಲೆ ಪ್ರತಿಯೊಂದು ವಿಚಾರವೂ ನನ್ನೊಬ್ಬನ ಬಗ್ಗೆ ಮಾತ್ರವಲ್ಲ ಎಂಬುದು ನನಗೆ ತಿಳಿಯಿತು" ಎಂದು ಪತ್ನಿಯ ಬಗ್ಗೆಯು ಹೇಳಿದ್ದಾರೆ.


Click it and Unblock the Notifications