ನಾನು ಹಾಕಿಕೊಂಡಿರುವ ಟ್ಯಾಟೂ ಬಗ್ಗೆ ಇಡೀ ದೇಶಕ್ಕೆ ಗೊತ್ತಾಗಬೇಕೆ?
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನೋಡಲು ಸುಂದರಿ ಮಾತ್ರವಲ್ಲದೆ ತುಂಬಾ ಬುದ್ದಿವಂತೆ ಕೂಡ ಆಗಿದ್ದಾರೆ ಅನ್ನೋದನ್ನ ನೀವು ನಂಬಲೇಬೇಕು. ಅದಕ್ಕೆ ಒಂದು ಉತ್ತಮ ನಿದರ್ಶನ ಅಂದ್ರೆ ಇತ್ತೀಚೆಗೆ ನಡೆದ ಒಂದು ಪ್ರೆಸ್ ಮೀಟ್ ನಲ್ಲಿ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ನಮ್ಮ ಡಿಪ್ಪಿ ಕೊಟ್ಟ ಉತ್ತರ ಸಖತ್ ಬ್ರಿಲಿಯೆಂಟ್ ಆಗಿತ್ತು,
ರಿಪೋರ್ಟರ್ ಒಬ್ಬ ಆಕೆಯ ಕೈಯಲ್ಲಿದ್ದ ಆರ್ ಕೆ (ರಣಬೀರ್ ಕಪೂರ್) ಟ್ಯಾಟೂ ಬಗ್ಗೆ ಕೇಳಿದ ಪ್ರಶ್ನೆಗೆ ಡಿಪ್ಪಿ ಕೊಟ್ಟ ಉತ್ತರಕ್ಕೆ ಆಕೆಗೆ ನೀವು ಕ್ಲ್ಯಾಪ್ ಹೊಡಿಯೋದು ಗ್ಯಾರಂಟಿ.
ಅದೇನಪ್ಪಾ ಅಂದ್ರೆ ಲೀಡಿಂಗ್ ಮ್ಯಾಗಜೀನ್ ಒಂದರ ರಿಪೋರ್ಟರ್ ಒಬ್ಬ ಪ್ರೆಸ್ ಮೀಟ್ ನಲ್ಲಿ ಆರ್.ಕೆ ಟ್ಯಾಟೂ ( ದೀಪಿಕಾ ಹಾಗೂ ರಣಬೀರ್ ಕಪೂರ್ ಅಂದು ಡೇಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಡಿಪ್ಪಿ ಹಾಕಿಸಿಕೊಂಡ ಟ್ಯಾಟೂ) ಬಗ್ಗೆ ಕೇಳಿದಾಗ ದೀಪಿಕಾ ತಿರುಗಿ ಸಖತ್ ಟಾಂಗ್ ನೀಡಿದ್ದಾರೆ.
ರಿಪೋರ್ಟರ್ ಕೇಳಿದ ಪ್ರಶ್ನೆಗೆ ದೀಪಿಕಾ ನೀಡಿದ ಉತ್ತರ ಹೇಗಿತ್ತು ಅಂತೀರಾ? "ಯಾಕೆ ಈ ಟ್ಯಾಟೂ ಬಗ್ಗೆ ಇಡೀ ದೇಶಕ್ಕೆ ತಿಳಿಯಬೇಕಿದೆಯೇ?" ಎಂದು ಬಾಲಿವುಡ್ ಬೆಡಗಿ ಡಿಪ್ಪಿ ಡೈರೆಕ್ಟ್ ಪ್ರಶ್ನೆಗೆ ಡೈರೆಕ್ಟ್ ಉತ್ತರ ನೀಡಿದ್ದಾರೆ.[ವಾವ್!! ಡಿಪ್ಪಿಯ ಸಖತ್ ಹಾಟ್ ಪೋಟೋ ನೋಡಿ]
ಇನ್ನು ಪ್ರೆಸ್ ಮೀಟ್ ನಲ್ಲಿ ತಮ್ಮ ಬಾಲಿವುಡ್ ಸಿನಿ ಜರ್ನಿಯ ಬಗ್ಗೆ ಮಾತನಾಡುತ್ತ "ನಾನು ನಿಜವಾಗ್ಲೂ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಅದೃಷ್ಟ ಮಾಡಿದ್ದೆ. ನಾನು ಯಾವಾಗಲೂ ಏನಾದರೂ ವಿಶೇಷವಾದದನ್ನು ಮಾಡಬೇಕೆಂದು ಅಂದುಕೊಳ್ಳುತ್ತೇನೆ.
ನಾನು ನನ್ನ ಕೆಲಸದಲ್ಲಿ ಯಾಕೆ. ಯಾವಾಗ ಅಂತ ಎಲ್ಲದನ್ನು ಚಾಲೆಂಜಿಂಗ್ ಆಗಿಯೇ ತೆಗೆದುಕೊಳ್ಳುತ್ತೇನೆ ಮತ್ತು ಕೆಲಸದಲ್ಲಿ ನಾನು ಆರೋಗ್ಯಕರ ಟೀಕೆಯನ್ನು ಇಷ್ಟಪಡುತ್ತೇನೆ. ಜೊತೆಗೆ ತುಂಬಾ ಭಾವೋದ್ರಿಕ್ತಳಾಗುತ್ತೇನೆ ಎಂದು ದೀಪಿಕಾ ಪಡುಕೋಣೆ ಅವರು ತಮ್ಮ ಸಿನಿ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ..

