For Quick Alerts
  ALLOW NOTIFICATIONS  
  For Daily Alerts

  29 ದಾಖಲೆ ಬರೆದ 'ಕೆಜಿಎಫ್‌ 2'ಗೆ ಇಂದೊಂದು ದಾಖಲೆ ಮುರಿಯೋಕೆ ಆಗಲಿಲ್ಲ

  |

  ಇಡೀ ವಿಶ್ವದ ಕಣ್ಣು ಈಗ ಕನ್ನಡ ಚಿತ್ರರಂಗದ ಮೇಲಿದೆ. 'ಕೆಜಿಎಫ್ 2' ಬಾಕ್ಸಾಫೀಸ್ ದಾಖಲೆಗಳನ್ನು ಕಣ್ಣಾರೆ ನೋಡಿದ ಬಳಿಕ ಸ್ಯಾಂಡಲ್‌ವುಡ್ ಸಿನಿಮಾಗಳ ಕಡೆ ತಿರುಗಿ ನೋಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಮಧ್ಯೆ 'ಕೆಜಿಎಫ್ 2' ಒಂದೊಂದೇ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಾ? ಮುನ್ನುಗುತ್ತಿದೆ.

  'ಕೆಜಿಎಫ್ 2' ಬಿಡುಗಡೆ ಆದಲ್ಲಿಂದ ಸುಮಾರು 29 ದಾಖಲೆಗಳನ್ನು ಬರೆದಿದೆ. ಬಾಕ್ಸಾಫೀಸ್‌ನಲ್ಲಿ ರಾಕಿಭಾಯ್ ಹವಾ ಕಂಡು ಭಾರತೀಯ ಚಿತ್ರರಂಗ ತಲೆಕೆಡಿಸಿಕೊಂಡಿದೆ. ಇಷ್ಟೊಂದು ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಇದೊಂದು ದಾಖಲೆಯನ್ನು ಮುರಿಯಲು ಮಾತ್ರ ಸಾಧ್ಯವಾಗಿಲ್ಲ.

  ಗಡಿಗಳ ಒಡೆದು ವಿಶ್ವದೆಲ್ಲೆಡೆ ಹವಾ ಎಬ್ಬಿಸಿರುವ 'ಕೆಜಿಎಫ್ 2'ಗಡಿಗಳ ಒಡೆದು ವಿಶ್ವದೆಲ್ಲೆಡೆ ಹವಾ ಎಬ್ಬಿಸಿರುವ 'ಕೆಜಿಎಫ್ 2'

  ವಿಶ್ವದ ಉದ್ದಗಲಕ್ಕೂ ಬೇಜಾನ್ ಸದ್ದು ಮಾಡುತ್ತಿರುವ 'ಕೆಜಿಎಫ್ 2' ಒಂದೇ ದಾಖಲೆಯಿಂದ ವಂಚಿತವಾಗಿದೆ. ಒಂದು ವೇಳೆ ಈ ದಾಖಲೆಯನ್ನೂ ಮುರಿದಿದ್ದರೆ, 'ಕೆಜಿಎಫ್ 2' ಮುಂದೆ ಬಾಲಿವುಡ್‌ ಮಂಡಿಯೂರಿದಂತಾಗುತ್ತಿತ್ತು.

  ಬಾಲಿವುಡ್ ದಾಖಲೆ ಬ್ರೇಕ್ ಮಾಡಿಲ್ಲ 'ಕೆಜಿಎಫ್ 2'

  ಬಾಲಿವುಡ್ ದಾಖಲೆ ಬ್ರೇಕ್ ಮಾಡಿಲ್ಲ 'ಕೆಜಿಎಫ್ 2'

  'ಕೆಜಿಎಫ್ 2' ಹಲವು ದಾಖಲೆಗಳನ್ನು ಮುರಿದಿದೆ. ಚಿತ್ರತಂಡದ ಪ್ರಕಾರವೇ ಸುಮಾರು 29ಕ್ಕೂ ಹೆಚ್ಚು ದಾಖಲೆಗಳನ್ನು ಮುರಿದಿದೆ. ಆದರೆ, ವೀಕೆಂಡ್‌ನಲ್ಲಿ ಬಾಲಿವುಡ್ ಸಿನಿಮಾಗಳ ಈ ಒಂದು ದಾಖಲೆಯನ್ನು ಮಾತ್ರ 'ಕೆಜಿಎಫ್ 2' ಬ್ರೇಕ್ ಮಾಡಲು ಸಾಧ್ಯವಾಗಲೇ ಇಲ್ಲ. ವಿಶ್ವದಾದ್ಯಂತ ವೀಕೆಂಡ್‌ ಕಲೆಕ್ಷನ್‌ನಲ್ಲಿ 'ಕೆಜಿಎಫ್ 2' ಐದನೇ ಸ್ಥಾನದಲ್ಲಿದೆ. ವಾರಾಂತ್ಯದ ಹೊತ್ತಿಗೆ ಬಾಲಿವುಡ್‌ನ ನಾಲ್ಕು ಸಿನಿಮಾಗಳ ಕಲೆಕ್ಷನ್ ಅನ್ನು ಹಿಂದಿಕ್ಕಲು 'ಕೆಜಿಎಫ್ 2' ಸಿನಿಮಾ ಸೋತಿದೆ.

