ಸಲ್ಮಾನ್ ಖಾನ್ ಆಪ್ತ ನದೀಮ್ ಜೊತೆ ವಿಚ್ಚೇದಿತ ನಟಿಯ ಸಂಬಂಧ ; ಕೆಂಡಾಮಂಡಲವಾದ ಸಲ್ಲು ಸಹೋದರಿ ಅರ್ಪಿತಾ

ನಿಜಾ ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು ಹೋಗುವುದಿಲ್ಲ.

ಹಾಗಂಥ ಪದೇ ಪದೇ ಕೆಣಕಿದರೆ ಕೆಲವರು ಸುಮ್ಮನೆ ಕೂಡ ಇರುವುದಿಲ್ಲ. ಪಿತ್ತ ನೆತ್ತಿಗೇರಿ ತರಾಟೆಯನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಕಾಲೆಳೆಯುತ್ತಿರುವವರ ವಿರುದ್ಧ ಕೆಂಡ ಕಾರುತ್ತಾರೆ. ಸದ್ಯ ಮಹಿ ವಿಜ್ ವಿಚಾರದಲ್ಲಿ ಇದೇ ಆಗಿದೆ. ಹೌದು, ಮಹಿ ವಿಜ್.. ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರು. ''ಲಾಗಿ ತುಜಸೇ ಲಗನ್''.. ''ಬಾಲಿಕಾ ವಧು''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಮಹಿ ವಿಜ್, ''ನಚ್ ಬಲಿಯೇ ಸೀಸನ್ 5''ರ ವಿನ್ನರ್ ಕೂಡ ಹೌದು. ''ಜಲಕ್ ದಿಖಲಾ ಜಾ''.. ''ಖತ್ರೋನ್ ಕೆ ಖಿಲಾಡಿ'' ಅಂತಹ ರಿಯಾಲಿಟಿ ಶೋನಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ.

Wonder The World We Live In Arpita Khan Sharma DESTROYS Rumours Linking Mahhi Vij amp amp Nadeem Nadz

ಇಂಥಾ ಮಹಿ ವಿಜ್ ಮನಸಾರೆ ಮೆಚ್ಚಿ ಹಿಂದಿ ಕಿರುತೆರೆಯ ಖ್ಯಾತ ನಿರೂಪಕ ಜೈ ಭಾನುಶಾಲಿ ಅವರನ್ನು ಮದುವೆಯಾಗಿದ್ದರು. 2010-11ರ ಆಸು ಪಾಸು ತಮ್ಮ ಕೆಲವೇ ಕೆಲ ಅತ್ಯಾಪ್ತ ಸ್ನೇಹಿತರು ಮತ್ತು ಮನೆಯ ಸದಸ್ಯರ ಎದುರು ಸಪ್ತಪದಿ ತುಳಿದಿದ್ದರು. ಆದರೆ, ಅದೇನಾಯ್ತೋ..? ಈ ವರ್ಷದ ಆರಂಭದಲ್ಲಿಯೇ ಇಬ್ಬರು ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದರು. ಇನ್ಮುಂದೆ ನಾವು ಇಬ್ಬರು ದೂರ ಎಂಬ ಸಂದೇಶವನ್ನು ತಮ್ಮ ತಮ್ಮ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ರವಾನೆ ಮಾಡಿದರು. ಈ ಸುದ್ದಿ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದರು. ಇನ್ನೊಮ್ಮೆ ನಿಮ್ಮ ನಿರ್ಧಾರವನ್ನು ಪರಿಶೀಲಿಸಿ ಎಂಬ ಮನವಿಯನ್ನು ಮಾಡಿಕೊಳ್ಳುತ್ತಿದ್ದರು.

ಹೀಗಿರುವಾಗ ವಿಚ್ಛೇದನ ಘೋಷಿಸಿ ಒಂದು ವಾರದಲ್ಲಿ ಮಹಿ ವಿಜ್ ಮೊನ್ನೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಸಲ್ಮಾನ್ ಖಾನ್ ಅವರ ಆಪ್ತ ಸ್ನೇಹಿತ ನದೀಮ್ ಜೊತೆಗಿನ ಫೋಟೊ ಅದು. ಫೋಟೊ ಹಂಚಿಕೊಂಡು ಎರಡು ದೇಹ ಒಂದೇ ಆತ್ಮ ಎಂದು ಬರೆದಿದ್ದರು. ಎಂದೆಂದಿಗೂ ನನ್ನವನು ಎಂದು ಹೇಳಿದ್ದರು.

