ಹೊಸ ಅತಿಥಿ ಆಗಮನ; ಮಗುವಿಗೆ ನಾಮಕರಣ ಮಾಡಿ 'ಉಲ್ಲಾಸ ಉತ್ಸಾಹ' ನಟಿ ಸಂತಸ

'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ ಮಿಂಚಿದ ಚೆಲುವೆ ಯಾಮಿ ಗೌತಮ್. ಬಳಿಕ ತೆಲುಗು, ತಮಿಳು, ಹಿಂದಿ ಹಾಗೂ ಪಂಜಾಬಿ ಸಿನಿಮಾಗಳಲ್ಲಿ ಆಕೆ ನಟಿಸಿದರು. 3 ವರ್ಷಗಳ ಹಿಂದೆ ಆದಿತ್ಯಾ ಧಾರ್ ಕೈಹಿಡಿದು ಆಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮದುವೆ ಬಳಿಕ ಯಾಮಿ ಗೌತಮ್ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸಲಿಲ್ಲ. ಗಂಡ, ಫ್ಯಾಮಿಲಿ ಎಂದು ಸೈಲೆಂಟ್ ಆಗಿಬಿಟ್ಟಿದ್ದರು. ಇದೀಗ ಗಂಡು ಮಗುವಿಗೆ ಯಾಮಿ ಜನ್ಮ ನೀಡಿದ್ದಾರೆ. ಮಗುವಿಗೆ ನಾಮಕರಣ ಮಾಡಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಕ್ಷಯ ತೃತೀಯ ದಿನವೇ(ಮೇ 10) ಮಗುವಿಗೆ ಜನ್ಮ ನೀಡಿದ್ದು ಇದೀ ಆ ವಿಚಾರ ಬಹಿರಂಗಪಡಿಸಿದ್ದಾರೆ.

Yami Gautam and her husband Aditya Dhar welcome baby boy

"ಸೂರ್ಯ ಆಸ್ಪತ್ರೆಯ ಸಮರ್ಪಿತ ಮತ್ತು ಅದ್ಭುತ ವೈದ್ಯಕೀಯ ವೃತ್ತಿಪರರಿಗೆ, ವಿಶೇಷವಾಗಿ ಡಾ. ಭೂಪೇಂದರ್ ಅವಸ್ತಿ ಮತ್ತು ಡಾ. ರಂಜನಾ ಧನು ಅವರ ಪರಿಣತಿ ಹಾಗೂ ದಣಿವರಿಯದ ಪ್ರಯತ್ನ. ಈ ಸಂತೋಷದಾಯಕ ಸಂದರ್ಭವನ್ನು ಸಾಧ್ಯವಾಗಿಸಿದಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ."

ಪೋಷಕರಾಗಿ ಈ ಸುಂದರ ಪ್ರಯಾಣವನ್ನು ನಾವು ಪ್ರಾರಂಭಿಸಿದಾಗ, ನಮ್ಮ ಮಗನಿಗಾಗಿ ಕಾಯುತ್ತಿರುವ ಉಜ್ವಲ ಭವಿಷ್ಯವನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತೇವೆ. ಅವನು ಸಾಧಿಸುವ ಪ್ರತಿ ಮೈಲಿಗಲ್ಲು, ಅವರು ನಮ್ಮ ಇಡೀ ಕುಟುಂಬಕ್ಕೆ ಮತ್ತು ನಮ್ಮ ಪ್ರೀತಿಯ ರಾಷ್ಟ್ರಕ್ಕೆ ಹೆಮ್ಮೆಯ ದಾರಿದೀಪವಾಗಿ ಬೆಳೆಯುತ್ತಾನೆ ಎಂಬ ಭರವಸೆ ಮತ್ತು ನಂಬಿಕೆಯಿಂದ ನಾವಿದ್ದೇವೆ" ಎಂದು ಯಾಮಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು "ನಮ್ಮ ಮಗನ ಆಗಮನದ ವಿಚಾರವನ್ನು ಹಂಚಿಕೊಳ್ಳಲು ಬಹಳ ಥ್ರಿಲ್ ಆಗುತ್ತಿದೆ. 'ವೇದವಿದ್' ಅಕ್ಷಯ ತೃತೀಯ ದಿನ ಹುಟ್ಟಿದ. ಅವನಿಗೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಬೇಕು ಎಂದು ಪೋಸ್ಟ್ ಮಾಡಿದ್ದಾರೆ. 'ವೇದವಿದ್' ಅಂದರೆ ವೇದಗಳಲ್ಲಿ ಪಾರಂಗತನಾದವನು ಎನ್ನುವ ಅರ್ಥವಿದೆ. ಹೃತಿಕ್ ರೋಷನ್, ರಾಶಿ ಖನ್ನಾ, ರಣ್‌ವೀರ್ ಸಿಂಗ್ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

ಹಿಮಾಚಲದ ಬಿಲಾಸ್‌ಪುರದಲ್ಲಿ ಹುಟ್ಟಿದ ಯಾಮಿ ಗೌತಮ್, ಚಂಡೀಗರ್‌ದಲ್ಲಿ ಓದಿ ಬೆಳೆದವರು. ಐಎಎಸ್ ಅಧಿಕಾರಿ ಆಗುವ ಕನಸು ಕಂಡಿದ್ದ ಯಾಮಿ ಬಳಿಕ ಚಿತ್ರರಂಗಕ್ಕೆ ಬಂದಿದ್ದರು. ಇನ್ನು ನಟ ಪುಲ್ಕಿತ್ ಸಾಮ್ರಾಟ್ ಜೊತೆ ಆಕೆ ಡೇಟಿಂಗ್ ನಡೆಸಿದ್ದರು ಎನ್ನುವ ಮಾತಿದೆ. 2018ರಲ್ಲಿ ಇಬ್ಬರೂ ದೂರಾಗಿದ್ದರು. 2021ರಲ್ಲಿ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಆದಿತ್ಯಾ ಧಾರ್ ಕೈ ಹಿಡಿದಿದ್ದರು.

'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರಕ್ಕೆ ಆದಿತ್ಯಾ ಧಾರ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ಮುಖ್ಯ ಪಾತ್ರದಲ್ಲಿ ಕೂಡ ಯಾಮಿ ಮಿಂಚಿದ್ದರು. 'ಚಾಂದ್‌ ಕೆ ಪಾರ್ ಚಲೊ' ಕಿರುತೆರೆ ಧಾರಾವಾಹಿ ಮೂಲಕ ಯಾಮಿ ಬಣ್ಣದಲೋಕದ ಜರ್ನಿ ಶುರುವಾಯಿತು. ಕನ್ನಡದ 'ಉಲ್ಲಾಸ ಉತ್ಸಾಹ' ಆಕೆ ನಟಿಸಿದ ಮೊದಲ ಸಿನಿಮಾ. ಬಾಲಿವುಡ್‌ನಲ್ಲಿ 'ವಿಕ್ಕಿ ಡೋನರ್' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು.

'ಬದ್ಲಾಪುರ್', 'ಸನಂ ರೇ', 'ಕಾಬಿಲ್', 'ಸರ್ಕಾರ್'-3, 'ಬಾಲ', 'ಭೂತ್ ಪೊಲೀಸ್', 'ಓ ಮೈ ಗಾಡ್'-2, 'ಆರ್ಟಿಕಲ್ 370' ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಯಾಮಿ ಗೌತಮ್ ಬಣ್ಣ ಹಚ್ಚಿದ್ದಾರೆ. ಇನ್ನು ಕೆಲ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಕೂಡ ಆಕೆ ಕಾಣಿಸಿಕೊಂಡಿದ್ದಾರೆ. 'ಆರ್ಟಿಕಲ್ 370' ಯಾಮಿ ನಟಿಸಿರುವ ಕೊನೆಯ ಸಿನಿಮಾ. ಮತ್ತೆ ಆಕೆ ಬಣ್ಣ ಬಣ್ಣ ಹಚ್ಚುತ್ತಾರಾ ಕಾದು ನೋಡಬೇಕಿದೆ.

More from Filmibeat

English summary
Yami Gautam, Yami Gautam welcome baby boy, Yami Gautam baby boy, Yami Gautam son name, Yami Gautam son name and meaning
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X