ಅಮಿತಾಬ್ ಬಚ್ಚನ್ ಅಭಿಮಾನಿ WWE ಸೂಪರ್ ಸ್ಟಾರ್ ಜಾನ್ ಸೀನ!
ಹಾಲಿವುಡ್ ಹಾಗೂ ಬಾಲಿವುಡ್ ನಡುವೆ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಕೊರೊನಾ ಸಂಕಷ್ಟ ಕಾಲದಲ್ಲಿ ಈ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತಿದೆ. ಅಂದಹಾಗೆ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಮಹಾಮಾರಿ ಕೊರೊನಾ ಹರಡಿದ್ದು, ಬಿಗ್ ಬಿ ಅಭಿಮಾನಿ ಬಳಗ ಶಾಕ್‌ಗೆ ಒಳಗಾಗಿದೆ. ಇನ್ನು ಹಾಲಿವುಡ್ ನಟರು ಕೂಡ ಅಮಿತಾಬ್‌ಗೆ ಸೋಂಕು ದೃಢವಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಇದೀಗ WWE ಸೂಪರ್‌ಸ್ಟಾರ್ ಹಾಗೂ ಹಾಲಿವುಡ್ ನಟ ಜಾನ್ ಸೀನ ಕೂಡ ಬಿಗ್ ಬಿ ಮೇಲಿನ ಅಭಿಮಾನ ಪ್ರದರ್ಶಿಸಿದ್ದಾರೆ.
Recommended Video
ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಅಮಿತಾಬ್ ಹಾಗೂ ಅಭಿಷೇಕ್ ಇರುವ ಫೋಟೋ ಶೇರ್ ಮಾಡಿದ್ದಾರೆ. ವಿಶೇಷ ಅಂದರೆ ಈ ಫೋಟೋಗೆ ಕ್ಯಾಪ್ಷನ್ ಕೊಟ್ಟಿಲ್ಲ. ಇನ್ನು ಬಾಲಿವುಡ್ ಸ್ಟಾರ್‌ಗಳ ಬಗ್ಗೆ ಸೀನ ತೋರಿಸುತ್ತಿರುವ ಪ್ರೀತಿ ಹಾಗೂ ಕಾಳಜಿಗೆ ಬಾಲಿವುಡ್ ಅಭಿಮಾನಿ ಬಳಗ ಫಿದಾ ಆಗಿದೆ. ಯಾಕೆಂದರೆ ಜಾನ್ ಸೀನ ಕೇವಲ ಹಾಲಿವುಡ್‌ನಿಂದ ಖ್ಯಾತರಾದವರಲ್ಲ. ಇದಲ್ಲಕ್ಕಿಂತ ಹೆಚ್ಚಾಗಿ ಜಾನ್ ಸೀನ WWE ಸೂಪರ್‌ಸ್ಟಾರ್. ಭಾರತದಲ್ಲೂ ಜಾನ್‌ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇವರೆಲ್ಲಾ ಜಾನ್ ಸೀನ ಅವರ ಬಾಲಿವುಡ್ ಪ್ರೀತಿ ಕಂಡು ಪುಳಕಿತರಾಗಿದ್ದಾರೆ.

ಜಾನ್ ಸೀನ ಕ್ಯಾಪ್ಷನ್ ಹಾಕಲ್ಲ..!
ಜಾನ್ ಸೀನ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ 14 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ. ತಮಗೆ ವಿಶಿಷ್ಟ ಅನ್ನಿಸಿದ ಫೋಟೋಗಳನ್ನ ಶೇರ್ ಮಾಡುವ ಜಾನ್ ಸೀನ, ಅದಕ್ಕೆ ಯಾವುದೇ ರೀತಿಯ ಕ್ಯಾಪ್ಷನ್ ಹಾಕೋದಿಲ್ಲ. ಇದೇ ರೀತಿ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗಲೂ ಅವರ ಫೋಟೋ ಹಾಕಿದ್ದರು ಜಾನ್ ಸೀನ. ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ನಿಧನಕ್ಕೂ ಅವರು ಇದೇ ರೀತಿಯ ಸಂತಾಪ ಸೂಚಿಸಿದ್ದರು.
ಇದೀಗ ಕೊರೊನಾ ಕೂಪಕ್ಕೆ ಸಿಲುಕಿರುವ ಅಮಿತಾಬ್ ಕುಟುಂಬವನ್ನ ಸೀನ ನೆನಪು ಮಾಡಿಕೊಂಡಿದ್ದಾರೆ. ಜಾನ್ ಸೀನ ಅಪ್‌ಲೋಡ್ ಮಾಡಿರುವ ಅಮಿತಾಬ್ ಹಾಗೂ ಅಭಿಷೇಕ್ ಫೋಟೊವನ್ನ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.

ಇಷ್ಟೆಲ್ಲದರ ಮಧ್ಯೆ ಅಮಿತಾಬ್ ಮಾತ್ರವಲ್ಲದೆ ಪುತ್ರ ಅಭಿಷೇಕ್, ಸೊಸೆ ಐಶ್ವರ್ಯ ರೈ ಹಾಗೂ ಮೊಮ್ಮಗಳು ಆರಾಧ್ಯಾಗೂ ಕೊರೊನಾ ವೈರಸ್ ಇರುವುದು ಖಚಿತವಾಗಿದೆ. ಇನ್ನು ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ತಮ್ಮ ಕುಟುಂಬದ ಬಗ್ಗೆ ಅಭಿಮಾನಿ ಬಳಗ ತೋರಿಸುತ್ತಿರುವ ಪ್ರೀತಿ, ಕಾಳಜಿಗೆ ಅಮಿತಾಬ್ ಬಚ್ಚನ್ ಫಿದಾ ಆಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, ಕಾಳಜಿ ತೋರಿದ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ. ಆದಷ್ಟು ಬೇಗ ಅಮಿತಾಬ್ ಬಚ್ಚನ್ ಕುಟುಂಬ ಕೊರೊನಾ ಗೆದ್ದು ಬರಲಿ ಎನ್ನುವುದು ಅಭಿಮಾನಿಗಳ ಹಾರೈಕೆ.


Click it and Unblock the Notifications