ಇಷ್ಟೇ ಅಲ್ಲ ''ಐ ಲವ್ ಯೂ'' ನದೀಮ್ ಎಂದು ಕೂಡ ಬರೆದಿದ್ದ ಮಹಿ ವಿಜ್ ನೀವೇ ನನ್ನ ಆಧಾರ, ನೀವೇ ನನ್ನ ಶಕ್ತಿ, ನೀವೇ ನನ್ನ ಶಾಶ್ವತ ಸಂಗಾತಿ ಎಂದೆಲ್ಲ ಬರೆದುಕೊಂಡಿದ್ದರು. ತಮ್ಮ ಆರು ವರ್ಷದ ಮಗಳು ತಾರಾ, ನದೀಮ್ ಅವರನ್ನು ಅಬ್ಬಾ ಎಂದು ಕರೆಯುತ್ತಾಳೆ ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದರು.

ನೋಡ ನೋಡುತ್ತಾ ಮಹಿ ವಿಜ್ ಅವರ ಈ ಬರಹ ಮತ್ತು ನದೀಮ್ ಜೊತೆಗಿನ ಫೋಟೊ ವೈರಲ್ ಆಗಿತ್ತು. ಹಲವರು ಮಹಿಯ ಮಾಜಿ ಪತಿ ಜೈ ಭಾನುಶಾಲಿಯ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು. ಮಹಿ ವಿರುದ್ಧ ಕೆರಳಿದರು. ಇನ್ನೂ ಕೆಲವರು ಮಹಿ ವಿಜ್ ಅವರ ಚಾರಿತ್ರ್ಯ ಹರಣವನ್ನು ಕೂಡ ಮಾಡಿದರು.

Wonder The World We Live In Arpita Khan Sharma DESTROYS Rumours Linking Mahhi Vij amp amp Nadeem Nadz

ಈ ಎಲ್ಲ ಬೆಳವಣಿಗೆಗಳಿಂದ ತಮ್ಮ ಕುಟುಂಬದ ಸುತ್ತ ಮುತ್ತಈ ವಿವಾದ ಸುತ್ತುತ್ತಿರುವುದರಿಂದ ಈಗ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಕೆರಳಿದ್ದಾರೆ. ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದ ಅರ್ಪಿತಾ ಖಾನ್ ಶರ್ಮಾ, ನದೀಮ್ ನಿಮ್ಮಂತಹವರ ಮೇಲೆಯೂ ಕೂಡ ಈ ತರಹದ ಆರೋಪಗಳನ್ನು ಮಾಡುತ್ತಾರೆ ಅಂದರೆ, ನಾವು ಯಾವ ಲೋಕದಲ್ಲಿ ಬದುಕುತ್ತಿದ್ದೇವೆ ಎಂದು ನನಗೆ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ.

ಈ ಮೂಲಕ ಮಹಿ ವಿಜ್ ಮತ್ತು ನದೀಮ್ ಸಂಬಂಧವನ್ನು ಅನೈತಿಕ ಎನ್ನುವಂತೆ ಬಿಂಬಿಸುತ್ತಿರುವ, ನದೀಮ್‌ಗೋಸ್ಕರ ಜೈ ಭಾನುಶಾಲಿ ಅವರಿಗೆ ಮಹಿ ವಿಜ್ ಡಿವೋರ್ಸ್ ನೀಡಿದ್ದಾರೆ ಎಂದು ಬಿಂಬಿಸುತ್ತಿರುವವರಿಗೆ ಸಲ್ಮಾನ್ ಸಹೋದರಿ ಅರ್ಪಿತಾ ತಿರುಗೇಟು ನೀಡಿದ್ದಾರೆ. ಕೇವಲ ಅರ್ಪಿತಾ ಮಾತ್ರವಲ್ಲ ಮಹಿ ವಿಜ್ ಅವರ ಮೇಲೆ ನಡೆಯುತ್ತಿರುವ ಈ ಸೈಬರ್ ದಾಳಿಯನ್ನು ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಕೂಡ ಖಂಡಿಸಿದ್ದಾರೆ.

Wonder The World We Live In Arpita Khan Sharma DESTROYS Rumours Linking Mahhi Vij amp amp Nadeem Nadz

More from Filmibeat

English summary
Arpita Khan Sharma shuts down dating rumors between Mahhi Vij and Nadeem Nadz. See how Salman Khan’s sister reacted to the viral link-up claims and trolls.
Read more about: divorce breakup
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X