ನೀನೊಬ್ಳು ನಟಿ, ನಿನ್ನ ಸಹವಾಸ ಸಾಕು ; ಸ್ಟಾರ್ ನಟಿಗೆ ಕೈ ಕೊಟ್ಟು ಓಡಿ ಹೋದ ಪ್ರಿಯಕರ
ಬೆಳ್ಳಿತೆರೆಯಲ್ಲಿ ಮಿಂಚುವ ಕನಸೊತ್ತು ಹಲವರು ಬರುತ್ತಾರೆ. ಆದರೆ.. ಎಲ್ಲರಿಗೂ ಇಲ್ಲಿ ಯಶಸ್ಸು ಸಿಗುವುದಿಲ್ಲ. ಸಿಕ್ಕರೂ ಕೂಡ ಕೆಲ ಒಮ್ಮೆ ಅದಕ್ಕೆ ತೆರಬೇಕಾದ ಬೆಲೆ ಸಾಮಾನ್ಯವಾಗಿರಲ್ಲ. ಅದರಲ್ಲಿಯೂ ನಾಯಕಿಯರ ವಿಚಾರದಲ್ಲಿ ಕನಸೆಂಬ ಕುದುರೆಯನ್ನೇರಿ ಇಲ್ಲಿ ಸವಾರಿ ಮಾಡುವುದು ಸುಲಭ ಅಲ್ಲ. ಅಡಿಗಡಿಗೂ ಅವಮಾನ ಮಾಡುವರು.. ಅನುಮಾನದ ದೃಷ್ಟಿಯಿಂದ ನೋಡುವವರು ಇಲ್ಲಿ ನಾಯಕಿಯರಿಗೆ ಎದುರಾಗುತ್ತಾರೆ. ಇನ್ನೂ ಹಲವರ ಪಾಲಿಗೆ ಇಲ್ಲಿ ಪ್ರೀತಿ ಕೂಡ ಮರಿಚೀಕೆಯಾಗಿರುತ್ತೆ.
ಯಾಕೆಂದರೆ.. ಪ್ರೀತಿಗೆ ಬೇಧ ಭಾವ ಇಲ್ಲದಿದ್ದರೂ ಕೂಡ ಕೆಲ ಒಮ್ಮೆ ಈ ಪ್ರೀತಿ ಎದುರುಗಡೆ ಇರುವ ವ್ಯಕ್ತಿಯ ಮೇಲೆ ಅಲ್ಲ ಬದಲಿಗೆ ಆ ವ್ಯಕ್ತಿಯ ಹಿನ್ನೆಲೆ ಮತ್ತು ಮಾಡುತ್ತಿರುವ ಕೆಲಸದ ಮೇಲೆ ನಿಂತಿರುತ್ತೆ. ಸಮಾಜದಲ್ಲಿ ಇಂದಿಗೂ ಕೂಡ ಪ್ರೀತಿಯನ್ನು ವ್ಯಕ್ತಿಯ ಗುಣಕ್ಕಿಂತ ಅವರ ವೃತ್ತಿಯ ಆಧಾರದ ಮೇಲೆ ಅಳೆಯಲಾಗುತ್ತದೆ. ಇದಕ್ಕೆ ಮೃಣಾಲ್ ಠಾಕೂರ್ ಸದ್ಯದ ಉದಾಹರಣೆ.

ಹೌದು, ಮೃಣಾಲ್ ಠಾಕೂರ್... ಹುಟ್ಟಿದ್ದು ಮಹಾರಾಷ್ಟ್ರದಲ್ಲಿ ಆದರೂ, ದಕ್ಷಿಣದೆಲ್ಲೆಡೆ ಅಭಿಮಾನಿ ಬಳಗವನ್ನ ಹೊಂದಿರುವ ಚೆಲುವೆ. ''ಸೀತಾ ರಾಮಂ'' .. ''ಹಾಯ್ ನನ್ನಾ'' .. ''ಫ್ಯಾಮಿಲಿ ಸ್ಟಾರ್'' .. ಹೀಗೆ ಒಂದಾದ ಮೇಲೊಂದು ತೆಲುಗು ಸಿನಿಮಾಗಳ ಮೂಲಕ ಜನ ಮನ ಗೆದ್ದ ಮೃಣಾಲ್ ಸದ್ಯ ತಮ್ಮ ಮೂಲ ಸ್ಥಳಕ್ಕೆ ಮರಳಿದ್ದಾರೆ. ಒಂದರ ಹಿಂದೆ ಒಂದರಂತೆ ಹಿಂದಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ಧಾರೆ. ಆ ಪೈಕಿ ಇವರ ''ದೋ ದಿವಾನೆ ಶೆಹರ್ ಮೇ'' ಚಿತ್ರ ಇದೇ ಫೆಬ್ರವರಿ 20ರಂದು ಬಿಡುಗಡೆಯಾಗಲಿದೆ.
ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಮೃಣಾಲ್ ಸದ್ಯ ತಮ್ಮ ಪುರಾತನ ಕಾಲದ ಪ್ರೇಮ ಕಥೆ ಹೇಳಿದ್ದಾರೆ. ನಾನು ನಟಿಯಾಗಿದ್ದಕ್ಕೆ ಆ ವ್ಯಕ್ತಿ ನನ್ನನ್ನೂ ಬಿಟ್ಟು ಹೋದ ಎಂದಿದ್ದಾರೆ.
