'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!

ರಾಕಿಂಗ್ ಸ್ಟಾರ್ ಯಶ್ ಲೆಕ್ಕಾಚಾರವೇ ಬೇರೆ. ಬ್ಯುಸಿನೆಸ್ ಸ್ಟ್ರಾಟಜಿನೇ ಬೇರೆ. ಪ್ರಭಾಸ್, ರಜನಿಕಾಂತ್, ಸಲ್ಮಾನ್ ಖಾನ್ ಎಲ್ಲರನ್ನು ಹಿಂದಿಕ್ಕಿ ಯಶ್ ದಾಖಲೆ ಬರೆಯುತ್ತಿದ್ದಾರೆ. ಬಾಲಿವುಡ್‌ನಲ್ಲಿ ಕೇಳಿಬರುತ್ತಿರುವ ಮಾತುಗಳು ನಿಜವೇ ಆಗಿದ್ದರೆ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಯಶ್ ಎನಿಸಿಕೊಳ್ಳಲಿದ್ದಾರೆ.

ನಟ ಯಶ್ ಲೆಕ್ಕಾಚಾರ ಯಾರ ಅಂಕೆಗೂ ಸಿಗುತ್ತಿಲ್ಲ. ಹೆಚ್ಚು ಸಂಭಾವನೆ ಕೊಟ್ಟರೆ ಸಾಕು ಎಂದು ಸ್ಟಾರ್ ನಟರು ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಬರೀ ಸಂಭಾವನೆ ಸಾಕಾ? ಅದು ಬಿಟ್ಟು ಒಂದು ಚಿತ್ರದಿಂದ ಇನ್ನು ಏನಾದರೂ ಸಿಗುತ್ತಾ? ಎಂದು ಯೋಚಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ನಟರು, ನಿರ್ದೇಶಕರು ಸಂಭಾವನೆ ಜೊತೆಗೆ ಲಾಭದಲ್ಲಿ ಲಾಭ ಕೇಳುವ ಪರಿಪಾಠ ಆರಂಭಿಸಿದ್ದಾರೆ. ಯಶ್ ಒಂದು ಹೆಜ್ಜೆ ಮುಂದೆ ಹೋಗಿ ತಾವೇ ಸಹ ನಿರ್ಮಾಪಕರಾಗಿಬಿಡುತ್ತಿದ್ದಾರೆ.

Yash s 50-50 Partnership deal with Toxic And Ramayana films producers

'KGF'-2 ಚಿತ್ರಕ್ಕಾಗಿ ಯಶ್ ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು ಪಡೆದಿದ್ದರು. ಚಿತ್ರದ ನಿರ್ಮಾಪಕರಲ್ಲಿ ಅವರು ಒಬ್ಬರು ಎನ್ನುವ ಮಾತುಗಳು ಕೇಳಿಬಂದಿತ್ತು. ಸದ್ಯ ಬಾಲಿವುಡ್‌ನಲ್ಲಿ ಚರ್ಚೆ ಆಗುತ್ತಿರುವ ಪ್ರಕಾರ 'KGF'-2 ಚಿತ್ರಕ್ಕೆ ಸಂಭಾವನೆ ಹಾಗೂ ಲಾಭದ ಪಾಲು ಸೇರಿ ಯಶ್ 200 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗುತ್ತಿದೆ. ಅದೇ ನಿಜವಾಗಿದ್ದೇ ಇದು ಭಾರತೀಯ ಚಿತ್ರರಂಗದಲ್ಲೇ ಒಂದು ದಾಖಲೆ ಸರಿ.

