For Quick Alerts
  ALLOW NOTIFICATIONS  
  For Daily Alerts

  ವಂಡರ್‌ಶೆಫ್ ರಾಯಭಾರಿಯಾದ ಬಾಲಿವುಡ್ ನಟಿ ಕೃತಿ ಸನೂನ್

  |

  ಬೆಂಗಳೂರು, ಸೆಪ್ಟೆಂಬರ್ 2021: ದೇಶದಲ್ಲಿನ ಅತ್ಯುತ್ತಮ ಕಿಚನ್‌ವೇರ್‌ ವಂಡರ್‌ಶೆಫ್ ರಾಯಭಾರಿಯಾಗಿ ಬಾಲಿವುಡ್ ಖ್ಯಾತ ನಟಿ ಕೃತಿ ಸನೂನ್ ಅವರನ್ನು ನೇಮಕ ಮಾಡಲಾಗಿದೆ.

  ತನ್ನ ವಿಸ್ತಾರ ಶ್ರೇಣಿಯ ಚಲನಚಿತ್ರಗಳ ಆಯ್ಕೆಗೆ ಖ್ಯಾತಿ ಪಡೆದ ಫಿಟ್‌ನೆಸ್ ಮತ್ತು ಆಹಾರ ಹಾಗೂ ಕುಟುಂಬ ಪ್ರೇಮಕ್ಕೆ ಹೆಸರಾದ ಕೃತಿ ವಂಡರ್‌ಶೆಫ್ ನೊಂದಿಗೆ ಈ ಹೊಸ ಪ್ರಯಾಣ ಪ್ರಾರಂಭಿಸಿದ್ದು ಆರೋಗ್ಯಕ್ಕೆ ಗಮನ ನೀಡುವ ಉಜ್ವಲ ಬ್ರಾಂಡ್ ನಿರ್ಮಿಸುವುದೇ ಅಲ್ಲದೆ ಆವಿಷ್ಕಾರ ಮತ್ತು ಆಧುನಿಕ ಹೊರನೋಟ ಹೊಂದಿದೆ. ಕೃತಿಯಂತೆ ಈ ಬ್ರಾಂಡ್ ಕೂಡಾ ಹಳೆಯ ಪಡಿಯಚ್ಚುಗಳನ್ನು ಮುರಿಯುತ್ತದೆ ಮತ್ತು ಇಂದಿನ ಮಹಿಳೆಯರ ಹೊಸ ಮಾನದಂಡಗಳನ್ನು ಸೃಷ್ಟಿಸುತ್ತದೆ.

  ಪ್ರಭಾಸ್ ನನ್ನು ಮದುವೆ ಆಗ್ತೀನಿ ಎಂದ 'ಆದಿಪುರುಷ್' ನಾಯಕಿ ಕೃತಿ ಸನೂನ್ಪ್ರಭಾಸ್ ನನ್ನು ಮದುವೆ ಆಗ್ತೀನಿ ಎಂದ 'ಆದಿಪುರುಷ್' ನಾಯಕಿ ಕೃತಿ ಸನೂನ್

  ಕೃತಿ ಆರೋಗ್ಯ ಕೇಂದ್ರಿತ, ಆವಿಷ್ಕಾರಕ ಮತ್ತು ಸಮಕಾಲೀನ ಬ್ರಾಂಡ್‌ನ ವಂಡರ್‌ಶೆಫ್ ನ ಮೌಲ್ಯಗಳನ್ನು ಮೈವೆತ್ತಿದ್ದಾರೆ. ವಿವಿಧ ಪ್ರಕಾರಗಳು ಮತ್ತು ಭೌಗೋಳಿಕತೆಗಳನ್ನು ಮೀರಿದ ಅವರು ಭಾರತದಾದ್ಯಂತ ವಿಸ್ತಾರ ಗ್ರಾಹಕರನ್ನು ತಲುಪುವ ಕಂಪನಿಯ ಕಾರ್ಯತಂತ್ರಕ್ಕೆ ಪೂರಕವಾಗಿದ್ದು ಸತತವಾಗಿ ಹೊಸ, ಉತ್ತಮ ಸಾಧನಗಳು ಮತ್ತು ಕುಕ್‌ವೇರ್‌ಗಳೊಂದಿಗೆ ಬರುತ್ತಿದೆ.