ಈ ಕುರಿತು ''ರಣವೀರ್ ಅಲಾಹಾಬಾದಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೃಣಾಲ್ ಠಾಕೂರ್ ನಾನು ನಟಿಯಾಗಿದ್ದಕ್ಕೆ ನನ್ನ ಪ್ರೇಮ ಸಂಬಂಧ ಮುರಿದು ಬಿತ್ತು ಎಂದು ಹೇಳಿದ್ದಾರೆ. ಆ ಸಂಬಂಧ ಕೊನೆಯಾದ ನಂತರ ನನಗೆ ನೆಮ್ಮದಿ ಸಿಕ್ತು ಎಂದಿದ್ದಾರೆ. ನಮ್ಮ ಇಬ್ಬರ ಆಚಾರ ವಿಚಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದವು ಎಂದು ಹೇಳಿರುವ ಮೃಣಾಲ್ ನಿನ್ನದು ತುಂಬಾನೇ ಆತುರದ ವ್ಯಕ್ತಿತ್ವ, ನಾನು ನಿನ್ನನ್ನೂ ಸಹಿಸಲಾರೆ ಎಂದು ಆತ ನನಗೆ ಹೇಳಿದ್ದ ಎಂದು ಹೇಳಿದ್ದಾರೆ. ನಿನ್ನ ಸಹವಾಸ ಸಾಕು ಎಂದು ಬಿಟ್ಟು ಹೋದ ಎಂದಿದ್ದಾರೆ.
ಮುಂದುವರೆದು ನೀನು ಒಬ್ಬಳು ನಟಿ, ನನ್ನಿಂದ ನಿನ್ನ ಸಂಭಾಳಿಸಲು ಸಾಧ್ಯ ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಅವನು ನನಗೆ ಹೇಳಿದ್ದ ಎಂದು ಹೇಳಿರುವ ಮೃಣಾಲ್ ಆತ ತುಂಬಾನೇ ಸಾಂಪ್ರದಾಯಕ ಕುಟುಂಬದವನಾಗಿದ್ದ ಹೀಗಾಗಿ ನಾನು ಅವನ ನಿರ್ಧಾರವನ್ನು ದೂಷಿಸುವುದಿಲ್ಲ ಎಂದು ಹೇಳಿದ್ದಾರೆ. ಒಂದು ರೀತಿಯಲ್ಲಿ ಆ ಸಂಬಂಧ ಅಲ್ಲಿಯೇ ಕೊನೆಯಾಗಿದ್ದು ಒಳ್ಳೆಯದೇ ಆಯ್ತು ಎಂದು ಹೇಳಿರುವ ಮೃಣಾಲ್ ಭವಿಷ್ಯದಲ್ಲಿ ನಮ್ಮ ಮಕ್ಕಳನ್ನು ಬೆಳೆಸುವಾಗ ಅವರ ಪಾಲನೆಯಂತೆಯೇ ನಮ್ಮ ಮಕ್ಕಳ ಲಾಲನೆ ಪಾಲನೆಯಾಗಿರುತ್ತಿತ್ತೇನೋ ಎಂದು ಹೇಳಿದ್ದಾರೆ.

ಇನ್ನುಳಿದಂತೆ ಮೃಣಾಲ್ ಠಾಕೂರ್ ಅವರ ಹೆಸರು ಧನುಷ್ ಜೊತೆ ತಳುಕು ಹಾಕಿಕೊಂಡಿದೆ. ಇಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಮತ್ತೊಂದು ಕಡೆ ''ದೋ ದಿವಾನೆ ಶೆಹರ್ ಮೇ'' ಚಿತ್ರದ ನಾಯಕ ಸಿದ್ದಾಂತ್ ಚತುರ್ವೇದಿ ಜೊತೆ ಮೃಣಾಲ್ ಪ್ರೀತಿ ಕಿತಾಬು ಓದುತ್ತಿದ್ದಾರೆ ಎನ್ನುವ ಪುಕಾರು ಕೂಡ ಹಬ್ಬಿದೆ. ಅಭಿಮಾನಿ ವಲಯದಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ಕೆಲವರು ಈ ಆತ್ಮೀಯತೆ ಮತ್ತು ಈ ಲವ್ ಸ್ಟೋರಿಯ ಸುದ್ದಿ ಚಿತ್ರದ ಪ್ರಚಾರದ ತಂತ್ರವೂ ಆಗಿರಬಹುದು ಎನ್ನುವ ಅನುಮಾನವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಪ್ರಚಾರದ ತಂತ್ರವಾಗಿದ್ದರೆ ಬುದ್ದಿವಂತಿಕೆಯ ಕೆಲಸ, ಒಂದು ವೇಳೆ ನಿಜಾ ಆದರೆ ಬಣ್ಣದ ಪ್ರಪಂಚದಲ್ಲಿನ ಸುಂದರ ಜೋಡಿಗಳ ಪೈಕಿ ಈ ಜೋಡಿ ಕೂಡ ಒಂದಾಗುತ್ತೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











