ಯಶ್ 'ಟಾಕ್ಸಿಕ್' ಎದುರು ಸಲ್ಮಾನ್ ಖಾನ್ 'ಬ್ಯಾಟಲ್'? ಯಾರ ಕೊರಳಿಗೆ ವಿಜಯಮಾಲೆ?

ಈ ವರ್ಷ ದೊಡ್ಡ ಸಿನಿಮಾಗಳ ಆರ್ಭಟ ಮುಗಿದಿದೆ. ಮುಂದಿನ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲಿದೆ. ಮಾರ್ಚ್ 19ಕ್ಕೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗ್ತಿದೆ. ರಾಕಿಭಾಯ್ ಆರ್ಭಟಕ್ಕೆ ಹೆದರಿ ಎಲ್ಲಾ ದೂರ ಓಡುತ್ತಿದ್ದಾರೆ. ಆದರೆ ಸಲ್ಮಾನ್ ಖಾನ್ ಅಖಾಡಕ್ಕೆ ಇಳಿತ್ತಾರಂತೆ.

ಸಲ್ಮಾನ್ ಖಾನ್ ಹೊಸ ಸಿನಿಮಾ 'ಬ್ಯಾಟಲ್ ಆಫ್ ಗಲ್ವಾನ್' ರಿಲೀಸ್ ಡೇಟ್ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಈಗಾಗಲೇ ಈ ಚಿತ್ರದ ಪೋಸ್ಟರ್‌ಗಳು ಲುಕ್ ರಿಲೀಸ್ ಆಗಿವೆ. ಈ ಹೊಸ ಅವತಾರದಲ್ಲಿ ಸಲ್ಮಾನ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದು 2020ರ ಗಲ್ವಾನ್ ಕಣಿವೆಯ ಘಟನೆಯನ್ನು ಆಧರಿಸಿದ ಸಿನಿಮಾ. ಚಿತ್ರವು ಭಾರತೀಯ ಸೈನಿಕರ ಶೌರ್ಯದ ಕಥೆ ಹೇಳಲಿದೆ. ಅಪೂರ್ವ ಲಖಿಯಾ ಆಕ್ಷನ್-ಕಟ್ ಹೇಳಿದ್ದರು ಕರ್ನಲ್ ಸಂತೋಷ್ ಬಾಬು ಪಾತ್ರದಲ್ಲಿ ಸಲ್ಮಾನ್ ಖಾನ್ ಮಿಂಚಿದ್ದಾರೆ.

Yash s Toxic vs Salman Khan s Battle of Galwan Eid 2026 Box Office Clash Set to Shake India

'ಬ್ಯಾಟಲ್ ಆಫ್ ಗಲ್ವಾನ್' ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಆದರೆ ಬಾಲಿವುಡ್ ಮೂಲಗಳ ಪ್ರಕಾರ ಚಿತ್ರತಂಡವು ದೊಡ್ಡ ಪ್ಲಾನ್ ಮಾಡಿದೆ. ಚಿತ್ರವನ್ನು 2026ರಲ್ಲಿ ತೆರೆಗೆ ತರಲು ಪ್ರಯತ್ನಿಸಲಾಗುತ್ತಿದೆ. ಇದು ಬಹುತೇಕ ಜೂನ್ 2026ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಸದ್ಯದ ಮಾಹಿತಿ ಪ್ರಕಾರ ನಿರ್ಮಾಪಕರು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಸಲ್ಮಾನ್ ಖಾನ್ ಮತ್ತು ಈದ್ ಹಬ್ಬಕ್ಕೆ ಹಳೆಯ ನಂಟು ಇದೆ. ಈ ಹಬ್ಬದ ಸಮಯದಲ್ಲಿ ಅವರ ಸಿನಿಮಾಗಳು ಬಂದರೆ ಅದು ಬ್ಲಾಕ್‌ಬಸ್ಟರ್ ಆಗುವುದು ಗ್ಯಾರಂಟಿ ಎನ್ನುವ ಮಾತಿದೆ. ಕೆಲವೊಮ್ಮೆ ಈದ್ ರೇಸ್‌ನಿಂದ ಸಲ್ಲು ಹಿಂದೆ ಸರಿದಿದ್ದು ಇದೆ. 2026ರ ಈದ್ ಸಂಭ್ರಮದಲ್ಲಿ ಸಲ್ಲು ತಮ್ಮ ಚಿತ್ರವನ್ನು ರಿಲೀಸ್ ಮಾಡಲು ಪ್ಲ್ಯಾನ್ ಮಾಡ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ದೊಡ್ಡ ಖುಷಿ ಸುದ್ದಿ. ಒಂದು ಮೂಲದ ಪ್ರಕಾರ ಶೂಟಿಂಗ್ ಡಿಸೆಂಬರ್ ವೇಳೆಗೆ ಮುಗಿಯಲಿದೆ. ಹಾಗಾಗಿ ಮಾರ್ಚ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಬಹುದು.

