For Quick Alerts
  ALLOW NOTIFICATIONS  
  For Daily Alerts

  ನಾಯಕಿಯರ ನಿರ್ಲಕ್ಷ್ಯ: ಮಾಧ್ಯಮಗಳ ವಿರುದ್ಧ ಯಾಮಿ ಗೌತಮ್ ಬೇಸರ

  |

  ಬಾಲಿವುಡ್ ನಟಿ ಯಾಮಿ ಗೌತಮ್ ನಟನೆಯ ಭೂತ್ ಪೊಲೀಸ್ ಇತ್ತೀಚಿಗಷ್ಟೆ ತೆರೆಕಂಡಿದೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 10 ರಂದು ಈ ಚಿತ್ರ ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

  ಸೈಫ್ ಅಲಿ ಖಾನ್, ಅರ್ಜುನ್ ಕಪೂರ್, ಯಾಮಿ ಗೌತಮ್, ಜಾಕ್ವೆಲಿನ್ ಫರ್ನಾಂಡಿಸ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾದ ವಿಮರ್ಶೆಗಳನ್ನು ಹಲವು ಪತ್ರಿಕೆ, ವೆಬ್‌ಸೈಟ್‌ಗಳು ವರದಿ ಮಾಡಿದೆ. ವಿಮರ್ಶೆ ಸ್ವಾಗತಿಸಿರುವ ನಟಿ ಯಾಮಿ ಗೌತಮ್, ನಾಯಕಿಯರ ಹೆಸರನ್ನು ಏಕೆ ಬಳಸಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಅರೆ ಬೆತ್ತಲೆ ಚಿತ್ರ ಪೋಸ್ಟ್ ಮಾಡಿ 'ಏನಾದ್ರು ಮಾಡಿಕೊಳ್ಳಿ' ಎಂದ ನಟಿಅರೆ ಬೆತ್ತಲೆ ಚಿತ್ರ ಪೋಸ್ಟ್ ಮಾಡಿ 'ಏನಾದ್ರು ಮಾಡಿಕೊಳ್ಳಿ' ಎಂದ ನಟಿ

  ಖ್ಯಾತ ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ 'ಭೂತ್ ಪೊಲೀಸ್' ವಿಮರ್ಶೆ ಸ್ಟೋರಿಯ ಹೆಡ್‌ಲೈನ್‌ನಲ್ಲಿ ಯಾಮಿ ಗೌತಮ್ ಹೆಸರಾಗಲಿ ಅಥವಾ ಜಾಕ್ವೆಲಿನ್ ಹೆಸರಗಾಲಿ ಬಳಸಿಲ್ಲ. ಸೈಫ್ ಅಲಿ ಖಾನ್ ಮತ್ತು ಅರ್ಜುನ್ ಕಪೂರ್ ಸಿನಿಮಾ ಎಂದು ನಮೂದಿಸಿದ್ದಾರೆ. ಇದನ್ನ ಖಂಡಿಸಿರುವ ನಟಿ 'ಮಾಧ್ಯಮಗಳು ನಿಮ್ಮ ಹೆಡ್‌ಲೈನ್‌ಗಳಲ್ಲಿ ನಾಯಕಿಯರ ಹೆಸರು ಏಕೆ ಬಳಸಲ್ಲ, ನಾಯಕಿಯರ ಬಗ್ಗೆ ಏಕೆ ನಿರ್ಲಕ್ಷ್ಯ ಎಂದು ಪ್ರಶ್ನಿಸಿದ್ದಾರೆ,

  ''ನಿಮ್ಮ ವಿಮರ್ಶೆಗೆ ಧನ್ಯವಾದಗಳು. ಆದರೆ ಮೀಡಿಯಾಗಳು ನಟಿಯರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎನ್ನುವ ಸತ್ಯವನ್ನು ತಿಳಿಯಬೇಕು. ನಿಮ್ಮ ಶೀರ್ಷಿಕೆಗಳನ್ನು ಬರೆಯುವಾಗ ನಟಿಯರಿಗೂ ಗೌರವ ನೀಡುವುದನ್ನ ಮರೆಯಬಾರದು'' ಎಂದು ಹೇಳಿದ್ದಾರೆ.

  ನಟಿಯ ಅಭಿಪ್ರಾಯ ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ. ''ನಿಮ್ಮ ಮಾತಿಗೆ ನಮ್ಮ ಒಪ್ಪಿಗೆ ಇದೆ, ಪಿತೃಪ್ರಭುತ್ವ ಕಲ್ಪನೆ ನಿಲ್ಲಬೇಕು'' ಎಂದು ಓರ್ವ ವ್ಯಕ್ತಿ ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿ, ''ನಿಜ ಮೇಡಂ, ಸಿನಿಮಾ ಬಗ್ಗೆ ಮಾತನಾಡುವಾಗ ಅಥಾ ಬರೆಯುವಾಗಲೂ ನಟಿಯರಿಗೆ ಗೌರವ ಸಿಗಬೇಕು'' ಎಂದಿದ್ದಾರೆ.

  ಅಂದ್ಹಾಗೆ, ಯಾಮಿ ಗೌತಮ್ ಇತ್ತೀಚಿಗಷ್ಟೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ಅಭಿಷೇಕ್ ಬಚ್ಚನ್ ನಟನೆಯ 'ದಾಸ್ವಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ ಓ ಮೈ ಗಾಡ್ 2 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Yami Gautam slams media houses for not mentioning names of actress in movie reviews.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X