For Quick Alerts
  ALLOW NOTIFICATIONS  
  For Daily Alerts

  ಶಾರುಖ್ 'ಫ್ಯಾನ್' ಸಿನಿಮಾದಿಂದ ಅಭಿಮಾನಿಗೆ ಮೋಸ: ದಂಡ ವಿಧಿಸಿದ ಸುಪ್ರೀಂಕೋರ್ಟ್

  |

  ಬಾಲಿವುಡ್ ಕಿಂಗ್ ಖಾನ್ ಶಾರುಖ್​ ಖಾನ್​ ನಟನೆಯ 'ಫ್ಯಾನ್​' ಚಿತ್ರತಂಡಕ್ಕೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ. ಈ ಸಿನಿಮಾ ಬಿಡುಗಡೆಯಾಗಿ 5 ವರ್ಷಗಳಾಗಿದ್ದು, ಇದೀಗ ಸುಪ್ರೀಂಕೋರ್ಟ್ ನಿಂದ ಚಿತ್ರತಂಡಕ್ಕೆ 15 ಸಾವಿರ ರೂ. ದಂಡ ಬಿದ್ದಿದೆ. ಸಿನಿಮಾ ನಿರ್ಮಾಣ ಮಾಡಿದ ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆಗೆ ಕೋರ್ಟ್​ ಛೀಮಾರಿ ಹಾಕಿದೆ. 'ಫ್ಯಾನ್​' ಸಿನಿಮಾದಿಂದ ನಿರಾಸೆಗೊಂಡ ಅಭಿಮಾನಿಗೆ 15 ಸಾವಿರ ರೂ. ಪರಿಹಾರ ಕೊಡುವಂತೆ ಆದೇಶಿಸಿದೆ. ಅಷ್ಟಕ್ಕೂ ಆಗಿದ್ದೇನು ಅಂತೀರಾ?

  ಶಾರುಖ್ ನಟನೆಯ ಫ್ಯಾನ್ ಸಿನಿಮಾ ತೆರೆಕಂಡ ನಂತರ ಚಿತ್ರದ ಪ್ರಮೋಷನ್‌​ಗಾಗಿ 'ಜಬ್ರಾ ಫ್ಯಾನ್​..' ಎಂಬ ಹಾಡನ್ನು ರಿಲೀಸ್​ ಮಾಡಲಾಗಿತ್ತು. ಅದನ್ನು ನೋಡಿದ ಅಫ್ರೀನ್​ ಫಾತಿಮಾ ಜೈದಿ ಎಂಬ ಅಭಿಮಾನಿ ತುಂಬ ಖುಷಿಪಟ್ಟಿದ್ದರು. ಹಾಗಾಗಿ ಸಿನಿಮಾ ನೋಡಲು ಕುಟುಂಬ ಸಮೇತ ಅವರು ಚಿತ್ರಮಂದಿರಕ್ಕೆ ತೆರಳಿದ್ದರು. ಆದರೆ ಸಿನಿಮಾದಲ್ಲಿ ಆ ಹಾಡು ಬರಲೇ ಇಲ್ಲ. ಅದರಿಂದ ನಿರಾಸೆಗೊಂಡ ಅವರು 'ಫ್ಯಾನ್​' ಚಿತ್ರತಂಡದ ವಿರುದ್ಧ ದೂರು ನೀಡಿದ್ದರು. ಆ ಸಂಬಂಧ ಸುಪ್ರೀಂ ಕೋರ್ಟ್​ ಈಗ ತೀರ್ಪು ನೀಡಿದೆ.

