'ರಾಮಾಯಣ' ಪಾರ್ಟ್‌-1 ಬಜೆಟ್ಟೇ 835 ಕೋಟಿ ರೂ.? ಇದರಲ್ಲಿ ಯಶ್ ಪಾಲು ಎಷ್ಟು?

ಅಧಿಕೃತವಾಗಿ ಘೋಷಣೆ ಆಗುವ ಮುನ್ನವೇ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಜೊತೆಗೆ ಯಶ್ ಕೂಡ ನಟಿಸೋ ಬಗ್ಗೆ ಚರ್ಚೆ ನಡೀತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಕೂಡ ಆರಂಭವಾಗಿದೆ ಎಂದು ವರದಿಯಾಗುತ್ತಿದೆ.

ಬಾಲಿವುಡ್ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆ ಸೇರಿ ನಟ ಯಶ್ 'ರಾಮಾಯಣ' ನಿರ್ಮಾಣ ಮಾಡುತ್ತಿದ್ದಾರೆ. ಘಟಾನುಘಟಿ ಕಲಾವಿದರು ಚಿತ್ರದ ಭಾಗವಾಗಲಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹಲವು ಬಾರಿ ಶ್ರೀರಾಮನ ಕಥೆ ತೆರೆಗೆ ಬಂದಿದ್ದರೂ ಹೊಸ ರೂಪದಲ್ಲಿ ಮತ್ತೆ ತೆರೆಗೆ ತರುವ ಪ್ರಯತ್ನ ನಡೀತಿದೆ.

Yash Ranbir kapoor s Ramayana film whopping budget will blow your mind away

3 ಭಾಗಗಳಾಗಿ 'ರಾಮಾಯಣ' ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತವಾಗಿ ಸಿನಿಮಾ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. ಇದೆಲ್ಲದರ ನಡುವೆ ನಮಿತ್ ಮಲ್ಹೋತ್ರಾ ಒಡೆತನದ ಸಿನಿಮಾ ನಿರ್ಮಾಣ ಸಂಸ್ಥೆಗೆ ಮತ್ತಿಬ್ಬರು ನಿರ್ಮಾಪಕರು ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಮೊದಲಿಗೆ ನಮಿತ್ ಜೊತೆ ಸೇರಿ ಮಧು ಮಂಥೇನ ಹಾಗೂ ಅಲ್ಲು ಅರವಿಂದ್ ಈ ಸಿನಿಮಾ ಆರಂಭಿಸಿದರು.

ಸದ್ಯ ಯಶ್ ಜೊತೆ ಸೇರಿ ನಮಿತ್ ಮಾತ್ರ 'ರಾಮಾಯಣ' ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹಾಗಾಗಿ ಇನ್ನುಳಿದ ಇಬ್ಬರು ಕಥೆ ಸಿದ್ಧಪಡಿಸಲು ನಾವು ಹಣ, ಶ್ರಮ ವ್ಯಯಿಸಿದ್ದೇವೆ. ಹಾಗಾಗಿ ನಮಗೆ ಕೊಡಬೇಕಾದ ಹಣ ಕೊಡಿ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಸಿನಿಮಾ ಬಜೆಟ್ ಬಗ್ಗೆ ಇದೀಗ ಹೊಸ ಸುದ್ದಿ ಕೇಳಿಬರ್ತಿದೆ. ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ ಇದು ಎನ್ನಲಾಗ್ತಿದೆ.

Yash Ranbir kapoor s Ramayana film whopping budget will blow your mind away

ಬಾಲಿವುಡ್ ಹಂಗಾಮಾ ವರದಿ ಪ್ರಕಾರ 'ರಾಮಾಯಣ' ಚಿತ್ರದ ಮೊದಲ ಭಾಗದ ಬಜೆಟ್ 835 ಕೋಟಿ ರೂ. ಎನ್ನಲಾಗ್ತಿದೆ. ಅದು ಕೂಡ ಮೊದಲ ಭಾಗಕ್ಕೆ ಇಷ್ಟು ಬಂಡವಾಳ ಹೂಡುತ್ತಿದ್ದಾರೆ ಎನ್ನುವ ಚರ್ಚೆ ಆಗುತ್ತಿದೆ. ಮೊದಲ ಭಾಗದ ಸಕ್ಸಸ್‌ಗೆ ಅನುಗುಣವಾಗಿ ಇನ್ನುಳಿದ 2 ಭಾಗಗಳ ಬಜೆಟ್ ವೃದ್ಧಿಯಾಗಲಿದೆ. ಇನ್ನು ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ಗಾಗಿ 600 ದಿನ ವ್ಯಯಿಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.

ಸದ್ಯಕ್ಕೆ 'ರಾಮಾಯಣ' ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಸಿನಿಮಾ ಬಿಡುಗಡೆಗೆ ಇನ್ನು 2 ವರ್ಷಗ ಬೇಕಾಗಬಹುದು. ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ರಾವಣನಾಗಿ ಯಶ್, ಕೈಕೇಯಿ ಆಗಿ ಲಾರಾ ದತ್ತಾ, ಹನುಮಂತನಾಗಿ ಸನ್ನಿ ಡಿಯೋಲ್, ವಿಭೀಷಣ ಆಗಿ ವಿಜಯ್ ಸೇತುಪತಿ, ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸುತ್ತಾರೆ ಎನ್ನಲಾಗ್ತಿದೆ.

ಯಶ್ ತಮ್ಮ ಮಾನ್‌ಸ್ಟರ್ ಮೈಂಡ್ಸ್‌ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್' ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಈ ಚಿತ್ರ ನಿರ್ಮಿಸಿ ನಟಿಸುತ್ತಿದ್ದಾರೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರಕ್ಕೆ 90 ಕೋಟಿ ರೂ.ವರೆಗೆ ಯಶ್ ಹಣ ಹೂಡುತ್ತಾರೆ ಎನ್ನಲಾಗ್ತಿದೆ.

'ರಾಮಾಯಣ' ಚಿತ್ರಕ್ಕೂ ಯಶ್‌ 50-50 ಪಾರ್ಟ್ನರ್‌ಶಿಪ್‌ಗೆ ಒಪ್ಪಿದ್ದಾರೆ ಎನ್ನುವ ಊಹಾಪೋಹವಿದೆ. ಆ ಲೆಕ್ಕದಲ್ಲಿ ರಾಕಿಂಗ್ ಸ್ಟಾರ್ ಪೌರಾಣಿಕ ದೃಶ್ಯಕಾವ್ಯಕ್ಕಾಗಿ 400 ಕೋಟಿ ರೂ. ಹೂಡಿಕೆ ಮಾಡುವ ಸಾಧ್ಯತೆಯಿದೆ.

More from Filmibeat

English summary
Massive budget of nitesh tiwari's Ramayana; Part 1 is Rs 835 cr;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X