ರಾಕಿಂಗ್ ಸ್ಟಾರ್ ದಾಖಲೆಗಳ ಪರ್ವ 'KGF'-2 ಚಿತ್ರಕ್ಕೆ ನಿಲ್ಲುತ್ತಿಲ್ಲ. ಅಸಲಿ ಲೆಕ್ಕಾಚಾರ ಇನ್ನು ಮುಂದೆ ಶುರುವಾಗುತ್ತಿದೆ. 'ಟಾಕ್ಸಿಕ್' ಚಿತ್ರಕ್ಕೆ ಯಶ್ ಸಹ ನಿರ್ಮಾಪಕರಾಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ನಟ ಯಶ್ ಮಾನ್‌ಸ್ಟರ್ ಮೈಂಡ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣದಲ್ಲಿ ಕೈ ಜೋಡಿಸುತ್ತಿದ್ದಾರೆ. ಒಂದು ಮಾಹಿತಿ ಪ್ರಕಾರ ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಲಿದೆ.

Yash s 50-50 Partnership deal with Toxic And Ramayana films producers

ಇತ್ತೀಚೆಗೆ 'ರಾಮಾಯಣ' ಚಿತ್ರಕ್ಕೂ ಯಶ್ ಬಂಡವಾಳ ಹೂಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ಚಿತ್ರದಲ್ಲಿ ರಾವಣನಾಗಿ ನಟಿಸೋಕೆ ಯಶ್‌ ಅವರನ್ನು ಸಂಪರ್ಕಿಸಲಾಗಿತ್ತು. 150 ಕೋಟಿ ರೂ. ಸಂಭಾವನೆ ಕೊಡುವುದಾಗಿ ಹೇಳಿದಾಗ ತಾವೇ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸುವುದಾಗಿ ಯಶ್ ಹೇಳಿದ್ದರು ಎನ್ನಲಾಗ್ತಿದೆ. ಹಾಗಾಗಿ ನಮಿತ್ ಮಲ್ಹೋತ್ರಾ ಜೊತೆ ಸೇರಿ 'ರಾಮಾಯಣ' ಚಿತ್ರಕ್ಕೆ ಯಶ್ ಹಣ ಹೂಡುತ್ತಿದ್ದಾರೆ. ಜೊತೆಗೆ ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರ ಅಧಿಕೃತವಾಗಿ ಘೋಷಣೆ ಆಗಿಲ್ಲ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ರಣ್‌ಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಚಿತ್ರದಲ್ಲಿ ನಟಿಸಲಿದ್ದಾರೆ. ಇದೀಗ ಪಿಂಕ್‌ವಿಲ್ಲಾ ವರದಿ ಪ್ರಕಾರ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರದ ನಿರ್ಮಾಣದಲ್ಲಿ 50-50 ಡೀಲ್ ಕುದುರಿಸಿಕೊಂಡಿದ್ದಾರಂತೆ. ಆ ಅರ್ಥದಲ್ಲಿ ಚಿತ್ರ ನಿರ್ಮಾಣಕ್ಕೆ ಶೇ.50% ಬಂಡವಾಳ ಹೂಡಲಿದ್ದು ಆದಾಯದಲ್ಲಿ ಶೇ.50% ರಷ್ಟು ಪಾಲು ಪಡೆಯಲಿದ್ದಾರೆ.

ಮುಂದಿನ ವರ್ಷ ಏಪ್ರಿಲ್ 10ರಂದು 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಇನ್ನು ಬೆಂಗಳೂರಿನಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಇನ್ನು 'ರಾಮಾಯಣ' 3 ಭಾಗಗಳಾಗಿ ತೆರೆಗೆ ತರಲು ಮುಂದಾಗಿದ್ದು ಮೊದಲ ಭಾಗ ಕೂಡ ಮುಂದಿನ ವರ್ಷವೇ ರಿಲೀಸ್ ಆಗುವ ನಿರೀಕ್ಷೆಯಿದೆ. ಇನ್ನು ಯಶ್ ಜೊತೆ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿರುವ ಬಗ್ಗೆ ನಿರ್ಮಾಪಕರಾದ ವೆಂಕಟ್ ಕೋನಂಕಿ ಹಾಗೂ ನಿಮಿತ್ ಮಲ್ಹೋತ್ರ ಸಂತಸ ವ್ಯಕ್ತಪಡಿಸಿದ್ದಾರೆ.

More from Filmibeat

English summary
Yash Toxic And Ramayana films production deal;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X