  'ಕೆಜಿಎಫ್ 2', 'ಬಾಹುಬಲಿ 2', 'RRR' ದಾಖಲೆ ಮುರಿಯಲು 'ಪುಷ್ಪ 2' ಮಾಸ್ಟರ್ ಪ್ಲ್ಯಾನ್'ಕೆಜಿಎಫ್ 2', 'ಬಾಹುಬಲಿ 2', 'RRR' ದಾಖಲೆ ಮುರಿಯಲು 'ಪುಷ್ಪ 2' ಮಾಸ್ಟರ್ ಪ್ಲ್ಯಾನ್

  4 ಸಿನಿಮಾಗಳ ದಾಖಲೆ ಮುರಿಯಲಿಲ್ಲ

  4 ಸಿನಿಮಾಗಳ ದಾಖಲೆ ಮುರಿಯಲಿಲ್ಲ

  ಸುದೀರ್ಘ ರಜೆಯ ಹೊರತಾಗಿಯೂ 'ಕೆಜಿಎಫ್ 2' ವೀಕೆಂಡ್‌ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದಿಲ್ಲ. ಹೌದು.. ಸಲ್ಮಾನ್ ಖಾನ್ ನಟನೆಯ 'ಸುಲ್ತಾನ್', ಪ್ರಭಾಸ್ ನಟನೆಯ 'ಬಾಹುಬಲಿ 2', ಆಮಿರ ಖಾನ್ ನಟನೆಯ 'ದಂಗಲ್' ಹಾಗೂ ರಣ್‌ಬೀರ್ ಕಪೂರ್ ಅಭಿನಯದ 'ಸಂಜು' ಚಿತ್ರದ ಮೊದಲ ವಾರದ ಗಳಿಕೆಯನ್ನು ಸೈಡ್ ಹಾಕುವಲ್ಲಿ ಸೋತಿದೆ. 'ಸುಲ್ತಾನ್' ಸಿನಿಮಾ ಮೊದಲ ವಾರ 210 ಕೋಟಿ, 'ಬಾಹುಬಲಿ 2' ಸಿನಿಮಾ 209 ಕೋಟಿ, ರಣ್‌ಬೀರ್ ಕಪೂರ್ ಅಭಿನಯದ 'ಸಂಜು' 204 ಕೋಟಿ, ಆಮಿರ್ ಖಾನ್ ಅಭಿನಯದ 'ದಂಗಲ್' 199 ಕೋಟಿ ಕಲೆಕ್ಷನ್ ಮಾಡಿತ್ತು. ಅದೇ 'ಕೆಜಿಎಫ್ 2' 198 ಕೋಟಿ ಗಳಿಕೆ ಮಾಡಿದೆ.

  'ಕೆಜಿಎಫ್ 2' ದಾಖಲೆ ಗಳಿಕೆ

  'ಕೆಜಿಎಫ್ 2' ದಾಖಲೆ ಗಳಿಕೆ

  'ಕೆಜಿಎಫ್ 2' ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಮೊದಲ ದಿನವೇ ದಾಖಲೆ ಬರೆದಿತ್ತು. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಫಸ್ಟ್ ಡೇನೇ 52.5 ಕೋಟಿ ಗಳಿಕೆ ಮಾಡಿದೆ. ಅದೇ 'ಸಂಜು' ಸಿನಿಮಾ ಮೊದಲ 34.2 ಕೋಟಿ, ಸಲ್ಮಾನ್ ಖಾನ್ 'ಸುಲ್ತಾನ್' 36.6 ಕೋಟಿ, ಪ್ರಭಾಸ್ 'ಬಾಹುಬಲಿ 2' 40.7 ಕೋಟಿ ಹಾಗೂ 'ವಾರ್' ಸಿನಿಮಾ 50.6 ಕೋಟಿ ಕಲೆಕ್ಷನ್ ಮಾಡಿತ್ತು. ಹೀಗಿದ್ದರೂ, 'ಕೆಜಿಎಫ್ 2' ಸಿನಿಮಾ ವೀಕೆಂಡ್ ಮುಗಿಯುವ ವೇಳೆಗೆ ಯಾಕೆ ಕಲೆಕ್ಷನ್ ಮಾಡಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.

  ಹಿಂದಿಯಲ್ಲಿ ಸೌತ್ ಚಿತ್ರಗಳ ಯಶಸ್ಸು ನನಗೆ ಅಚ್ಚರಿಯಲ್ಲ: ಅನಿಲ್ ಕಪೂರ್!ಹಿಂದಿಯಲ್ಲಿ ಸೌತ್ ಚಿತ್ರಗಳ ಯಶಸ್ಸು ನನಗೆ ಅಚ್ಚರಿಯಲ್ಲ: ಅನಿಲ್ ಕಪೂರ್!

  ಬಾಲಿವುಡ್ ಕಲೆಕ್ಷನ್ ಎಷ್ಟು?

  ಬಾಲಿವುಡ್ ಕಲೆಕ್ಷನ್ ಎಷ್ಟು?

  ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ 6 ದಿನಗಳಲ್ಲಿ 255.05 ಕೋಟಿ ಗಳಿಕೆ ಕಂಡಿದೆ. ಇಂದಿಗೆ( ಏಪ್ರಿಲ್ 21) ಸರಿಯಾಗಿ ಒಂದು ವಾರ ಕಂಪ್ಲೀಟ್ ಆಗಿದ್ದು, 265 ಕೋಟಿ ಗಳಿಕೆ ಮಾಡುವ ಸಾಧ್ಯತೆಯಿದೆ. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ಬಾಹುಬಲಿ 2' ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದು, RRR ಗಳಿಸಿದ ಸಾವಿರ ಕೋಟಿ ಕಲೆಕ್ಷನ್ ದಾಖಲೆಯನ್ನು ಮೀರಿಸುತ್ತಾ? ಅನ್ನೋದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ.

  English summary
  Yash starrer KGF 2 Fails To Beat Salman Khan Movie Sultan, Prabhas Movie Baahubali 2, Ranbir Kapoor Movie Sanju and Aamir Khan Movie Dangal in worldwide weekend Collection, Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X