ಗಡ್ಡ ಬಿಟ್ಟು ಖಡಕ್ ಅವತಾರದಲ್ಲಿ ರಾವಣನಾಗಿ ಯಶ್; ಲೀಕ್ ಆಯ್ತಾ 'ರಾಮಾಯಣ' ಲುಕ್?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿದೆ. ಯಾವ ಸಿನಿಮಾ ಮೊದಲು ಎನ್ನುವುದು ಮಾತ್ರ ಗೊತ್ತಾಗ್ತಿಲ್ಲ. 'ಟಾಕ್ಸಿಕ್' ಸಿನಿಮಾ ತೆರೆಗೆ ಬರುವ ವಿಚಾರದಲ್ಲಿ ಗೊಂದಲ ಮೂಡಿದೆ. ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ಬರಬೇಕಿದೆ.

ಅಕ್ಟೋಬರ್ ಕೊನೆಗೆ ರಾವಣನಾಗಿ ಯಶ್ ತೆರೆಮೇಲೆ ಅಬ್ಬರಿಸಲಿದ್ದಾರೆ. ಅದಕ್ಕೂ ಮುನ್ನ 'ಟಾಕ್ಸಿಕ್' ರಾಯನ ಆರ್ಭಟ ಇರುತ್ತಾ? ಅಥವಾ ವರ್ಷದ ಕೊನೆಗೆ ಈ ಗ್ಯಾಂಗ್‌ಸ್ಟರ್ ಸಿನಿಮಾ ಬರುತ್ತಾ ಕಾದು ನೋಡಬೇಕಿದೆ. ಆ ವಿಚಾರ ಪಕ್ಕಕ್ಕಿಟ್ಟರೆ 'ರಾಮಾಯಣ' ಚಿತ್ರದಲ್ಲಿ ಯಶ್ ಅವತಾರ ಹೇಗಿರುತ್ತೆ ಎನ್ನುವ ಕುತೂಹಲ ಮೂಡಿದೆ. ಈ ಹಿಂದೆ ರಾಮನ ಪಾತ್ರ ಪರಿಚಯದ ಟೀಸರ್ ಬಂದಿತ್ತು. ಅದರಲ್ಲಿ ರಾವಣನಾಗಿ ಯಶ್ ಹಿಂದೆ ತಿರುಗು ಹೋಗುವ ಸಣ್ಣ ಗ್ಲಿಂಪ್ಸ್ ಮಾತ್ರ ಇತ್ತು. ಇನ್ನುಳಿದಂತೆ. ಈವರೆಗೆ ಅಧಿಕೃತವಾಗಿ ಅದು ಬಹಿರಂಗವಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಎಐ ಪೋಸ್ಟರ್, ಟೀಸರ್ ಮಾತ್ರ ಹರಿದಾಡ್ತಿದೆ.

Yash s Ravana Look in Ramayana Leaked Viral Photo Sparks Debate Across Social Media

ಇದೀಗ 'ರಾಮಾಯಣ' ಚಿತ್ರದಲ್ಲಿ ರಾವಣ ಯಶ್ ಲುಕ್ ಲೀಕ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ಥಿಯೇಟರ್ ಸ್ಕ್ರೀನ್ ಮೇಲೆ ಯಶ್ ರಾವಣ ಅವತಾರದಲ್ಲಿ ಯಶ್ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗ್ತಿದೆ. ಸಿನಿಮಾ ಟೀಸರ್ ಪ್ರದರ್ಶನದ ವೇಳೆ ಯಾರೋ ಫೋಟೊ ಹಿಡಿದು ವೈರಲ್ ಮಾಡಿದಂತೆ ಕಾಣ್ತಿದೆ. ಅಥವಾ ಸಿನಿಮಾ ಬಿಡುಗಡೆಯಾದಾಗ ತೆರೆಮೇಲೆ ರಾವಣದ ಖದರ್ ಹೀಗೆ ಇರುತ್ತದೆ ಎನ್ನುವಂತೆ ಎಐ ಫೋಟೊ ಕ್ರಿಯೇಟ್ ಮಾಡಿದಂತೆ ಕಾಣ್ತಿದೆ. 'ರಾಮಾಯಣ' ಚಿತ್ರದಲ್ಲಿ ಯಶ್ ಇದೇ ಲುಕ್‌ನಲ್ಲಿ ಕಾಣಿಸ್ತಾರಾ ಎನ್ನುವ ಚರ್ಚೆ ಇದೀಗ ಶುರುವಾಗಿದೆ. ರಾವಣನಾಗಿ ಗಡ್ಡ ಬಿಟ್ಟು ಭಾರೀ ಕಿರೀಟ ಧರಿಸಿದ ಯಶ್ ಅವತಾರವನ್ನು ಇದರಲ್ಲಿ ನೋಡಬಹುದು.

