ಯಶ್ ರಾಜ್ ಫಿಲ್ಮ್ಸ್‌ಯಿಂದ ಅಕ್ಷಯ್ ಕುಮಾರ್ ಬ್ಯಾನ್: ಪೃಥ್ವಿರಾಜ್ ಸೋಲೇ ಕಾರಣ?

ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ. ಈ ಸಿನಿಮಾ ರಿಲೀಸ್‌ಗೂ ಮುನ್ನ ಬಹಳ ದೊಡ್ಡ ನಿರೀಕ್ಷೆಯನ್ನು ಮೂಡಿಸಿತ್ತು. ಬಾಲಿವುಡ್‌ ಚಿತ್ರಗಳ ಸೂಪರ್ ಹಿಟ್ ಲಿಸ್ಟ್ ಸೇರುತ್ತದೆ ಎನ್ನಲಾಗಿತ್ತು.

ಆದರೆ ಅದ್ಧೂರಿ ಪ್ರಚಾರದ ನಂತರವೂ, ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತಿದೆ. ಚಿತ್ರದ ಬಾಕ್ಸಾಫೀಸ್ ಗಳಿಕೆಯೇ ಇದಕ್ಕೆ ಸಾಕ್ಷಿ. ಜೂನ್ 3ರಂದು ರಿಲೀಸ್ ಆದ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಹೀನಾಯ ಸೋಲು ಕಂಡಿದೆ.

ದೊಡ್ಡ ಬಜೆಟ್‌ನಲ್ಲಿ ತೆರೆಗೆ ಬಂದ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಳ ಹೆಸರಿಲ್ಲದಂತಾಗಿ ಬಿಟ್ಟಿದೆ. ಸಿನಿಮಾಗೆ ಹಾಕಿದ ಬಂಡವಾಳದಲ್ಲಿ ಸಾಮಾನ್ಯ ಎನ್ನುವಷ್ಟೂ ಬಂದಿಲ್ಲ. ಈ ಸೋಲಿನ ಹೊಣೆಯನ್ನು ಯಶ್ ರಾಜ್ ಸಂಸ್ಥೆ ನಟ ಅಕ್ಷಯ್ ಕುಮಾರ್ ಮೇಲೆ ಹೊರಿಸಿದೆ.

ಸಿನಿಮಾ ಸೋಲಿಗೆ ಅಕ್ಷಯ್ ಕುಮಾರ್ ಕಾರಣ!

ಸಿನಿಮಾ ಸೋಲಿಗೆ ಅಕ್ಷಯ್ ಕುಮಾರ್ ಕಾರಣ!

ಬಾಲಿವುಡ್‌ನಲ್ಲಿ ದೊಡ್ಡ ಸ್ಟಾರ್ ನಟರು ಅಭಿನಯದ ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತಿದೆ. ಈ ಸೋಲಿನ ಸಾಲಿಗೆ ನಟ ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಕೂಡ ಸೇರಿಕೊಂಡಿದೆ. ಈ ಸಿನಿಮಾ ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಚಿತ್ರಕ್ಕೆ ಯಶ್ ರಾಜ್ ಸಂಸ್ಥೆ 300 ಕೋಟಿ ರೂ. ಬಜೆಟ್ ಸುರಿದಿತ್ತು. ಆದರೆ ಇಲ್ಲಿ ತನಕ ಕಲೆಕ್ಷನ್ ಮಾಡಿರುವುದು 66 ಕೋಟಿ ರೂ. ಮಾತ್ರ. ಹಾಗಾಗಿ ಒಟ್ಟಾರೆ ಲೆಕ್ಕಾಚಾರದ ಪ್ರಕಾರ ಸಿನಿಮಾ ತಂಡಕ್ಕೆ 200 ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ.

ಅಕ್ಷಯ್ ಕುಮಾರ್ ಬ್ಯಾನ್ ಮಾಡಿದ YRF!

ಅಕ್ಷಯ್ ಕುಮಾರ್ ಬ್ಯಾನ್ ಮಾಡಿದ YRF!

'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಬಳಿಕ ಅಕ್ಷಯ್ ಕುಮಾರ್ ಅವರನ್ನು ಬ್ಯಾನ್ ಮಾಡಿದೆಯಂತೆ ಯಶ್ ರಾಜ್ ಫಿಲಂಸ್. ಹೀಗಂತ ಬಾಲಿವುಡ್‌ನಲ್ಲಿ ಗುಸುಗುಸು ಹಬ್ಬಿದೆ. ಇನ್ನು ಮುಂದೆ ಯಶ್ ರಾಜ್ ಫಿಲಂಸ್ ನಿರ್ಮಾಣ ಸಂಸ್ಥೆ, ನಟ ಅಕ್ಷಯ್ ಕುಮಾರ್ ಜೊತೆಗೆ ಕೆಲಸ ಮಾಡುವುದಿಲ್ಲವಂತೆ. ಸಂಪೂರ್ಣವಾಗಿ ಯಶ್ ರಾಜ ಫಿಲಂಸ್ ಇಂದ ಅಕ್ಷಯ್ ಕುಮಾರ್ ಅವರನ್ನು ಬ್ಯಾನ್ ಮಾಡಲಾಗಿದೆ ಎನ್ನಲಾಗಿದೆ.

