ಅವಳ ಬಟ್ಟೆಗಳ ಜೊತೆ ಸಿಕ್ಕಿಬಿದ್ದ ನಟ ಸಲ್ಮಾನ್ ಖಾನ್
ಬಾಲಿವುಡ್ ನಲ್ಲಿ ಬ್ಯಾಡ್ ಬಾಯ್ ಎಂದು ಕರೆಸಿಕೊಂಡಿರುವ ನಟ ಸಲ್ಮಾನ್ ಖಾನ್ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಮುಂಬೈನಿಂದ ಹೈದರಾಬಾದ್ ಏರ್ ಫೋರ್ಟ್ ಗೆ ಬಂದಿಳಿದಾಗ ಅಧಿಕಾರಿಗಳು ಅವರ ಬ್ಯಾಗನ್ನು ಚೆಕ್ ಮಾಡಿದ್ದಾರೆ. ಅದರಲ್ಲಿ ಮಹಿಳೆಯರ ಬಟ್ಟೆ ಬರೆ ಪತ್ತೆಯಾಗಿವೆ...
ಶಾಖ್ ಆದ ಅಧಿಕಾರಿಗಳು ಸಲ್ಲು ಅವರನ್ನು ಅನುಮಾನಾಸ್ಪದವಾಗಿ ಅಡಿಯಿಂದ ಮುಡಿಯವರೆಗೆ ನೋಡಿದ್ದಾರೆ. ಸಲ್ಲು ಕೂಡ ಅಷ್ಟೇ ಅಧಿಕಾರಿಗಳನ್ನು ವಿಚಿತ್ರವಾಗಿ ನೋಡಿದ್ದಾನೆ. ಅಯ್ಯೋ ಈ ಬಟ್ಟೆಗಳು ನಮ್ದುಕೆ ಬ್ಯಾಗ್ ಮೆ ಹೇಗೆ ಬಂದವೋ ಮಾಲುಮ್ ನೈ ಎಂದು ಗೋಣು ಅಲ್ಲಾಡಿಸಿದ್ದಾರೆ.
ಕೂಡಲೆ ಅಲ್ಲಿಗೆ ಆಗಮಿಸಿದ ಸಲ್ಮಾನ್ ಖಾನ್ ಸಹಾಯಕರು. "ಸಾರ್ ಗಲ್ತಿ ಹೋಗಯಾ ಹೈ..." ಎಂದಿದ್ದಾರೆ. ಕ್ಯಾ ಹೋಗಯಾ ಅಂದ್ರೆ ಯಾರದೋ ಮಹಿಳೆಯೊಬ್ಬರ ಅದೇ ರೀತಿಯ ಬ್ಯಾಗು ಅದಲು ಬದಲಾಗಿದೆ. ಸಲ್ಲು ಬ್ಯಾಗು ಆಕೆಯ ಕೈಗೆ ಹೋದರೆ, ಆಕೆಯ ಬ್ಯಾಗು ಸಲ್ಲು ಕೈಗೆ ಬಂದಿದೆ.
ಏರ್ ಫೋರ್ಟ್ ನಲ್ಲಿ ಕನ್ವೇಯರ್ ಬೆಲ್ಟ್ ಮೇಲೆ ಬಂದ ಇಬ್ಬರ ಬ್ಯಾಗುಗಳು ಕೈ ಬದಲಾಗಿವೆ. ಕೂಡಲೆ ಸಲ್ಲು ಬ್ಯಾಗನ್ನು ಹುಡುಕಲಾಗಿ ಆಕೆ ಆಗಲೇ ಏರ್ ಫೋರ್ಟ್ ಬಿಟ್ಟಾಗಿತ್ತು. ಅಧಿಕಾರಿಗಳ ಬಳಿ ಆಕೆಯ ಮೊಬೈಲ್ ಫೋನ್ ಇತ್ತು ಬಿಡಿ. ಕೂಡಲೆ ಆಕೆಗೆ ಕರೆ ಮಾಡಿ ಬ್ಯಾಗಿನ ವಿಚಾರ ತಿಳಿಸಿದ್ದಾರೆ.
ಒಟ್ಟಲ್ನಿ ಸಲ್ಮಾನ್ ಖಾನ್ ದೊಡ್ಡ ಗಂಡಾಂತರದಿಂದ ಬಚಾವ್ ಆಗಿದ್ದಾರೆ! ಇಲ್ಲದಿದ್ದರೆ ಇನ್ನೇನಾಗುತ್ತಿತ್ತೋ ಏನೋ? ತಮ್ಮ 'ದಬಾಂಗ್ 2' ಚಿತ್ರದ ಪ್ರಚಾರಕ್ಕಾಗಿ ಸಲ್ಮಾನ್ ಖಾನ್ ಹೈದರಾಬಾದಿಗೆ ಆಗಮಿಸಿದ್ದರು. ಡಿಸೆಂಬರ್ 21ರಂದು ಈ ಚಿತ್ರ ತೆರೆಕಾಣುತ್ತಿದೆ. ಸೋನಾಕ್ಷಿ ಸಿನ್ಹಾ, ಕತ್ರಿನಾ ಕೈಫ್, ಮಲೈಕಾ ಅರೋರಾ, ಸಂಜಯ್ ದತ್ ಚಿತ್ರದ ತಾರಾಗಣದಲ್ಲಿದ್ದಾರೆ. (ಏಜೆನ್ಸೀಸ್)


Click it and Unblock the Notifications