ಫೋಟೊ ವೈರಲ್ ಆಗ್ತಿದ್ದಂತೆ ಇದು ಎಐ ಫೋಟೊ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ರಾವಣ ಹೇಗಿದ್ದ ಎನ್ನುವ ಬಗ್ಗೆ ಕಾವ್ಯಗಳಲ್ಲಿ ನಾನಾ ಬಗೆಯ ವಿಶ್ಲೇಷಣೆಯಿದೆ. ಮೊದಲೇ ರಾಕ್ಷಸ, ಹಾಗಾಗಿ ದಪ್ಪ ಮೂಗು, ಗಿರಿಜಾ ಮೀಸೆ ದೈತ್ಯದೇಹಿ ಎನ್ನುವಂತೆ ಚಿತ್ರಿಸಲಾಗಿದೆ. ಸಾಕಷ್ಟು ನಾಟಕ, ಧಾರಾವಾಹಿಗಳಲ್ಲಿ ಇದೇ ರೀತಿ ರಾವಣನನ್ನು ತೋರಿಸಿಲಾಗಿದೆ. ದೂರದರ್ಶನದಲ್ಲಿ ರಮಾನಂದ ಸಾಗರ್ ನಿರ್ದೇಶನದ ಜನಪ್ರಿಯ 'ರಾಮಾಯಣ' ಧಾರಾವಾಹಿಯಲ್ಲಿ ರಾವಣನಾಗಿ ಅರ್ವಿಂದ್ ತ್ರಿವೇದಿ ಕೂಡ ಇದೇ ಲುಕ್‌ನಲ್ಲಿ ಅಬ್ಬರಿಸಿದ್ದರು. ಕೆಲವೊಮ್ಮೆ ಗಡ್ಡಧಾರಿ, ಸಿಕ್ಸ್‌ಪ್ಯಾಕ್ ವಜ್ರದೇಹಿ ಖಡಕ್ ರಾವಣನನ್ನು ಸಿನಿಮಾ, ಧಾರಾವಾಹಿಗಳಲ್ಲಿ ಚಿತ್ರಿಸಲಾಗಿದೆ. ಯಶ್ ಸಹ ಇದೇ ರೀತಿ ಕಾಣಿಸಿಕೊಂಡಿರುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ಹೊರಬಿದ್ದಿದ್ದ ಕೆಲ ಮೇಕಿಂಗ್ ಸ್ಟಿಲ್ಸ್‌ಗಳಲ್ಲಿ ಅದು ಗೊತ್ತಾಗಿತ್ತು. ಸದ್ಯ ವೈರಲ್ ಫೋಟೊದಲ್ಲಿ ಅದನ್ನೇ ಚಿತ್ರಿಸಲಾಗಿದೆ.

ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಪ್ರೋಮೊ ರೀತಿಯಲ್ಲೇ ರಾವಣನಾಗಿ ಯಶ್ ಪ್ರೋಮೊ ಕೂಡ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಅದು ರಿಲೀಸ್ ಆಗಲಿದೆ. ಅಲ್ಲಿಯವರೆಗೂ ಕೊಂಚ ಕಾಯಲೇಬೇಕು. ಈ ಹಿಂದೆ ಬಂದಿದ್ದ ಸಿನಿಮಾ ಟೈಟಲ್ ಅನೌನ್ಸ್‌ಮೆಂಟ್ ಟೀಸರ್‌ನಲ್ಲಿ ಕೂಡ ರಾವಣನಾಗಿ ಯಶ್ ಕಣ್ಣು ಕಾಣುವಂತೆ ಮಾತ್ರ ತೋರಿಸಲಾಗಿತ್ತು. ಇನ್ನುಳಿದಂತೆ ಸಂಪೂರ್ಣ ಲುಕ್ ರಿವೀಲ್ ಆಗಿರಲಿಲ್ಲ.

ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ 'ರಾಮಾಯಣ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿತೇಶ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎರಡು ಭಾಗಗಳಾಗಿ ಈ ಪೌರಾಣಿಕ ಕಥಾಹಂದರದ ಸಿನಿಮಾ ತೆರೆಗೆ ಬರ್ತಿದೆ. ಮೊದಲ ಭಾಗ ಈ ವರ್ಷ ದೀಪಾವಳಿಗೆ ತೆರೆಗೆ ಬರಲಿದೆ. ಎರಡನೆ ಭಾಗ ನೋಡಲು ಮುಂದಿನ ವರ್ಷ ದೀಪಾವಳಿವರೆಗೆ ಕಾಯಬೇಕು.

Read more about: yash ramayana toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X