»   » 'ದಿ ಗ್ರೇಟ್ ಖಲಿ' ಬಗ್ಗೆ ಸಿನಿಮಾ, ರೀಲ್ ನಲ್ಲಿ 'ದೈತ್ಯ ಖಲಿ' ಯಾರು?

'ದಿ ಗ್ರೇಟ್ ಖಲಿ' ಬಗ್ಗೆ ಸಿನಿಮಾ, ರೀಲ್ ನಲ್ಲಿ 'ದೈತ್ಯ ಖಲಿ' ಯಾರು?

Posted By:
Subscribe to Filmibeat Kannada

'ಡಬ್ಲ್ಯೂಡಬ್ಲ್ಯೂಇ' ಸೂಪರ್ ಸ್ಟಾರ್, ಕುಸ್ತಿಪಟು 'ದಿ ಗ್ರೇಟ್ ಖಲಿ' ಅವರ ಜೀವನ ಈಗ ಬಾಲಿವುಡ್ ನಲ್ಲಿ ಸಿನಿಮಾ ರೂಪ ಪಡೆಯುತ್ತಿದೆ. ಈಗಾಗಲೇ ಹಿಂದಿ ಚಿತ್ರರಂಗದಲ್ಲಿ ಅನೇಕ ಕ್ರೀಡಾಪಟುಗಳ ಜೀವನ ಸಿನಿಮಾ ಆಗಿದೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ, ಮೇರಿ ಕೂಮ್ ಸೇರಿದಂತೆ ಹಲವರ ಜೀವನ ತೆರೆಮೇಲೆ ಬಂದಿದೆ. ಈಗ ದಿ ಗ್ರೇಟ್ ಖಲಿಯ ಸರದಿ.

Wwe Superstar The Great Khali Movie in Bollywood

ಅಂದ್ಹಾಗೆ, ಬಿಗ್ ಸ್ಕ್ರೀನ್ ಗ್ರೇಟ್ ಖಲಿ ಆಗಿ ಕಾಣಿಸಿಕೊಳ್ಳಲಿರುವುದು ಬೇರೆ ಯಾರು ಅಲ್ಲ, ಈ ಹಿಂದೆ ರೀಲ್ ನಲ್ಲಿ ಎಂ.ಎಸ್ ಧೋನಿ ಆಗಿದ್ದ ಸುಶಾಂತ್ ಸಿಂಗ್ ರಜ್ ಪೂತ್.

Wwe Superstar The Great Khali Movie in Bollywood

ಧೋನಿ ಪಾತ್ರಕ್ಕಾಗಿ ಪಕ್ಕಾ ತಯಾರಿ ಆಗಿದ್ದ ಸುಶಾಂತ್ ಸಿಂಗ್ ರಜ್ ಪೂತ್, ಈಗ ಗ್ರೇಟ್ ಖಲಿ ಪಾತ್ರಕ್ಕೂ ಕೂಡ ಅದೇ ರೀತಿ ಸಿದ್ದವಾಗಲಿದ್ದಾರೆ ಎನ್ನಲಾಗಿದೆ.

ಅಂದ್ಹಾಗೆ ಖಲಿ 7.1 ಎತ್ತರವಿದ್ದು, 157 ಕೆಜಿ ತೂಕವಿದ್ದಾರೆ. ಗ್ರೇಟ್‌ ಖಲಿಯ ಮೂಲ ಹೆಸರು ದಲೀಪ್ ಸಿಂಗ್‌ ರಾಣಾ. ಗ್ರೇಟ್‌ ಖಲಿಯ ಜೀವನದ ಏಳು-ಬೀಳುಗಳು ಈ ಚಿತ್ರದಲ್ಲಿ ಅನಾವರಣವಾಗಲಿವೆ. ಮತ್ತೊಂದು ವಿಶೇಷತೆ ಏನಪ್ಪಾ ಅಂದ್ರೆ ದಲೀಪ್ ಸಿಂಗ್‌ ಪಂಜಾಬ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಎಲ್ಲ ಅಂಶಗಳು ತೆರೆಮೇಲೆ ಮೂಡಲಿದೆ ಎನ್ನಲಾಗುತ್ತಿದೆ.

English summary
Sushant Singh Rajput is all set to give fans a special treat with one of his upcoming projects as well. As per reports, Sushant will be playing the legendary wrestler The Great Khali in a film,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada