For Quick Alerts
  ALLOW NOTIFICATIONS  
  For Daily Alerts

  ನಟ ಅಕ್ಷಯ್ ಕುಮಾರ್‌ ಚಿತ್ರಕ್ಕೆ ಯಾಮಿ ಗೌತಮ್ ಎಂಟ್ರಿ

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ ಚಾಲನೆ ಕೊಟ್ಟಿದ್ದಾರೆ. ಈ ಹಿಂದೆ ಸೂಪರ್ ಹಿಟ್ ಆಗಿದ್ದ ಸಿನಿಮಾದ ಸೀಕ್ವೆಲ್ ಮಾಡಲು ಮುಂದಾಗಿದ್ದು, ಈ ಚಿತ್ರಕ್ಕೆ ಎಲ್ಲಾ ತಯಾರಿ ನಡೆದಿದೆ.

  ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ 'ಓ ಮೈ ಗಾಡ್' ಮುಂದುವರಿದ ಭಾಗ ಸೆಟ್ಟೇರುತ್ತಿದ್ದು, ಈ ಚಿತ್ರಕ್ಕೀಗ ನಟಿ ಯಾಮಿ ಗೌತಮ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಅಕ್ಷಯ್ ಕುಮಾರ್ ರಾಮ್ ಸೇತು ಚಿತ್ರದಲ್ಲಿ ಇಬ್ಬರು ದಕ್ಷಿಣ ಕಲಾವಿದರು?ಅಕ್ಷಯ್ ಕುಮಾರ್ ರಾಮ್ ಸೇತು ಚಿತ್ರದಲ್ಲಿ ಇಬ್ಬರು ದಕ್ಷಿಣ ಕಲಾವಿದರು?

  ಅಮಿತ್ ರೈ ನಿರ್ದೇಶನ ಮಾಡುತ್ತಿದ್ದು, ವರ್ಧೆ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ. ಅಕ್ಷಯ್ ಕುಮಾರ್, ಪರೇಶ್ ರಾವಲ್ ಜೊತೆ ಪಂಕಜ್ ತ್ರಿಪತಿ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಈಗ ಯಾಮಿ ಗೌತಮ್ ಎಂಟ್ರಿ ಕೊಟ್ಟಿರುವುದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

  ಇದರ ಜೊತೆಗೆ ಅಕ್ಷಯ್ ಕುಮಾರ್ ನಟಿಸಲಿರುವ ರಕ್ಷಾ ಬಂಧನ್ ಚಿತ್ರ ಬಗ್ಗೆಯೂ ಆಸಕ್ತಿಕರ ಮಾಹಿತಿಯೊಂದು ಬಹಿರಂಗವಾಗಿದೆ. ರಕ್ಷಾ ಬಂಧನ್ ಚಿತ್ರದಲ್ಲಿ ಭೂಮಿ ಪಡ್ನೆಕರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ಇದಕ್ಕೂ ಮುಂಚೆ ಭೂಮಿ ಪಡ್ನೆಕರ್ 'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸಿದ್ದರು. ಇನ್ನು ಭೂಮಿ ಪಡ್ನೆಕರ್ ನಟಿಸಿದ್ದ 'ದುರ್ಗಮತಿ' ಚಿತ್ರಕ್ಕೆ ಅಕ್ಷಯ್ ಕುಮಾರ್ ಬಂಡವಾಳ ಹಾಕಿದ್ದರು.

  ಅಕ್ಷಯ್ ಕುಮಾರ್ ಚಿತ್ರಗಳು

  ಎಲ್ಲಾ ಮುಗಿದು ಹೋದ ಕಥೆ, ಇದನ್ನೆಲ್ಲಾ ನೋಡಿದ್ರೆ ನೋವಾಗುತ್ತೆ | Filmibeat Kannada

  ಸೂರ್ಯವಂಶಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬೆಲ್ ಬಾಟಮ್ ಸಿನಿಮಾ ಶೂಟಿಂಗ್ ಮುಗಿಸಿದೆ. ಪೃಥ್ವಿರಾಜ್ ಚಿತ್ರವೂ ತೆರೆಗೆ ಬರಲು ತಯಾರಾಗುತ್ತಿದೆ. ಧನುಶ್ ಜೊತೆ ನಟಿಸಿರುವ ಅತ್ರಂಗಿ ರೇ ಚಿತ್ರವೂ ಪ್ರೇಕ್ಷಕರ ಮುಂದೆ ಬರಲು ಸಾಲಿನಲ್ಲಿದೆ. ಬಚ್ಚನ್ ಪಾಂಡೆ ಚಿತ್ರೀಕರಣ ಆರಂಭಿಸಿದೆ. ರಾಮ್ ಸೇತು ಚಿತ್ರವೂ ಶೂಟಿಂಗ್‌ಗೆ ಚಾಲನೆ ಕೊಟ್ಟಿದೆ.

  English summary
  Bollywood actress Yami gautam join hands with akshay kumar fro omg 2 film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X