ದಶಕಗಳ ನಂತ್ರ ಕಿಲಾಡಿ ಜೊತೆ ಸಿನಿಮಾ!

ದಶಕಗಳ ನಂತ್ರ ಕಿಲಾಡಿ ಜೊತೆ ಸಿನಿಮಾ!

ಇನ್ನು ಯಶ್ ರಾಜ್ ಫಿಲಂಸ್ ಸಂಸ್ಥೆ ಮತ್ತು ಅಕ್ಷಯ್ ಕುಮಾರ್ ನಡುವೆ ಒಂದು ಇಂಟರೆಸ್ಟಿಂಗ್ ವಿಚಾರ ಇದೆ. ಮೊದಲು ಅಕ್ಷಯ್ ಕುಮಾರ್ ಯಶ್ ರಾಜ ಫಿಲ್ಮ್ಸ್ ಸಂಸ್ಥೆಯಲ್ಲಿ ಕಾಣಿಸಿಕೊಂಡಿದ್ದು 'ದಿಲ್ ತೋ ಪಾಗಲ್ ಹೈ' ಸಿನಿಮಾದಲ್ಲಿ. ಆದರೆ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್‌ಗೆ ಅವಕಾಶ ಕೊಡಬಾರದು ಯಾಕೆಂದರೆ ಅವರು ಅಭಿನಯದ ಸಿನಿಮಾಗಳು ಸೋಲುತ್ತವೆ ಎಂದು ಯಶ್ ಚೋಪ್ರಾಗೆ ಹಲವರು ಹೇಳಿದ್ದರಂತೆ. ಆದರೆ ಆ ಚಿತ್ರದಲ್ಲಿ ಅಕ್ಷಯ್ ಕುಮಾರ್‌ಗೆ ಅವಕಾಶ ಸಿಕ್ಕಿತ್ತು. ಬಳಿಕ ಯಶ್‌ ರಾಜ್ ಸಂಸ್ಥೆಯ 'ತಶನ್' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರು. ಬಳಿಕ ಯಶ್ ರಾಜ್ ಫಿಲಂಸ್ ಅಕ್ಷಯ್ ಕುಮಾರ್‌ರನ್ನು ದೂರ ಇಟ್ಟಿತ್ತು.

ಅಕ್ಷಯ್ ಕುಮಾರ್ ಸಂಪೂರ್ಣ ಬ್ಯಾನ್!

ಅಕ್ಷಯ್ ಕುಮಾರ್ ಮಾಡಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಹಾಗಾಗಿ ಹಲವು ವರ್ಷಗಳಿಂದ ಯಶ್ ರಾಜ್ ನಿರ್ಮಾಣ ಸಂಸ್ಥೆ ಕಿಲಾಡಿ ಜೊತೆ ಸಿನಿಮಾ ಮಾಡಬೇಕು ಎನ್ನುವ ಯೋಜನೆಯಲ್ಲಿತ್ತು. ಹಾಗಾಗಿ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಮಾಡಿದ್ದು. ಆದರೆ ಈ ಸಿನಿಮಾ ಸೋತಿದೆ. ಇದಕ್ಕೆ ಅಕ್ಷಯ್ ಕುಮಾರ್ ಕಾರಣ ಎಂದು ನಿರ್ಮಾಪಕ ಆದಿತ್ಯ ಚೋಪ್ರಾ ಬೆಟ್ಟು ಮಾಡಿ ತೋರಿಸಿದ್ದಾರೆ. ಜೊತೆಗೆ ಅಕ್ಷಯ್ ಕುಮಾರ್ ಅವರನ್ನು ತಮ್ಮ ಪ್ರೊಡಕ್ಷನ್ ಸಂಸ್ಥೆಯಿಂದ ಸಂಪೂರ್ಣವಾಗಿ ಬ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿಯನ್ನು ಸಿನಿಮಾ ವಿಶ್ಲೇಷಕ ಉಮೈರ್ ಸಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Yash Raj Films Banned Akshay Kumar Forever Because Of Samrat Prithviraj Flop, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X