For Quick Alerts
  ALLOW NOTIFICATIONS  
  For Daily Alerts

  ಸರಳವಾಗಿ ಮದುವೆಯಾದ ಹಿಂದಿನ ರಹಸ್ಯ ಬಿಚ್ಚಿಟ್ಟ ಖ್ಯಾತ ನಟಿ ಯಾಮಿ ಗೌತಮ್

  |

  ಮದುವೆ ಅಂದರೆ ಆಡಂಬರ, ಅಬ್ಬರ ಇರಲೇ ಬೇಕು ಎನ್ನುವುದು ಕೆಲವರ ವಾದ. ಆದರೆ ಹಣ ಇದ್ದವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅದ್ದೂರಿಯಾಗಿ, ಧಾಮ್ ಧೂಮ್ ಆಗಿ ಮದುವೆ ಮಾಡುತ್ತಾರೆ. ಆದರೆ ಹಣ ಇಲ್ಲದವರೂ ಸಹ ಎಷ್ಟೋ ಮಂದಿ ಯಾರನ್ನೊ ಮೆಚ್ಚಿಸಲು ಕಷ್ಪಪಟ್ಟು ಸಾಲ ಮಾಡಿಯಾದರೂ ಆಡಂಬರದ ಮದುವೆ ಮಾಡುತ್ತಾರೆ.

  ಆದರೆ ಇನ್ನು ಕೆಲವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಯಾರನ್ನು ಮೆಚ್ಚಿಸದೆ ಯಾವುದೇ ಅದ್ದೂರಿತನ ವಿಲ್ಲದೆ ಸರಳವಾಗಿ ಹಸೆಮಣೆ ಏರುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳ ಮದುವೆ ಬಗ್ಗೆ ಹೇಳಬೇಕಾಗಿಲ್ಲ. ಅಲಂಕಾರ, ಉಡುಗೆ -ತೊಡಿಗೆ ನೋಡುಗರನ್ನು ಬೆರಗುಗೊಳಿಸುತ್ತೆ. ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನ ಖ್ಯಾತ ನಟಿ ಯಾಮಿ ಗೌತಮ್ ಯಾವುದೇ ಆಡಂಬರ ಅಬ್ಬರವಿಲ್ಲದೆ ನಿರ್ದೇಶಕ ಆದಿತ್ಯ ಧರ್ ಜೊತೆ ಹಸೆಮಣೆ ಏರಿದ್ದಾರೆ. ನಟಿ ಯಾಮಿ ತನ್ನ ಸಿಂಪಲ್ ಮದುವೆ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

  ಸಾಕಷ್ಟು ಅದ್ದೂರಿ ಮದುವೆಗಳಿಗೆ ಹಾಜರಾಗಿದ್ದೇನೆ

  ಸಾಕಷ್ಟು ಅದ್ದೂರಿ ಮದುವೆಗಳಿಗೆ ಹಾಜರಾಗಿದ್ದೇನೆ

  ನಟಿ ಯಾಮಿ ತನ್ನ ಸಿಂಪಲ್ ಮದುವೆ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ಯಾಮಿ, ಸಾಕಷ್ಟು ಅದ್ದೂರಿ ಮದುವೆಗಳನ್ನು ನೋಡಿದ್ದೇನೆ. ಅದರಿಂದ ಮನವರಿಕೆಯಾದ ಯಾಮಿ ಆದಿತ್ಯ ಜೊತೆ ಮಾತನಾಡಿ ಸರಳವಾಗಿ ಹಸೆಮಣೆ ಏರಿರುವುದಾಗಿ ಹೇಳಿದ್ದಾರೆ.

  ಉರಿ ನಿರ್ದೇಶಕರನ್ನು ವರಿಸಿದ ಯಾಮಿ ಗೌತಮ್

  ಉರಿ ನಿರ್ದೇಶಕರನ್ನು ವರಿಸಿದ ಯಾಮಿ ಗೌತಮ್

  ಯಾಮಿ ಗೌತಮ್ ಬಹುಕಾಲದ ಗೆಳೆಯ ಆದಿತ್ಯ ಧರ್ ಅವರ ಜೊತೆ ಜೂನ್ ಮೊದಲ ವಾರದಲ್ಲಿ ಹಸೆಮಣೆ ಏರಿದ್ದರು. ಹಿಮಾಚಲ ಪ್ರದೇಶದ ಸುಂದರ ಪ್ರಕೃತಿ ನಡುವೆ ಯಾಮಿ ಉರಿ ಖ್ಯಾತಿಯ ನಿರ್ದೇಶಕ ಆದಿತ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು.

  ಯಾಮಿ-ಆದಿತ್ಯ ಸರಳ ಮದುವೆಗೆ ಫ್ಯಾನ್ ಫಿದಾ

  ಯಾಮಿ-ಆದಿತ್ಯ ಸರಳ ಮದುವೆಗೆ ಫ್ಯಾನ್ ಫಿದಾ

  ಯಾಮಿ ಗೌತಮ್ ಮದುವೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿದ್ದರು. ಯಾಮಿ ಫೋಟೋಗಳಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆಡಂಬರವಿಲ್ಲದ ಸರಳ ಮದುವೆ ವಿಧಾನಕ್ಕೆ ಅನೇಕರು ಫಿದಾ ಆಗಿದ್ದರು.

