For Quick Alerts
  ALLOW NOTIFICATIONS  
  For Daily Alerts

  ಒಂದೇ ದಿನ 5 ಚಿತ್ರಗಳ ಬಿಡುಗಡೆ ದಿನಾಂಕ ಘೋಷಿಸಿದ ಯಶ್ ರಾಜ್ ಫಿಲಂಸ್

  |

  ಚಿತ್ರಮಂದಿರಗಳಿಗೆ 100 ಪರ್ಸೆಂಟ್ ಅವಕಾಶ ನೀಡುತ್ತಿದ್ದಂತೆ ನಿರ್ಮಾಪಕರು ಅಲರ್ಟ್ ಆಗಿದ್ದಾರೆ. ತಮ್ಮ ಸಿನಿಮಾಗಳ ರಿಲೀಸ್ ದಿನಾಂಕ ಪ್ರಕಟಿಸಿ, ಥಿಯೇಟರ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿಯ ಪ್ರಮುಖ ಚಿತ್ರಗಳು ಈಗಾಗಲೇ ರಿಲೀಸ್ ದಿನಾಂಕ ಘೋಷಿಸಿವೆ.

  ಬಾಕಿ ಉಳಿದಿರುವ ಚಿತ್ರಗಳು ಯಾವ ಗ್ಯಾಪ್‌ನಲ್ಲಿ ರಿಲೀಸ್ ಮಾಡುವುದು ಎಂಬ ಆಲೋಚನೆಗೆ ಬಿದ್ದಿವೆ. ಈ ನಡುವೆ ಯಶ್ ರಾಜ್ ಫಿಲಂಸ್ ಸಂಸ್ಥೆ ಒಂದೇ ದಿನ ಐದು ಚಿತ್ರಗಳ ಬಿಡುಗಡೆ ದಿನಾಂಕ ಬಹಿರಂಗಪಡಿಸಿದೆ. ಯಶ್ ರಾಜ್ ಫಿಲಂಸ್ ಬ್ಯಾನರ್‌ನಲ್ಲಿ ತಯಾರಾಗಿರುವ ಆ ಐದು ಚಿತ್ರಗಳು ಯಾವುದು? ಯಾವಾಗ ಬಿಡುಗಡೆ? ಮುಂದೆ ಓದಿ...

  ಸಂದೀಪ್ ಔರ್ ಪಿಂಕಿ ಫರಾರ್

  ಸಂದೀಪ್ ಔರ್ ಪಿಂಕಿ ಫರಾರ್

  ಅರ್ಜುನ್ ಕಪೂರ್ ಮತ್ತು ಪರಿಣಿತಿ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಂದೀಪ್ ಔರ್ ಪಿಂಕಿ ಫರಾರ್ ಸಿನಿಮಾ ಮಾರ್ಚ್ 19, 2021 ರಂದು ಬಿಡುಗಡೆಯಾಗಲಿದೆ. ದಿಬಾಕರ್ ಬ್ಯಾನರ್ಜಿ ಈ ಚಿತ್ರವನ್ನು ನಿರ್ಮಾಣದ ಜೊತೆಗೆ ನಿರ್ದೇಶಿಸಿದ್ದು, ಯಶ್ ರಾಜ್ ಫಿಲಂಸ್ ಸಂಸ್ಥೆ ವಿತರಣೆ ಮಾಡ್ತಿದೆ.

  ಅಕ್ಷಯ್‌ ಕುಮಾರ್‌ಗೆ ಮೋಹಕ ಫೋಸ್ ನೀಡಿದ ಕೃತಿ ಸೆನನ್

  ಬಂಟಿ ಔರ್ ಬಬ್ಲಿ 2

  ಬಂಟಿ ಔರ್ ಬಬ್ಲಿ 2

  ಸೈಫ್ ಅಲಿ ಖಾನ್, ರಾಣಿ ಮುಖರ್ಜಿ, ಸಿದ್ಧಾರ್ಥ್ ಚರ್ತುವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಂಟಿ ಔರ್ ಬಬ್ಲಿ 2 ಸಿನಿಮಾ ಏಪ್ರಿಲ್ 23 ರಂದು ರಿಲೀಸ್ ಆಗುತ್ತಿದೆ. ವರುಣ್ ವಿ ಶರ್ಮಾ ಈ ಚಿತ್ರ ನಿರ್ದೇಶಿಸಿದ್ದು, ಯಶ್ ರಾಜ್ ಫಿಲಂಸ್ ನಿರ್ಮಿಸಿದೆ.

  ಶಂಶೇರಾ

  ಶಂಶೇರಾ

  ರಣ್ಬೀರ್ ಕಪೂರ್, ವಾಣಿ ಕಪೂರ್, ಸಂಜಯ್ ದತ್ ನಟನೆಯ ಶಂಶೇರಾ ಸಿನಿಮಾ ಜೂನ್ 25 ರಂದು ರಿಲೀಸ್ ಆಗಲಿದೆ. ಯಶ್ ರಾಜ್ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಕರಣ್ ಮಲ್ಹೋತ್ರ ನಿರ್ದೇಶಿಸಿದ್ದಾರೆ.

  ಮಗಳ ಕೈಹಿಡಿದು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಐಶ್ವರ್ಯ ರೈ, ಕಾಲೆಳೆದ ನೆಟ್ಟಿಗರು

  ಜಯೇಶ್‌ಭಾಯ್ ಜೋರ್ದಾರ್

  ಜಯೇಶ್‌ಭಾಯ್ ಜೋರ್ದಾರ್

  ರಣ್ವೀರ್ ಸಿಂಗ್, ಶಾಲಿನಿ ಪಾಂಡೆ, ಬೊಮ್ಮನ್ ನಿರಾನಿ, ರತ್ನ ಪತಾಕ್ ಶಾ ನಟನೆಯ ಜಯೇಶ್‌ಭಾಯ್ ಜೋರ್ದಾರ್ ಸಿನಿಮಾ ಆಗಸ್ಟ್ 27. 2021 ರಂದು ತೆರೆಗೆ ಬರ್ತಿದೆ. ದಿವ್ಯಾಂಗ್ ಠಕ್ಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಯಶ್ ರಾಜ್ ಫಿಲಂಸ್ ನಿರ್ಮಾಣ ಮಾಡಿದ್ದಾರೆ.

  ಅಕ್ಷಯ್ ಕುಮಾರ್ 'ಪೃಥ್ವಿರಾಜ್'

  ಅಕ್ಷಯ್ ಕುಮಾರ್ 'ಪೃಥ್ವಿರಾಜ್'

  ಅಕ್ಷಯ್ ಕುಮಾರ್, ಸಂಜಯ್ ದತ್, ಸೋನು ಸೂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪೃಥ್ವಿರಾಜ್ ಸಿನಿಮಾ ನವೆಂಬರ್ 5 ರಂದು ರಿಲೀಸ್ ಆಗಲಿದೆ ಎಂದು ಯಶ್ ರಾಜ್ ಫಿಲಂಸ್ ಘೋಷಿಸಿದೆ. ಮಾನುಷಿ ಚಿಲ್ಲರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ್ದಾರೆ.

  English summary
  Yash raj Films announced release date of Sandeep Aur Pinky Faraar, Bunty Aur Babli 2, Shamshera, Jayeshbhai Jordaar, Prithviraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X