ದೆಹಲಿಯಲ್ಲಿ ತುಂಬಾ ಚಳಿ ಇದೆ, ಕಾರಿನಲ್ಲಿಯೇ ಶುರು ಹಚ್ಕೊಳ್ಳಿ ; ಹನಿ ಸಿಂಗ್ ವಿರುದ್ಧ ಆಕ್ರೋಶ-ಕ್ಷಮೆ ಕೇಳಿದ ರ್ಯಾಪರ್

ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು.

ಆದರೆ ಈಗೀಗ ಈ ಮಾತು ಮನೆಯನ್ನು ಕೆಡಿಸುತ್ತಿದೆ. ಮನಸನ್ನು ಕೂಡ ಕೆಡಿಸುತ್ತಿದೆ. ದ್ವೇಷವನ್ನು ಬಿತ್ತುವಲ್ಲಿ ಕೂಡ ಮಾತು ಪ್ರಮುಖ ಪಾತ್ರ ವಹಿಸುತ್ತಿದೆ. ವಿವಾದಕ್ಕೆ ನಾಂದಿಯನ್ನು ಹಾಡುತ್ತೆ. ಉದಾಹರಣೆಗೆ ಯೋ ಯೋ ಹನಿ ಸಿಂಗ್ ಅವರ ಪ್ರಕರಣವನ್ನೇ ತೆಗೆದುಕೊಳ್ಳಿ.

Yo Yo Honey Singh Issues Public Apology After Obscene Delhi Concert Remark Sparks National Outrage

ಹೌದು, ಯೋ ಯೋ ಹನಿ ಸಿಂಗ್.. ಭಾರತದ ಪ್ರಖ್ಯಾತ ರ್ಯಾಪರ್. ''ಬ್ಲೂ ಐಸ್''.. ''ಬ್ರೌನ್ ರಂಗ್.. ''ಡೋಪ್ ಶೋಪ್''.. ''ಲವ್ ಡೋಸ್''.. ''ಚಾರ್ ಬಾಟಲ್ ವಡ್ಕಾ''.. ಹೀಗೆ ಒಂದಾದ ಮೇಲೊಂದರಂತೆ ಹಾಡುಗಳ ಮೂಲಕ ಯುವ ಸಮೂಹವನ್ನು ಹುಚ್ಚೆಬ್ಬಿಸಿದ್ದ ಹನಿ ಸಿಂಗ್ ಆ ನಂತರ 2014ರಲ್ಲಿ ಏಕಾಏಕಿ ನಾಪತ್ತೆಯಾದರು.

2018ರಲ್ಲಿ ''ಸೋನು ಕೆ ಟಿಟು ಕಿ ಸ್ವೀಟಿ'' ಚಿತ್ರದ ಮೂಲಕ ಮತ್ತೆ ಮರಳಿದರಾದರೂ ಇವರ ಕಂಠದಲ್ಲಿ ಆ ಮೊದಲಿದ್ದ ಛಾರ್ಮ್ ನಾಪತ್ತೆಯಾಗಿತ್ತು. ಕಾಲ ಮಿಂಚಿ ಹೋಗಿತ್ತು. ಅಷ್ಟರಲ್ಲಿ ಆಗಲೇ ಬಾದ್‌ಷಾ ಬಂದು ಹನಿ ಸಿಂಗ್ ಜಾಗ ಆಕ್ರಮಿಸಿಕೊಂಡಿದ್ದರು. ಇದರ ನಡುವೆ ಹನಿ ಸಿಂಗ್ ವ್ಯೆಯಕ್ತಿಕ ಜೀವನದಲ್ಲಿ ಬೇರೆ ಅಲ್ಲೋಲ ಕಲ್ಲೋಲವಾಗಿತ್ತು.

ಇಂಥಾ ಹನಿ ಸಿಂಗ್ ಸದ್ಯ ಮರಳಿ ಪ್ರಯತ್ನವನ್ನು ಮಾಡುತ್ತಿದ್ದಾರೆ. ''Honey 3.0'' ಹೆಸರಿನಲ್ಲಿ ವರ್ಲ್ಡ್ ಟೂರ್ ಮಾಡುತ್ತಿದ್ದಾರೆ. ಸಂಗೀತ ಸಂಜೆಯಲ್ಲಿ ಹಾಡುತ್ತಾ ಪ್ರೇಕ್ಷಕರ ಹೃದಯ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದೇ ಸಮಯದಲ್ಲಿ ಹನಿ ಸಿಂಗ್ ಮಾತನಾಡಬಾರದ ಮಾತೊಂದನ್ನು ಆಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು, ದೆಹಲಿಯಲ್ಲಿ ಇತ್ತೀಚೆಗೆ ಹನಿ ಸಿಂಗ್ ಅವರ ಕಾರ್ಯಕ್ರಮ ಇತ್ತು. ಎಂದಿನಂತೆ ಈ ಕಾರ್ಯಕ್ರಮದಲ್ಲಿ ಜನಸಂದಣಿ ಇತ್ತು. ಯುವ ಜನಾಂಗ ಹನಿ ಸಿಂಗ್ ಅವರ ಹಾಡು ಕೇಳಿ ಹುಚ್ಚೆದ್ದು ಕುಣಿಯಲು ಬಂದಿತ್ತು. ಆದರೆ ಇದೇ ಸಮಯದಲ್ಲಿ ವೇದಿಕೆಯ ಮೇಲೆ ಹನಿ ಸಿಂಗ್ ಹಾಡಿನ ಬದಲು ಸೆ*ಕ್ಸ್ ಬಗ್ಗೆ ಮಾತನಾಡಲು ಶುರು ಮಾಡಿದರು. ದೆಹಲಿಯಲ್ಲಿ ತುಂಬಾ ಚಳಿ ಇದೆ. ಈ ಚಳಿಯಲ್ಲಿ ನೀವು ನಿಮ್ಮ ಕಾರಿನಲ್ಲಿ ಸೆ*ಕ್ಸ್ ಮಾಡಿ ಎಂದು ಹೇಳಿದರು.