  "ಶಾರುಖ್​ ನಟನೆಯ ಫ್ಯಾನ್​ ಸಿನಿಮಾದಿಂದ ನನಗೆ ಮೋಸ ಆಗಿದೆ. ಬಹಳ ಆಸೆಯಿಂದ ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಸಿನಿಮಾದಲ್ಲಿ ಜಬ್ರಾ ಫ್ಯಾನ್​.. ಹಾಡು ಬಂದಿಲ್ಲ. ಇದರಿಂದ ನನ್ನ ಮಕ್ಕಳಿಗೆ ತುಂಬ ನಿರಾಸೆ ಆಯಿತು. ಅಂದು ರಾತ್ರಿ ಮಕ್ಕಳು ಊಟ ಮಾಡಲೇ ಇಲ್ಲ. ಇದರಿಂದ ಅವರಿಗೆ ಅಸಿಡಿಟಿ ಹೆಚ್ಚಾಗಿ, ಆಸ್ಪತ್ರೆಗೆ ಸೇರಿಸಬೇಕಾಯಿತು" ಎಂದು ತಮ್ಮ ದೂರಿನಲ್ಲಿ ಅಫ್ರೀನ್​ ಫಾತಿಮಾ ಜೈದಿ ಉಲ್ಲೇಖಿಸಿದ್ದರು.

  "ಈ ರೀತಿ ಪ್ರಮೋಷನಲ್​ ಸಾಂಗ್​ ಮಾಡುವುದು ಸಹಜ ಸಂಗತಿ" ಎಂದು 'ಫ್ಯಾನ್​' ಸಿನಿಮಾ ನಿರ್ಮಾಪಕರ ಪರ ವಕೀಲರು ವಾದ ಮಾಡಿದರು. ಆದರೆ ಅದನ್ನು ಸುಪ್ರೀಂ ಕೋರ್ಟ್​ ನ್ಯಾಯಾಧೀಶರು ಒಪ್ಪಲಿಲ್ಲ. "ಟ್ರೇಲರ್​​ನಲ್ಲಿ ಏನೋ ತೋರಿಸಿ, ಸಿನಿಮಾದಲ್ಲಿ ಮತ್ತಿನ್ನೇನೋ ತೋರಿಸಿದರೆ ಅದು ಜನರಿಗೆ ಮೋಸ ಮಾಡಿದಂತೆ ಆಗುತ್ತದೆ. ಸಿನಿಮಾದಲ್ಲಿ ಆ ಸಾಂಗ್​ ಇಲ್ಲ ಎಂದಮೇಲೆ ಅದರನ್ನು ಪ್ರಚಾರಕ್ಕಾಗಿ ಯಾಕೆ ಬಳಸಿಕೊಳ್ಳಬೇಕು? ಇಂಥ ಸಂಗತಿಗಳು ನಿಲ್ಲಬೇಕು" ಎಂದು ಹೇಳಿರುವ ಕೋರ್ಟ್​​, ಆ ಅಭಿಮಾನಿಗೆ 15 ಸಾವಿರ ರೂ. ಪರಿಹಾರ ನೀಡುವಂತೆ 'ಫ್ಯಾನ್​' ಚಿತ್ರದ ನಿರ್ಮಾಪಕರಿಗೆ ಆದೇಶಿಸಿದೆ.

  ಅಂದಹಾಗೆ ಶಾರುಖ್ ನಟನೆಯ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋತಿತ್ತು. ಅಭಿಮಾನಿಗಳು ಸಹ ಚಿತ್ರದ ಬಗ್ಗೆ ಭಾರಿ ಬೇಸರ ಹೊರ ಹಾಕಿದ್ದರು. ಶಾರುಖ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋತ ಬಳಿಕ ಸಿನಿಮಾವನ್ನು ಮಾಡುವುದನ್ನೇ ನಿಲ್ಲಿಸಿದ್ದರು. ಇದೀಗ ಮತ್ತೆ ಸಾಲು ಸಾಲು ಸಿನಿಮಾಗಳ ಮೂಲಕ ಮತ್ತೆ ವಾಪಸ್ ಆಗಿದ್ದಾರೆ. ಆದರೆ ಅಧಿಕೃತವಾಗಿ ಯಾವ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ.

  English summary
  Yash Raj Films Had To Pay Rs 15,000 To SRK’s Fan After Legal Trouble With Fan movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X