ಚಿತ್ರದ ಪ್ರೊಮೋಷನ್ ಕಾರ್ಯಕ್ರಮದಲ್ಲಿ
ಬಾಲಿವುಡ್ ಬೆಡಗಿ ಡಿಪ್ಪಿ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ತಮ್ಮ ಹೊಸ ಚಿತ್ರ 'ತಮಾಷ' ದ ಪ್ರೊಮೋಷನ್ ಕಾರ್ಯಕ್ರಮದಲ್ಲಿ ಮಸ್ತಿ ಮಾಡಿದ್ದು, ಹೀಗೆ.

'ತಮಾಷ' ಚಿತ್ರತಂಡ
ಇಮ್ತೀಯಾಜ್, ನಟಿ ದೀಪಿಕಾ ಹಾಗೂ ನಟ ರಣಬೀರ್ ಕಪೂರ್ 'ತಮಾಷ' ಚಿತ್ರವನ್ನು ಪ್ರೊಮೋಟ್ ಮಾಡಿದ್ದು ಹೀಗೆ.

ದೀಪಿಕಾ-ರಣಬೀರ್
ಬಾಲಿವುಡ್ ಬೆಡಗಿ ದೀಪಿಕಾ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್, ಕಾರ್ಯಕ್ರಮವೊಂದರಲ್ಲಿ ಫೊಟೋ ಗೆ ಹಳೇ ಪ್ರೇಮಿಗಳ ಸಖತ್ ಹಾಟ್ ಫೋಸ್

ರಣಬೀರ್ ಜೊತೆ ದೀಪಿಕಾ
'ತಮಾಷ' ಚಿತ್ರದ ಪ್ರೊಮೋಷನ್ ಕಾರ್ಯಕ್ರಮದಲ್ಲಿ ತಮಾಷೆಯಾಗಿ ಕಂಡು ಬಂದ ಡಿಪ್ಪಿ ಮತ್ತು ರಣಬೀರ್ ಕಪೂರ್.

'ತಮಾಷ' ಮೂವಿ ಸ್ಟಿಲ್
ತಮ್ಮಿಬ್ಬರ ಹೊಸ ಚಿತ್ರ 'ತಮಾಷ'ದಲ್ಲಿ ಮತ್ತೆ ದೀಪಿಕಾ ಹಾಗೂ ರಣಬೀರ್ ಅವರು ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