  ದೊಡ್ಡ ಮದುವೆಗಳನ್ನು ನೋಡಿ ಈ ನಿರ್ಧಾರ ಮಾಡಿದೆ

  ದೊಡ್ಡ ಮದುವೆಗಳನ್ನು ನೋಡಿ ಈ ನಿರ್ಧಾರ ಮಾಡಿದೆ

  ಸಿಂಪಲ್ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಯಾಮಿ, "ನಾನು ದೊಡ್ಡ ಮದುವೆಗಳಿಗೆ ಹೆಚ್ಚು ಹಾಜರಾಗಿದ್ದೇನೆ. ಆದರೆ ನನಗೆ ಅದು ಬೇಡ ಎಂದು ತಿಳಿದಿತ್ತು. ವಿವಾಹದ ಅರ್ಥ ಮೊದಲು ತಿಳಿದಿರಲಿಲ್ಲ. ಆದರೆ ನನ್ನ ತಿಳುವಳಿಕೆ ಮತ್ತು ಮದುವೆಗಳಿಗೆ ಹಾಜರಾದ ಅನುಭವದ ಪ್ರಕಾರ ನನಗೆ ಬೇಡವಾಗಿದ್ದರ ಬಗ್ಗೆ ನನಗೆ ಖಚಿತವಾಗಿತ್ತು. ಆದಿತ್ಯ ಮತ್ತು ನಾನು ಇಬ್ಬರೂ ಈ ಬಗ್ಗೆ ಆಲೋಚನೆ ಮಾಡಿ ತೆಗೆದುಕೊಂಡ ನಿರ್ಧಾರ" ಎಂದಿದ್ದಾರೆ.

  ಮದುವೆಯಲ್ಲಾಗುವ ವ್ಯರ್ಥ ಆಗಬಾರದು

  ಮದುವೆಯಲ್ಲಾಗುವ ವ್ಯರ್ಥ ಆಗಬಾರದು

  "ಮದುವೆಗಳಲ್ಲಿ ಆಹಾರ ಮತ್ತು ಹೂವು, ಅಲಂಕಾರದಿಂದ ಆಗುವ ವ್ಯರ್ಥದಿಂದ ನಾವು ಹಿಂಜರಿಯುತ್ತೇವೆ. ಅಲ್ಲದೆ ಎಲ್ಲರನ್ನು ಸಂತೋಷಪಡಿಸುವುದು ತುಂಬಾ ಕಷ್ಟ. ಆದ್ದರಿಂದ ನಮ್ಮ ಬಗ್ಗೆ ನಿಜವಾದ ಕಾಳಜಿ ವಹಿಸುವವರಲ್ಲಿ ಏಕೆ ಮದುವೆಯಾಗಬಾರದು. ಯಾರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿಲ್ಲ" ಎಂದು ತನ್ನ ಸರಳ ಮದುವೆ ಹಿಂದಿನ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ.

  ಕನ್ನಡ ಸಿನಿಮಾ ಮೂಲಕ ಯಾಮಿ ಎಂಟ್ರಿ

  ಕನ್ನಡ ಸಿನಿಮಾ ಮೂಲಕ ಯಾಮಿ ಎಂಟ್ರಿ

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಯಾಮಿ ಗೌತಮ್ ಮೊದಲ ಸಿನಿಮಾದಲ್ಲಿ ನಟಿಸಿದ್ದು ಕನ್ನಡದಲ್ಲಿ. ಗಣೇಶ್ ನಾಯಕನಾಗಿ ನಟಿಸಿದ್ದ 'ಉಲ್ಲಾಸ-ಉತ್ಸಾಹ' ಸಿನಿಮಾದಲ್ಲಿ ನಾಯಕಿ ಮಹಾಲಕ್ಷ್ಮಿ ಪಾತ್ರದಲ್ಲಿ ಯಾಮಿ ಮಿಂಚಿದ್ದರು. ಆ ನಂತರ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ಯಾಮಿ ನಟಿಸಿದ್ದಾರೆ.

  ಮಂಗ್ಲಿ ವಿರುದ್ಧ ಕಂಪ್ಲೇಂಟ್ ಕೊಟ್ಟ ಬಿಜೆಪಿ ಕಾರ್ಪೊರೇಟರ್
  ಸಾಲು ಸಾಲು ಸಿನಿಮಾಗಳಲ್ಲಿ ಯಾಮಿ ಬ್ಯುಸಿ

  ಸಾಲು ಸಾಲು ಸಿನಿಮಾಗಳಲ್ಲಿ ಯಾಮಿ ಬ್ಯುಸಿ

  ಸದ್ಯ ಬಿಡುಗಡೆಗೆ ತಯಾರಾಗಿರುವ 'ಭೂತ್ ಪೊಲೀಸ್', 'ದಾವಿ' ಸಿನಿಮಾದಲ್ಲಿ ನಟಿಸಿರುವ ಯಾಮಿ, 'ಎ ಥರ್ಸ್ ಡೇ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಅನಿರುದ್ಧ ರಾಯ್ ಚೌಧರಿಯ ಹೊಸ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Bollywood Actress Yami Gautam opens up about her simple wedding in the hills with filmmaker Aditya Dhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X