ಒತ್ತಡ ಇಲ್ಲದೇ ಇದ್ದರೆ ಯಾವ ವಯಸ್ಸಲ್ಲೂ ಗರ್ಭ ಧರಿಸಬಹುದು: ಕರೀನಾ ಕಪೂರ್
''ಮದುವೆ ಆಗೋ ವಯಸ್ಸಲ್ಲಿ ಮದುವೆ ಆಗಬೇಕು, ಮಕ್ಕಳು ಮಾಡ್ಕೊಳ್ಳೋ ಟೈಮ್‌ನಲ್ಲಿ ಮಕ್ಕಳು ಮಾಡ್ಕೊಬೇಕು...'' ಅಂತ ಹಿರಿಯರು ಹೇಳುತ್ತಿರುತ್ತಾರೆ. ಮದುವೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಮದುವೆ ಆಗದೇ ಇದ್ದರೆ ಮುಂದೆ ಸಮಸ್ಯೆಗಳು ಆಗಬಹುದು ಎಂಬ ಕಾರಣಕ್ಕೆ ಹಿಂದಿನ ಕಾಲದಿಂದಲೂ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ತರಾತುರಿಯಲ್ಲಿ ಮದುವೆ ಮಾಡಿ ಬಿಡುತ್ತಾರೆ. ಹೀಗೆ ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡಿಸುವವರಿಗೆ ಬಾಲಿವುಡ್ ನಟಿ ಕರೀನಾ ಕಪೂರ್ ಕಿವಿ ಮಾತೊಂದನ್ನ ಹೇಳಿದ್ದಾರೆ. ಹಾಗೆ ತಡವಾಗಿ ಗರ್ಭಧರಿಸುವವರಿಗೂ ಟಿಪ್ಸ್‌ಗಳನ್ನು ನೀಡಿದ್ದಾರೆ.
ಬಾಲಿವುಡ್ ಬೆಬೊ ಕರೀನಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಇರುತ್ತಾರೆ. ತಮಗೆ ಅನ್ನಿಸೋ ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಅವರು ಇತ್ತೀಚೆಗೆ ತಡವಾಗಿ ಗರ್ಭಧರಿಸುವ ಬಗ್ಗೆ ಸಂದರ್ಶನ ಒಂದಲ್ಲಿ ಮಾತನಾಡಿದ್ದಾರೆ. ಕರೀನಾ ಕಪೂರ್ ಈಗ 2 ಮಕ್ಕಳ ತಾಯಿ. ತನ್ನ 39ನೇ ವಯಸ್ಸಿಗೆ ಮೊದಲ ಪುತ್ರನಿಗೆ ಕರೀನಾ ಜನ್ಮ ನೀಡಿದ್ದಾರೆ. ಹಾಗೇ ಎರಡನೇ ಪುತ್ರ ಜಹಂಗೀರ್ ಆಲಿ ಖಾನ್‌ಗೆ ತನ್ನ 40ನೇ ವಯಸ್ಸಿನಲ್ಲಿ ಜನ್ಮ ನೀಡಿದ್ದಾರೆ. ಹೀಗೆ ಎರಡು ಮಕ್ಕಳಿಗೂ ತಡವಾಗಿ ಜನ್ಮ ನೀಡಿದರ ಅನುಭವ ಇರುವ ಕರೀನಾ ಕಪೂರ್ ಇದು ಹೇಗೆ ಸಾಧ್ಯವಾಯಿತು ಅನ್ನೋದರ ಬಗ್ಗೆ ಮಾಹಿತಿ ನೀಡೋದರ ಜೊತೆಗೆ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಕಿವಿಮಾತೊಂದನ್ನು ನೀಡಿದ್ದಾರೆ.
"ನಿರ್ದಿಷ್ಟ ವಯಸ್ಸಿನ ಒಳಗೆ ಗರ್ಭಧರಿಸಬೇಕು ಎಂಬ ಒತ್ತಡ ಯಾರು ಇಟ್ಟುಕೊಳ್ಳಬಾರದು. ನನಗೆ 36 ವರ್ಷ ಆಗಿತ್ತು, ಆದರೆ ವಯಸ್ಸಾಗುತ್ತಿದೆ ಎಂದು ನಾನು ಮದುವೆ ನಿರ್ಧಾರ ಮಾಡಿಲ್ಲ. ನಾನು ಮತ್ತು ಸೈಫ್ ಅಲಿ ಖಾನ್ ಪ್ರೀತಿಸುತ್ತಿದ್ದೆವು. ಮದುವೆ ಆಗಬೇಕು ಎನ್ನಿಸಿದಾಗ ಮದುವೆಯಾಗಿದ್ದು. ಮದುವೆಯಾದ್ಮೇಲೆ ಮಗು ಮಾಡಿಕೊಳ್ಳಬೇಕು ಎನಿಸಿದಾಗ ಮಾಡಿಕೊಂಡ್ವಿ. ಹೀಗಾಗಿ, ವಿಳಂಬವಾಗಿ ತಾಯಿಯಾಗುವವರು ಈ ಒತ್ತಡ ಸಹಿಸಿಕೊಳ್ಳುವ ಅಗತ್ಯವಿಲ್ಲ,'' ಎಂದು ನಟಿ ಕರೀನಾ ಕಪೂರ್ ಖಾನ್ ಹೇಳಿದ್ದಾರೆ.