  ಈ ಸಹಯೋಗದ ಕುರಿತು ವಂಡರ್‌ಶೆಫ್ ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ರವಿ ಸಕ್ಸೇನಾ, 'ಕೃತಿ ಅವರೊಂದಿಗೆ ಸಹಯೋಗವು ಆರೋಗ್ಯಕರ ಅಡುಗೆ ಕುರಿತು ಹೆಚ್ಚು ಅರಿವನ್ನು ಮೂಡಿಸಲಿದೆ ಮತ್ತು ವಿಸ್ತಾರ ಜನರನ್ನು ತಲುಪಲಿದೆ. ಕೃತಿ ಅವರನ್ನು ನಮ್ಮ ಬ್ರಾಂಡ್ ರಾಯಭಾರಿಯನ್ನಾಗಿ ತೆಗೆದುಕೊಂಡಿರುವುದು ನಮಗೆ ಸಹಜ ಆಯ್ಕೆಯಾಗಿದ್ದು ವಂಡರ್‌ಶೆಫ್ ಕೃತಿಯನ್ನು ಸ್ವಯಂ-ನಿರ್ಮಾಣದ ಸ್ವತಂತ್ರ ವ್ಯಕ್ತಿಯಾಗಿ ಆಧುನಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಮಿಶ್ರಣವಾಗಿ ಕಾಣುತ್ತದೆ. ಅವರ ವ್ಯಕ್ತಿತ್ವದ ವೈವಿಧ್ಯತೆ ಮತ್ತು ಅವರು ಸಂಪರ್ಕದಲ್ಲಿರುವ ಪ್ರೇಕ್ಷಕರ ಚತುರತೆ ಅವರನ್ನು ನಮ್ಮ ಪೊಸಿಷನಿಂಗ್ ಸದೃಢಗೊಳಿಸಿಕೊಳ್ಳಲು ಅವರನ್ನು ಸೂಕ್ತ ಆಯ್ಕೆಯಾಗಿಸಿದೆ. ಅವರು ಗ್ಲಾಮರ್, ಯೂನಿವರ್ಸಲ್ ಅಪೀಲ್ ಮತ್ತು ಸ್ತ್ರೀತನದ ಸ್ಪರ್ಶವನ್ನು ಬ್ರಾಂಡ್‌ಗೆ ನೀಡಿದ್ದಾರೆ' ಎಂದರು.

  ಸಿನಿಮಾ ಗೆದ್ದ ಖುಷಿಯಲ್ಲಿ ದುಬಾರಿ ಕಾರ್ ಖರೀದಿಸಿದ ಪ್ರಭಾಸ್ ನಾಯಕಿಸಿನಿಮಾ ಗೆದ್ದ ಖುಷಿಯಲ್ಲಿ ದುಬಾರಿ ಕಾರ್ ಖರೀದಿಸಿದ ಪ್ರಭಾಸ್ ನಾಯಕಿ

  ತಮ್ಮ ಸಹಯೋಗದ ಕುರಿತು ಕೃತಿ ಸನೂನ್ , 'ನನಗೆ ಬ್ರಾಂಡ್ ಜೊತೆಯಲ್ಲಿ ತಕ್ಷಣದ ಸಂಪರ್ಕವಿದೆ. ಇಂದಿನ ಜಡತ್ವದ ವಿಶ್ವದಲ್ಲಿ ಆರೋಗ್ಯಕರ ಆಹಾರ ಸೇವಿಸುವುದು ಬಹಳ ಮುಖ್ಯ ಮತ್ತು ವಂಡರ್‌ಶೆಫ್ ಮನೆಯಲ್ಲಿ ಆರೋಗ್ಯಕರ ಅಡುಗೆ ಸಾಧ್ಯವಾಗಿಸುವುದೇ ಅಲ್ಲದೆ ಅಡುಗೆ ಮನೆಗೆ ಆಧುನಿಕತೆ ಮತ್ತು ಸ್ಟೈಲ್ ತರುತ್ತದೆ. ಈ ಬ್ರಾಂಡ್ ಪ್ರತಿನಿಧಿಸಲು ನನಗೆ ಬಹಳ ಸಂತೋಷವಾಗಿದೆ. ನಾವು ಏನು ತಿನ್ನುತ್ತೇವೋ ಅದು ನಾವಾಗಿದ್ದೇವೆ ಮತ್ತು ಆರೋಗ್ಯಕರ ತಿನ್ನುವ ಅಭ್ಯಾಸಗಳು ವಂಡರ್‌ಶೆಫ್ ಕುಟುಂಬದ ಭಾಗವಾಗುವುದನ್ನು ನಾನು ನೋಡಲು ಬಯಸುತ್ತಿದ್ದೇನೆ' ಎಂದರು.

