WPL 2023: ಮಹಿಳಾ ಐಪಿಎಲ್ ಉದ್ಘಾಟನೆಯಲ್ಲಿ ಕಿಯಾರಾ, ಕೃತಿ ಸೆನನ್ ಮಸ್ತ್ ಡಾನ್ಸ್

ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ ಹದಿನೈದು ವರ್ಷಗಳು ಕಳೆದ ಬಳಿಕ ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ ವರ್ಷನ್ ಅನ್ನು ಆರಂಭಿಸಲಾಗಿದೆ. ಮಹಿಳಾ ಕ್ರಿಕೆಟ್ ದಿನದಿಂದ ದಿನಕ್ಕೆ ಕ್ರೇಜ್ ಪಡೆದುಕೊಳ್ಳುತ್ತಿದ್ದು, ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಮಹಿಳೆಯರ ವರ್ಷನ್ ಅನ್ನು ಆಯೋಜಿಸಿದೆ.

ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ವುಮೆನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವುಮೆನ್, ಡೆಲ್ಲಿ ಕ್ಯಾಪಿಟಲ್ಸ್ ವುಮೆನ್ ಹಾಗೂ ಯುಪಿ ವಾರಿಯರ್ಸ್ ಹೀಗೆ ಒಟ್ಟು ಐದು ತಂಡಗಳು ಈ ಚೊಚ್ಚಲ ವುಮೆನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದಿವೆ.

WPL 2023: Kiara Advani, Kriti Sanon and AP Dhillon entertain the crowd in Opening Ceremony

ಇಂದು ( ಮಾರ್ಚ್ 4 ) ಮುಂಬೈನ ಡಿ ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ವುಮೆನ್ ತಂಡಗಳ ಪಂದ್ಯದ ಮೂಲಕ ಪ್ರಥಮ ಬಾರಿಯ ವುಮೆನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗುತ್ತಿದ್ದು, ಪಂದ್ಯ ಆರಂಭವಾಗುವ ಅದ್ದೂರಿಯಾಗಿ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಗಿದೆ.

ಮೈದಾನದಲ್ಲಿ ನಡೆದ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಯರಾದ ಕಿಯಾರಾ ಅಡ್ವಾಣಿ ಹಾಗೂ ಕೃತಿ ಸೆನನ್ ಹೆಜ್ಜೆ ಹಾಕಿದರೆ, ಖ್ಯಾತ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ತಮ್ಮ ಫೇಮಸ್ ಗೀತೆಗಳನ್ನು ಹಾಡಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಬಡಿಸಿದರು.

WPL 2023: Kiara Advani, Kriti Sanon and AP Dhillon entertain the crowd in Opening Ceremony

ಇತ್ತೀಚೆಗಷ್ಟೆ ನಟ ಸಿದ್ಧಾರ್ಥ್ ಮಲ್ಹೋತ್ರ ಜತೆ ವಿವಾಹವಾಗಿದ್ದ ನಟಿ ಕಿಯಾರಾ ಅಡ್ವಾಣಿ ತನ್ನ ಮದುವೆ ಬಳಿಕ ಶೂಟಿಂಗ್ ಆಗಲಿ ಅಥವಾ ಇತರೆ ಕಾರ್ಯಕ್ರಮಗಳಲ್ಲಿ ಹೆಚ್ಚೇನೂ ಕಾಣಿಸಿಕೊಂಡಿರಲಿಲ್ಲ. ಆದರೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಪುನಃ ಕ್ಯಾಮೆರಾ ಮುಂದೆ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಪಿಂಕ್ ಡ್ರೆಸ್‌ನಲ್ಲಿ ಮಾದಕವಾಗಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ ನೋಡುಗರ ಕಣ್ಮನ ಸೆಳೆದಿದ್ದಾರೆ.

ಇನ್ನು ನಟಿ ಕೃತಿ ಸೆನನ್ ಸಹ ಹಾಟ್ ಆಗಿ ಸ್ಟೆಪ್ಸ್ ಹಾಕಿ ಅಲ್ಲಿನ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಮಿಂಚಿದ ಕೃತಿ ಸೆನನ್ ಕಂಡು ನೆರೆದಿದ್ದ ಕ್ರಿಕೆಟ್ ಪ್ರೇಮಿಗಳು ಶಿಳ್ಳೆ ಹಾಗೂ ಚಪ್ಪಾಳೆ ಮೂಲಕ ನಟಿಯರನ್ನು ಹುರಿದುಂಬಿಸಿದರು. ಇನ್ನು ಈ ಇಬ್ಬರ ಪ್ರದರ್ಶನದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಕಾರ್ಯಕ್ರಮದ ಕುರಿತು ಆನ್‌ಲೈನ್‌ನಲ್ಲಿ ಚರ್ಚೆಗಳೂ ಸಹ ಏರ್ಪಟ್ಟಿದ್ದು, ನೆಟ್ಟಿಗರು ಇಷ್ಟು ಅದ್ದೂರಿಯಾಗಿ ಉದ್ಘಾಟನಾ ಕಾರ್ಯಕ್ರಮ ಜರುಗುತ್ತೆ ಎಂದು ಊಹಿಸಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
WPL 2023: Kiara Advani, Kriti Sanon and AP Dhillon entertain the crowd in Opening Ceremony. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X