ಬೆಳಗಾವಿ ಮೂಲದ ಬಾಲಿವುಡ್ ನಟಿ ಸುಲೋಚನಾ ಲಾಟ್ಕರ್ ನಿಧನ: ಅಂತಿಮ ದರ್ಶನಕ್ಕೆ ವ್ಯವಸ್ಥೆ

ಹಿಂದಿ ಹಾಗೂ ಮರಾಠಿಯ ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟಿ ಸುಲೋಚನಾ ಲಾಟ್ಕರ್ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಅವರು ನಿನ್ನೆ(ಜೂನ್ 4) ಸಂಜೆ ಇಹಲೋಕ ತ್ಯಜಿಸಿದ್ದಾರೆ. ಇಂದು(ಜೂನ್ 5) ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸುಲೋಚನಾ ಲಾಟ್ಕರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಕೆಯ ಅಗಲಿಕೆಗೆ ಬಾಲಿವುಡ್ ಗಣ್ಯರು, ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಜುಲೈ 30, 1928 ರಂದು ಬೆಳಗಾವಿಯ ಚಿಕೋಡಿ ತಾಲೂಕಿನ ಖಡಕ್ಲಟ್ ಗ್ರಾಮದಲ್ಲಿ ಸುಲೋಚನಾ ಲಾಟ್ಕರ್ ಜನಿಸಿದರು. 1943ರಲ್ಲಿ ಚಿತ್ರೋದ್ಯಮಕ್ಕೆ ಪ್ರವೇಶಿಸಿದರು. ಆಕೆ ಮರಾಠಿ, ಹಿಂದಿ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. 'ಕಟೀಪತಂಗ್', 'ದಿಲ್ ದೇಕೋ ದೇಖೋ' , 'ಗೋರಾ ಔರ್ ಕಾಲಾ' ಮುಂತಾದ ಹಲವು ಸಿನಿಮಾಗಳಲ್ಲಿ ಆಕೆಯ ಪಾತ್ರಗಳು ಚಿರಸ್ಮರಣಿಯವಾಗಿ ಉಳಿದಿವೆ. 'ಸಂಗತ್ಯೇ ಐಕಾ', 'ಮೋಲ್ಕಾರಿನ್', 'ಮರಾಠಾ ತಿಟುಕಾ ಮೇಲ್ವಾವಾ', 'ಸಾದಿ ಮಾನಸಂ', 'ಏಕ್ತಿ' ಸುಲೋಚನಾ ವೃತ್ತಿಜೀವನದಲ್ಲಿ ಮರೆಯಲಾಗದ ಚಿತ್ರಗಳು.

Yesteryear actress Sulochana Latkar passed away

ಮೊದಲಿಗೆ ಮರಾಠಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡ ಸುಲೋಚನಾ ಲಾಟ್ಕರ್ ನಂತರ ಬಾಲಿವುಡ್ ಪ್ರವೇಶಿಸಿದರು. ಮೋತೀಲಾಲ್‌ ಜೊತೆ ಅವರು ನಟಿಸಿದ 'ಮುಕ್ತಿ' ಚಿತ್ರ ಕೂಡ ಜನಪ್ರಿಯತೆ ಗಳಿಸಿತ್ತು. ಆ ನಂತರ ಪೃಥ್ವೀರಾಜ್ ಕಪೂರ್, ನಜೀರ್ ಹುಸ್ಸೇನ್, ಅಶೋಕ್ ಕುಮಾರ್‌ರೊಂದಿಗೆ ಸಹನಟರಾಗಿ ಆಕೆ ಕೆಲಸ ಮಾಡಿದರು. ನಾಯಕಿಯಾಗಿ 30 ರಿಂದ 40 ಸಿನಿಮಾಗಳಲ್ಲಿ ನಟಿಸಿದರು.1959 ರಲ್ಲಿ ಬಂದ 'ದಿಲ್ ದೇಕೆ ದೇಖೋ' ಚಿತ್ರದಲ್ಲಿ ಅವರು ಮೊದಲು ತಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಆ ನಂತರ 1995 ರವರೆಗೆ ಎಂದರೋ ಪ್ರಮುಖ ನಟ- ನಟಿಯರಿಗೆಯರಿಗೆ ತಾಯಿ ಪಾತ್ರ ನಿರ್ವಹಿಸಿದರು.

ಮರಾಠಿಯಲ್ಲಿ 50, ಹಿಂದಿಯಲ್ಲಿ 250 ಸಿನಿಮಾಗಳಲ್ಲಿ ಸುಲೋಚನಾ ಲಾಟ್ಕರ್ ನಟಿದಿದ್ದರು. ಅವರಿಗೆ 1999ರಲ್ಲಿ 'ಪದ್ಮಶ್ರೀ', 2009ರಲ್ಲಿ 'ಮಹಾರಾಜ್ಯ ಭೂಷಣ' ಪ್ರಶಸ್ತಿಗಳು ಲಭಿಸಿದ್ದವು. ಜೀವನಮಾನ ಶ್ರೇಷ್ಠ ಸಾಧನೆಗೂ ಪುರಸ್ಕಾರ ಲಭಿಸಿತ್ತು. ನಟನೆಗೆ ಭಾಷೆಯ ಎಲ್ಲೆ ಇಲ್ಲ ಎಂದು ತಮ್ಮ ಅದ್ಭುತ ಅಭಿನಯದಿಂದ ಸುಲೋಚನಾ ಸಾಬೀತು ಮಾಡಿದ್ದರು.

Yesteryear actress Sulochana Latkar passed away

ಸುಲೋಚನಾ ಲಾಟ್ಕರ್ ಅವರ 85ನೇ ಹುಟ್ಟುಹಬ್ಬಕ್ಕೆ ಅಮಿತಾಬ್ ಬಚ್ಚನ್ ಭೇಟಿ ಮಾಡಿ ಶುಭಾಶಯ ಕೋರಿದ್ದರು. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಗ್‌ಬಿ ಹಂಚಿಕೊಂಡಿದ್ದರು. ಇನ್ನು 25 ದಿನಗಳಲ್ಲಿ ಅವರು 94ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು.

More from Filmibeat

English summary
Yesteryear actress Sulochana Latkar passed away. she had acted in more than 250 Hindi films and over 50 Marathi films. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X