Yo Yo Honey Singh Issues Public Apology After Obscene Delhi Concert Remark Sparks National Outrage

ಆಕ್ರೋಶ ಭುಗಿಲೇಳಲು ಇಷ್ಟೇ ಸಾಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹಲವರು ಹನಿ ಸಿಂಗ್ ವಿರುದ್ಧ ಸಮರವನ್ನು ಸಾರಿದರು. ಯುವ ಜನಾಂಗಕ್ಕೆ ನೀವು ಕೊಡ್ತಿರುವ ಸಂದೇಶವಾದರೂ ಏನು ಎಂದು ಪ್ರಶ್ನೆ ಮಾಡಿದರು. ನಿಮ್ಮಂತಹ ಗಾಯಕರಿಂದ ಬೇರೆ ಇನ್ನೇನೂ ನಿರೀಕ್ಷೆ ಮಾಡಲು ಸಾಧ್ಯ ಎಂದು ಕಿಡಿ ಕಾರಿದರು. ಈಗ ತಮ್ಮ ವಿರುದ್ಧ ಎದ್ದ ಈ ಆಕ್ರೋಶ ಅಲೆ ಕಂಡು ಹನಿ ಸಿಂಗ್ ಬೆದರಿದ್ದಾರೆ. ಕ್ಷಮೆ ಕೇಳಿದ್ದಾರೆ.

ಈ ಕುರಿತು ಮಾತನಾಡಿರುವ ಹನಿ ಸಿಂಗ್ ನಾನೂ ಕೂಡ ನಿಮ್ಮಂತೆಯೇ ಮನುಷ್ಯ. ನನ್ನಿಂದಲೂ ಕೂಡ ತಪ್ಪುಗಳಾಗುತ್ತಾವೆ ಎಂದು ಹೇಳಿದ್ದಾರೆ. ತಮ್ಮ ಭಾಷೆಯ ಮೇಲೆ ಇನ್ಮುಂದೆ ನಿಯಂತ್ರಣ ಇಡುವ ಭರವಸೆ ನೀಡಿರುವ ಹನಿ ಸಿಂಗ್ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ನಾನು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಮುಂದುವರೆದು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನವನ್ನು ಕೂಡ ಮಾಡಿರುವ ಹನಿ ಸಿಂಗ್ ನಾನು ಸೇಫ್ ಸೆ*ಕ್ಸ್ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇ ಎಂದು ಹೇಳಿದ್ದಾರೆ. "OTT ಲ್ಯಾಂಗ್ವೇಜ್" ಎಂಬ ಹೊಸ ನೆಪ ಹೇಳಿದ್ದಾರೆ. ನೆಟ್‌ಫ್ಲಿಕ್ಸ್ ಅಥವಾ ಅಮೆಜಾನ್ ಪ್ರೈಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಇಂದಿನ ಯುವಕರು ಇಂತಹ ಭಾಷೆಯನ್ನು ಕೇಳಿ ರೂಢಿಸಿಕೊಂಡಿದ್ದಾರೆ ಎಂದು ಹೇಳಿರುವ ಹನಿ ಸಿಂಗ್ ಈ ಕಾರಣದಿಂದ ನಾನು ಅದೇ ಭಾಷೆಯಲ್ಲಿ ಅವರಿಗೆ ತಿಳಿಹೇಳಲು ಯತ್ನಿಸಿದೆ ಎಂದು ಹೇಳಿದ್ದಾರೆ.

ಆದರೆ, ಕುಟುಂಬ ಸಮೇತ ಬಂದ ಪ್ರೇಕ್ಷಕರ ಮುಂದೆ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಇಂತಹ ಭಾಷೆ ಬಳಕೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಮಾತ್ರ ಅವರ ಬಳಿ ಉತ್ತರ ಇಲ್ಲ.

More from Filmibeat

English summary
"I am human, I make mistakes." Yo Yo Honey Singh breaks silence on the viral video outrage. Is his safe-sex explanation enough to calm the internet fury?
Read more about: singer viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X