  Wonderchef appoints Kriti Sanon as Brand Ambassador

  ಸಾಂಪ್ರದಾಯಿಕವಾಗಿ ಅಡುಗೆ ಎನ್ನುವುದು ಮನೆಯಲ್ಲಿರುವ ಮಹಿಳೆಯ ಕೆಲಸ ಎಂದು ಭಾವಿಸಲಾಗುತ್ತದೆ. ಎಲ್ಲ ಕಿಚನ್‌ವೇರ್ ಬ್ರಾಂಡ್‌ಗಳೂ ಈ ಇಮೇಜ್ ದೃಢಪಡಿಸಿ ಮಹಿಳೆಯರು ಇಡೀ ಕುಟುಂಬ ಮತ್ತು ಅವರ ಮಿತ್ರರಿಗೆ ಅಡುಗೆ ಮಾಡುತ್ತಾರೆ ಎಂದು ತೋರಿಸುತ್ತವೆ, ಆದರೆ ಗಂಡನು ಆಕೆ ಏನನ್ನು ಅಡುಗೆಮನೆಯಲ್ಲಿ ಬಳಸಬೇಕು ಎಂದು ಸೂಚಿಸುವಂತೆ ತೋರಿಸಲಾಗುತ್ತದೆ.

  'ವಂಡರ್‌ಶೆಫ್ ಆಧುನಿಕ ಮತ್ತು ಪ್ರಗತಿಶೀಲ ಬ್ರಾಂಡ್ ಆಗಿದೆ. ನಮ್ಮ ಗ್ರಾಹಕರು ವಿಶಾಲ ಮನೋಭಾವದವರಾಗಿದ್ದು ಲಿಂಗ ಸಮಾನತೆಯನ್ನು ನಂಬುತ್ತಾರೆ. ನಮ್ಮ ಅಭಿಯಾನ ಈ ಪೊಸಿಷನಿಂಗ್ ಅನ್ನು ಹೆಚ್ಚಿಸುತ್ತದೆ ಇದರಲ್ಲಿ ಕೃತಿ ತನ್ನ ಮಿತ್ರನೊಂದಿಗೆ ಬೆರೆತು ಸ್ವಾದಿಷ್ಟ ತಿನಿಸುಗಳನ್ನು ವಂಡರ್‌ಶೆಫ್ ಸಾಧನಗಳನ್ನು ಬಳಸಿ ಸಿದ್ಧಪಡಿಸುತ್ತಾರೆ. ಅವರು ಪೂರ್ಣ ಭೋಜನ ಸಿದ್ಧಪಡಿಸಿದ ನಂತರ ಆತನಿಗೆ 'ವಂಡರ್‌ಶೆಫ್' ಎಂಬ ಹೆಸರನ್ನೂ ನೀಡುತ್ತಾರೆ' ಎಂದರು.

  ಕೃತಿ ಸನೂನ್ ಸಿನಿಮಾಗಳ ವಿಚಾರಕ್ಕೆ ಬಂದ್ರೆ 'ಮಿಮಿ' ಕೊನೆಯದಾಗಿ ಬಿಡುಗಡೆಯಾಗಿದೆ. ಅಕ್ಷಯ್ ಕುಮಾರ್ ಜೊತೆ ಬಚ್ಚನ್ ಪಾಂಡೆ ಸಿನಿಮಾದಲ್ಲಿ ನಟಿಸುಸತ್ತಿದ್ದಾರೆ. ಪ್ರಭಾಸ್ ಜೊತೆ ಆದಿಪುರುಷ್ ಚಿತ್ರದಲ್ಲಿ ಸೀತೆ ಪಾತ್ರ ಮಾಡುತ್ತಿದ್ದಾರೆ.

  English summary
  Finest kitchenware in the country Wonderchef appoints Kriti Sanon as Brand Ambassador.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X