ಹಾಗೇ ಮಾತು ಮುಂದುವರೆಸಿ, ನಾನು ತುಂಬ ಸಮಯವನ್ನು ವಿಭಜಿಸುತ್ತೇನೆ. ಯಾವುದಕ್ಕೆ ಸಮಯ ಕೊಡಬೇಕು ಅಲ್ಲಿ ಸಮಯವನ್ನು ಮೀಸಲಿಟ್ಟಿರುತ್ತೇನೆ. ನಾನು ತಾವಾಗಿ ನನ್ನಿಬ್ಬರು ಮಕ್ಕಳಿಗೆ ಜನ್ಮ ನೀಡಿದರು ಕೂಡ ತಲೆಕೆಡಿಸಿಕೊಂಡಿರಲಿಲ್ಲ. ಶಾಂತವಾಗಿ ಆ ಪರಿಸ್ಥಿತಿಯನ್ನು ನಿಭಾಯಿಸಿದ್ದೆ. ನಾವು ಮಾಡುವ ಕೆಲಸ ಬಿಟ್ಟು ಬೇರೆ ಯೋಜನೆಗಳು ಇಂತ ಸಂದರ್ಭದಲ್ಲಿ ನಮ್ಮನ್ನು ಕಾಡದ ತರಹ ನಾವು ನೋಡಿಕೊಳ್ಳಬೇಕು. ಮನಸ್ಸು ನೆಮ್ಮದಿಯಿಂದ ಇದ್ದರೆ ನೀವು ಯಾವ ವಯಸ್ಸಿನಲ್ಲಿ ಆದರೂ ಮಕ್ಕಳಿಗೆ ಜನ್ಮ ನೀಡಬಹುದು, ಅದಕ್ಕೆ ಸಾಕ್ಷಿ ನಾನೇ ಎಂದಿದ್ದಾರೆ. ಹೀಗಾಗಿ ಹೆಣ್ಣು ಮಕ್ಕಳು ಮೊದಲು ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಿ, ಮದುವೆ ಆಗಬೇಕು ಎಂದು ನೀವು ತಯಾರಾದಾಗ ಮಾತ್ರ ಮದುವೆ ಆಗಿ. ಹೊರತಾಗಿ ಯಾರ ಒತ್ತಡಕ್ಕೂ ಮಣಿದು ಮದುವೆ ಆಗಬೇಡಿ. ಮತ್ತು ಮಕ್ಕಳು ಮಾಡಿಕೊಳ್ಳಬೇಡಿ. ಎಲ್ಲದಕ್ಕೂ ಮನಸ್ಸು ಸಿದ್ಧವಾಗಿರಬೇಕು ಎಂದಿದ್ದಾರೆ.
ಸಿನಿಮಾ ಮತ್ತು ಕುಟುಂಬ ಎರಡನ್ನು ಸಮನಾಗಿ ನಿಭಾಯಿಸುತ್ತಿರುವ ಕರೀನಾರನ್ನು ಸಾಕಷ್ಟು ಮಹಿಳೆಯರು ಸೋಶಿಯಲ್ ಮೀಡಿಯಾದಲ್ಲಿ ಅನುಸರಿಸುತ್ತಿದ್ದಾರೆ. ಅವರ ಗೈಡೆನ್ಸ್‌ಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಗರ್ಭಧರಿಸಿದ್ದ ಸಂದರ್ಭದಲ್ಲಿ ಹೇಗೆ ವ್ಯಾಯಾಮ ಮಾಡಬೇಕು, ಆಹಾರ ಏನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಕರೀನಾ ಕಪೂರ್ ಆಗಾಗ ತಿಳಿಸುತ್ತಿರುತ್ತಾರೆ.

ಇನ್ನು ನಟಿ ಕರೀನಾ ಕಪೂರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮುಂದಿನ ವರ್ಷ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಜೊತೆಗೆ ಬಾಲಿವುಡ್‌ನ ಹಾರರ್ ಸಿನಿಮಾ ಒಂದಕ್ಕೂ ಕರೀನಾ ಕಪೂರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.ಹೆಚ್ಚು ಸಿನಿಮಾ ಕಥೆಗಳು ಕರೀನಾರನ್ನ ಅರಸಿ ಬಂದರೂ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಸಮಯ ಬೇಕು ಎಂದು ಆಯ್ದ ಚಿತ್ರಗಳಲ್ಲಿ ಅಷ್ಟೆ ಕರೀನಾ ಅಭಿನಯಿಸುತ್ತಿದ್ದಾರೆ.


Click it and Unblock the Notifications