ಸಲ್ಮಾನ್ ಖಾನ್ ಅವರು ಈದ್ ದಿನಾಂಕವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ವಿಚಾರವಾಗಿ ಸದ್ಯದಲ್ಲೇ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಈ ನಿರ್ಧಾರವು ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಈದ್ ಸಮಯದಲ್ಲಿ ಚಿತ್ರ ಬಂದರೆ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಯಾಗುವುದು ಖಚಿತ. ಸಲ್ಮಾನ್ ಖಾನ್ ಅವರ ಈ ನಿರ್ಧಾರದಿಂದಾಗಿ ಬಾಕ್ಸಾಫೀಸ್ ಕ್ಲ್ಯಾಶ್ ಆಗುವ ಸಾಧ್ಯತೆ ಇದೆ. 2026ರ ಈದ್ ದಿನಾಂಕಕ್ಕೆ ಈಗಾಗಲೇ ಎರಡು ದೊಡ್ಡ ಸಿನಿಮಾಗಳು ಘೋಷಣೆಯಾಗಿವೆ. ಅವುಗಳಲ್ಲಿ ಒಂದು ಕೆಜಿಎಫ್ ಸ್ಟಾರ್ ಯಶ್ ಅವರ ಸಿನಿಮಾ 'ಟಾಕ್ಸಿಕ್'. ಇನ್ನೊಂದು ಅಜಯ್ ದೇವಗನ್ ರವರ ಬಹುತಾರಾಗಣದ 'ಧಮಾಲ್ 4'.

ಒಂದು ವೇಳೆ 'ಬ್ಯಾಟಲ್ ಆಫ್ ಗಲ್ವಾನ್' ಕೂಡ ಈದ್‌ಗೆ ಬಂದರೆ ತ್ರೀ-ವೇ ಕ್ಲ್ಯಾಶ್ ಆಗಲಿದೆ. ಬಾಲಿವುಡ್ ಪಂಡಿತರು ಈ ಬಗ್ಗೆ ಈಗಾಗಲೇ ಚರ್ಚೆ ಮಾಡುತ್ತಿದ್ದಾರೆ. ಈ ಬಿಗ್ ಕ್ಲ್ಯಾಶ್ ಕುರಿತು ಬಾಕ್ಸ್ ಆಫೀಸ್‌ನಲ್ಲಿ ಭಾರೀ ನಿರೀಕ್ಷೆ ಇದೆ. ಪ್ರೇಕ್ಷಕರು ಯಾವ ಚಿತ್ರಕ್ಕೆ ಹೆಚ್ಚು ಮಣೆ ಹಾಕುತ್ತಾರೆ ಎಂಬ ಕುತೂಹಲವಿದೆ. ಸಲ್ಮಾನ್ ಅವರು ಯಶ್ ಮತ್ತು ಅಜಯ್ ದೇವಗನ್ ಅವರ ಚಿತ್ರಗಳಿಗೆ ಕಾಂಪಿಟೀಷನ್ ಕೊಡಲು ಸಿದ್ಧವಾಗಿದ್ದಾರೆ.

Yash s Toxic vs Salman Khan s Battle of Galwan Eid 2026 Box Office Clash Set to Shake India

ಅಭಿಮಾನಿಗಳು ಈ ಕ್ಲ್ಯಾಶ್ ಬಗ್ಗೆ ತುಂಬಾ ಥ್ರಿಲ್ ಆಗಿದ್ದಾರೆ. ಟಾಕ್ಸಿಕ್ ಹಾಗೂ 'ಬ್ಯಾಟಲ್ ಆಫ್ ಗಲ್ವಾನ್' ಕ್ಲ್ಯಾಶ್‌ ಬಾಲಿವುಡ್ ವಲಯದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಈ ಹಿಂದೆ ಯಶ್ ನಟನೆಯ 'KGF' ಚಾಪ್ಟರ್-1 ಎದುರು ಶಾರುಖ್ ಖಾನ್ ನಟನೆಯ 'ಜಿರೋ' ಸಿನಿಮಾ ಬಂದು ಸೋತಿತ್ತು. ಈಗ ಯಶ್ 'ಟಾಕ್ಸಿಕ್' ಜೊತೆ ಸಲ್ಮಾನ್ ಖಾನ್ ನಟನೆಯ 'ಬ್ಯಾಟಲ್ ಆಫ್ ಗಲ್ವಾನ್' ಬರ್ತಿರೋದು ಕುತೂಹಲ ಮೂಡಿಸಿದೆ.

More from Filmibeat

Read more about: yash toxic salman khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X