twitter
    For Quick Alerts
    ALLOW NOTIFICATIONS  
    For Daily Alerts

    ಮನೆಗೆಲಸ ಬಿಟ್ಟು ಹೊರಗೆ ಬಂದಿದ್ದರಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದೆ: ಮುಖೇಶ್ ಖನ್ನಾ

    |

    ಶಕ್ತಿಮಾನ್ ಪಾತ್ರದಿಂದ ಖ್ಯಾತಿ ಗಳಿಸಿದ್ದ ನಟ ಮುಖೇಶ್ ಖನ್ನಾ, ಇತ್ತೀಚೆಗೆ ತಮ್ಮ ಬಿಡುಬೀಸು ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಕಪಿಲ್ ಶರ್ಮಾ ಶೋ, ಲಕ್ಷ್ಮಿ ಬಾಂಬ್ ವಿವಾದ, ಹಿಂದು-ಮುಸ್ಲಿಂ ಹೀಗೆ ಹಲವು ವಿಷಯಗಳ ಬಗ್ಗೆ ಅವರು ಮಾತನಾಡುತ್ತಲೇ ಇರುತ್ತಾರೆ.

    ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಹಿಳೆಯರ ಬಗ್ಗೆ, ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ (ಮೀಟೂ) ಬಗ್ಗೆ ಮುಖೇಶ್ ಖನ್ನಾ ಮಾತನಾಡಿದ್ದು, ಅವರ ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.

    ಮುಖೇಶ್ ಖನ್ನಾ ಪ್ರಕಾರ, ಮನೆ ಕೆಲಸ ಮಾಡುವುದಷ್ಟೆ ಮಹಿಳೆಯರ ಕರ್ತವ್ಯವಂತೆ, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆಗುತ್ತಿರುವುದು ವಿಶೇಷವಾಗಿ ಮೀಟೂ ಆರಂಭವಾಗಿದ್ದು, ಮಹಿಳೆ ಮನೆಗೆಲಸ ಬಿಟ್ಟು ಹೊರಗೆ ಬಂದಿದ್ದೇ ಕಾರಣವಂತೆ.

    ಮನೆಗೆಲಸ ಮಾಡುವುದು ಮಹಿಳೆಯರ ಕರ್ತವ್ಯ: ಮುಖೇಶ್

    ಮನೆಗೆಲಸ ಮಾಡುವುದು ಮಹಿಳೆಯರ ಕರ್ತವ್ಯ: ಮುಖೇಶ್

    ಮಹಿಳೆಯರ ಬಗ್ಗೆ ಮುಖೇಶ್ ಖನ್ನಾ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದ್ದು, ಮುಖೇಶ್ ಮಾತುಗಳಿಗೆ ಭಾರಿ ವಿರೋಧವೂ ವ್ಯಕ್ತವಾಗಿದೆ. ವಿಡಿಯೋದಲ್ಲಿ ಮುಖೇಶ್ ಖನ್ನಾ, ಮನೆಗೆಲಸ ಮಾಡುವುದು ಮಹಿಳೆಯರ ಆಧ್ಯ ಕರ್ತವ್ಯ ಎಂದಿದ್ದಾರೆ.

    ಮಹಿಳೆಯರು ಬೇರೆ ಪುರುಷರು ಬೇರೆ, ಇಬ್ಬರೂ ಸಮರಲ್ಲ: ಮುಖೇಶ್

    ಮಹಿಳೆಯರು ಬೇರೆ ಪುರುಷರು ಬೇರೆ, ಇಬ್ಬರೂ ಸಮರಲ್ಲ: ಮುಖೇಶ್

    ಸಮಸ್ಯೆ ಶುರುವಾಗಿದ್ದು, ಮಹಿಳೆಯು ತಾನು ಪುರುಷರಂತೆ ಕೆಲಸ ಮಾಡಲು ಹೊರಗೆ ಬಂದಾಗ, ಆವಾಗಲೇ ಈ ಮೀಟೂ ಎಲ್ಲಾ ಪ್ರಾರಂಭವಾಗಿದ್ದು, ಮಹಿಳೆ ಬೇರೆ ಪುರುಷರು ಬೇರೆ ಎಂದಿದ್ದಾರೆ ಮುಖೇಶ್ ಖನ್ನಾ. ಶಕ್ತಿಮಾನ್ ನಟನ ಪ್ರಕಾರ, ಮಹಿಳೆಯರು ಪುರುಷರಿಗೆ ಸರಿಸಮನರಲ್ಲ.

    ಮಕ್ಕಳಿಗೆ ತಾಯಿ ಸಿಗುವುದಿಲ್ಲ: ಮುಖೇಶ್

    ಮಕ್ಕಳಿಗೆ ತಾಯಿ ಸಿಗುವುದಿಲ್ಲ: ಮುಖೇಶ್

    ಮುಂದುವರೆದು ಮಾತನಾಡಿರುವ ಮುಖೇಶ್ ಖನ್ನಾ, ಮಹಿಳೆಯರು ಕೆಲಸಕ್ಕೆ ಹೋಗುವುದರಿಂದ ಅದರ ಪರಿಣಾಮ ಆಗುವುದು ಮಕ್ಕಳ ಮೇಲೆ. ಮಕ್ಕಳಿಗೆ ತಾಯಿ ಸಿಗುವುದಿಲ್ಲ, ಮಕ್ಕಳು ಅಜ್ಜಿ-ತಾತನ ಜೊತೆ ಕೂತು ಅತ್ತೆ-ಸೊಸೆ ಧಾರಾವಾಹಿ ನೋಡುತ್ತಿರುತ್ತಾರೆ ಎಂದಿದ್ದಾರೆ ಮುಖೇಶ್ ಖನ್ನಾ.

    ಲಕ್ಷ್ಮಿ ಬಾಂಬ್ ಸಿನಿಮಾದ ವಿರುದ್ಧ ಆರೋಪ ಮಾಡಿದ್ದರು

    ಲಕ್ಷ್ಮಿ ಬಾಂಬ್ ಸಿನಿಮಾದ ವಿರುದ್ಧ ಆರೋಪ ಮಾಡಿದ್ದರು

    ಕೆಲವು ದಿನಗಳ ಹಿಂದಷ್ಟೆ ಇದೇ ಮುಖೇಶ್ ಖನ್ನಾ, ಲಕ್ಷ್ಮೀ ಬಾಂಬ್ ಸಿನಿಮಾದ ಬಗ್ಗೆ ಮಾತನಾಡಿದ್ದರು. ಇವರಿಗೆ ತಾಖತ್ ಇದ್ದರೆ ಅಲ್ಲಾ ಬಾಂಬ್ ಎಂಥಲೋ, ಇಡಿಯಟ್ ಜೀಸಸ್ ಎಂಥಲೋ ತಮ್ಮ ಸಿನಿಮಾಕ್ಕೆ ಹೆಸರಿಡಲಿ ನೋಡೋಣ ಎಂದು ಸವಾಲು ಎಸೆದಿದ್ದರು.

    English summary
    Actor Mukesh Khanna said Women were ment to be work in Kitchen. They come out for work like men so this me too all started.
    Friday, November 6, 2020, 15:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X