twitter
    For Quick Alerts
    ALLOW NOTIFICATIONS  
    For Daily Alerts

    1000 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ ಅತಿ ದೊಡ್ಡ ಫಿಲಂ ಸಿಟಿ

    |

    ಉತ್ತರ ಪ್ರದೇಶದಲ್ಲಿ ಅತಿ ದೊಡ್ಡ ಫಿಲಂ ಸಿಟಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮ್ಮತಿ ನೀಡಿದ್ದು, ಗೌತಮ ಬುದ್ದ ನಗರದಲ್ಲಿ ಈ ಫಿಲಂ ಸಿಟಿ ತಲೆ ಎತ್ತಲಿದೆ.

    ಯಮುನಾ ಪ್ರಾಧಿಕಾರ ಫಿಲಂ ಸಿಟಿ ನಿರ್ಮಿಸುವ ಜವಾಬ್ದಾರಿ ವಹಿಸಿಕೊಂಡಿದ್ದು, ಸಿಎಂ ಮುಂದೆ ಯೋಜನೆಯನ್ನು ವಿವರಿಸಿದ್ದಾರೆ. ಯೋಗಿ ಆದಿತ್ಯನಾಥ್ ಸಹ ಯಮುನಾ ಪ್ರಾಧಿಕಾರದ ಯೋಜನೆ ಕಂಡ ಸಂತಸ ವ್ಯಕ್ತಪಡಿಸಿದ್ದಾರೆ.

    ಫಿಲಂ ಸಿಟಿ ನಿರ್ಮಾಣದ ಹೊಣೆಗಾರಿಕೆ ಹೊರಲು ಸಿದ್ಧ ಎಂದ ಶಿವಣ್ಣಫಿಲಂ ಸಿಟಿ ನಿರ್ಮಾಣದ ಹೊಣೆಗಾರಿಕೆ ಹೊರಲು ಸಿದ್ಧ ಎಂದ ಶಿವಣ್ಣ

    ಫಿಲಂ ಸಿಟಿ ನಿರ್ಮಾಣದ ಕುರಿತು ಮಂಗಳವಾರ ಬಾಲಿವುಡ್ ಇಂಡಸ್ಟ್ರಿಯ ಖ್ಯಾತನಾಮರ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚಿಸಿದ ಯೋಗಿ ಆದಿತ್ಯನಾಥ್ ''1000 ಎಕರೆ ಜಾಗದಲ್ಲಿ ಅತಿ ದೊಡ್ಡ ಫಿಲಂ ಸಿಟಿ ನಿರ್ಮಿಸುವುದಾಗಿ'' ತಿಳಿಸಿದರು.

    Yogi Adityanath governments approval 1000 acres of land for Film City

    ಉತ್ತರ ಪ್ರದೇಶವೂ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಹಾಗೂ ಪುರಾಣದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಅಯೋಧ್ಯೆ, ಮಥುರಾ, ಕಾಶಿ ಹಾಗೂ ಮಹಾಭಾರತದಲ್ಲಿ ಬರುವ ಹಸ್ತಿನಾಪುರ ಸಹ ಇಲ್ಲಿಯೇ ಇದೆ. ಭಾರತದ ಏಳು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಇಂತಹ ರಾಜ್ಯದಲ್ಲಿ ಫಿಲಂ ಸಿಟಿ ನಿರ್ಮಾಣವೂ ವಿಶೇಷವಾಗಿರಲಿದೆ ಎಂದಿದ್ದಾರೆ.

    Recommended Video

    ಅಂಧ ಪ್ರತಿಭೆಯನ್ನು ಕಂಡ Nikhil ಫುಲ್ ಫಿದಾ | Filmibeat Kannada

    ಇಂದು ನಡೆದ ವಿಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಬಾಲಿವುಡ್ ನಟ ಪರೇಶ್ ರಾವಲ್, ಅನುಪಮ್ ಖೇರ್, ರವೀನಾ ಟಂಡನ್, ಗಾಯಕರಾದ ಅನುಪ್ ಜಲೋಟಾ, ಉದಿತ್ ನಾರಾಯಣ್ ಮತ್ತು ಕೈಲಾಶ್ ಖೇರ್, ಗೀತರಚನೆಕಾರ ಮನೋಜ್ ಮುಂಟಶೀರ್, ಚಲನಚಿತ್ರ ನಿರ್ಮಾಪಕರು ಸುಭಾಷ್ ಘೈ, ಡೇವಿಡ್ ಧವನ್, ಸತೀಶ್ ಕೌಶಿಕ್, ಪ್ರಿಯದರ್ಶನ್ ಪಾಲ್ಗೊಂಡಿದ್ದರು.

    English summary
    CM Yogi Adityanath holds a meeting with representatives of Bollywood fraternity over Film City in the state; 1000 acres of land identified for the project.
    Tuesday, September 22, 2020, 19:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X