ಸೋನು ಸೂದ್ '2020ರ ರಿಯಲ್ ಹೀರೋ' ಎಂದು ಘೋಷಿಸಿದ Yahoo
2020ನೇ ವರ್ಷದಲ್ಲಿ ರಿಯಲ್ ಹೀರೋ ಎಂದು ಯಾರನ್ನಾದರೂ ಗುರುತಿಸುವ ಸಮೀಕ್ಷೆ ನಡೆಸಿದರು ಅದರಲ್ಲಿ ಬಾಲಿವುಡ್ ನಟ ಸೋನು ಸೂದ್ ಮೊದಲ ಆಯ್ಕೆಯಾಗುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್ ಮಾಡಿದ ಮಹತ್ವದ ಕೆಲಸಕ್ಕೆ ಇಡೀ ದೇಶಮಾತ್ರವಲ್ಲ ವಿಶ್ವಸಂಸ್ಥೆ ಸಹ ಶ್ಲಾಘಿಸಿ ಪ್ರಶಸ್ತಿ ನೀಡಿದೆ.
ಇದೀಗ, ಯಾಹೂ (Yahoo india) ಜಾಲತಾಣ ಬಾಲಿವುಡ್ ನಟ ಸೋನು ಸೂದ್ ಅವರನ್ನು 2020ರ ಹೀರೋ ಎಂದು ಘೋಷಿಸಿದೆ.

ಲಾಕ್‌ಡೌನ್ ವೇಳೆ ಮುಂಬೈನಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲಾಗದೆ ಒದ್ದಾಡುತ್ತಿದ್ದರು. ಇವರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಿಸಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗು ಹೆದ್ದಾರಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದ ಅನೇಕರಿಗೆ ಊಟ ಇರಲಿಲ್ಲ. ಅಂತವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.
ಕೊರೊನಾ ಭೀತಿಯಿಂದ ಶಾಲಾ-ಕಾಲೇಜು ಬಂದ್ ಮಾಡಲಾಗಿತ್ತು. ಈ ವೇಳೆ ಆನ್‌ಲೈನ್ ಶಿಕ್ಷಣ ಆರಂಭಿಸಿದರು. ನೂರಾರು ಮಕ್ಕಳಿಗೆ ಸ್ಮಾರ್ಟ್ ಫೋನ್ ಇರಲಿಲ್ಲ. ಅಂತವರಿಗೆ ಸೋನು ಸೂದ್ ತಮ್ಮ ಸ್ವಂತ ದುಡ್ಡಿನಿಂದ ಸ್ಮಾರ್ಟ್ ಫೋನ್ ಕೊಡಿಸಿದ್ದಾರೆ.
ವಿದೇಶದಲ್ಲಿ ಸಿಲುಕಿಕೊಂಡಿದ್ದ ಅನೇಕರಿಗೆ ವಿಮಾನ ವ್ಯವಸ್ಥೆ ಮಾಡಿದ್ದಾರೆ. ಆಸ್ಪತ್ರೆ ಚಿಕಿತ್ಸೆಗಾಗಿ ದುಡ್ಡಿಲ್ಲದ ಅನೇಕರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಕೆಲವರಿಗೆ ಉದ್ಯೋಗ ಸಹ ಕೊಡಿಸಿದ್ದಾರೆ.
ಹೀಗೆ, ಕಳೆದ ಏಳಂಟು ತಿಂಗಳಿಂದ ನಟ ಸೋನು ಸೂದ್ ತನ್ನನ್ನು ತಾವು ಸಂಪೂರ್ಣವಾಗಿ ಜನಸೇವೆಗೆ ತೊಡಗಿಕೊಂಡಿದ್ದರು. ಸರ್ಕಾರ, ಅಧಿಕಾರಿಗಳಿಗೆ ಕಾಯದೇ ಖುದ್ದು ತಾವೇ ನಿಂತು ಜನರ ಸಮಸ್ಯೆ ಆಲಿಸಿದ್ದಾರೆ.
Recommended Video
ಲಾಕ್‌ಡೌನ್ ಜಾರಿಯಾದ ದಿನದಿಂದ ಇಂದಿನ ಕ್ಷಣದವರೆಗೂ ಸೋನು ಸೋದ್ ಅವರು ಮಾಡಿದ ಸಮಾಜಮುಖಿ ಕೆಲಸಗಳನ್ನು ನೋಡಿದ ಜನರು ರಿಯಲ್ ಹೀರೋ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇದೀಗ, ಯಾಹೂ ಇಂಡಿಯಾ ಸೋನು ಸೂದ್ ಅವರನ್ನು 2020ನೇ ವರ್ಷದ ಹೀರೋ ಎಂದು ಘೋಷಿಸಿದೆ.


Click it and Unblock the Notifications











