For Quick Alerts
  ALLOW NOTIFICATIONS  
  For Daily Alerts

  ಸಾಕು ನಾಯಿಯ ಭೀಕರ ಹತ್ಯೆ: ಆರೋಪಿಗಳ ಕಠಿಣ ಶಿಕ್ಷೆಗೆ ಸಿನಿ ಮಂದಿಯ ಒತ್ತಾಯ

  |

  ಬ್ರೂನೋ ಹೆಸರಿನ ಸಾಕು ನಾಯಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. ಈ ರಾಕ್ಷಸಿ ಕೃತ್ಯದ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  ಕೇರಳದಲ್ಲಿ 3 ಯುವಕರು ಸೇರಿ ಬ್ರೂನೋ ಹೆಸರಿನ ಸಾಕು ನಾಯಿಯನ್ನು ಕಟ್ಟಿಹಾಕಿ ಮನಬಂದಂತೆ ಹೊಡೆದು, ಜೀವಂತವಾಗಿ ನೇತುಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಬ್ರೂನೋ ಮಾಲಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಬಳಿಕ ವಿಡಿಯೋ ವೈರಲ್ ಆಗಿದೆ. ವೈರಲ್ ಆಗುತ್ತಿದ್ದಂತೆ ಈ ಅಮಾನವೀಯ ಕೃತ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  ಈ ಅಮಾನವೀಯ ಘಟನೆ ಖಂಡಿಸಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯ ಮಾಡುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಕಲಾವಿದರು ಪ್ರತಿಕ್ರಿಯೆ ನೀಡಿ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ. ಬಾಲಿವುಡ್ ನಟಿಯರಾದ ಅಲಿಯಾ ಭಟ್, ಅನುಷ್ಕಾ ಶರ್ಮಾ, ದಿಶಾ ಪಟಾನಿ ಸೇರಿದಂತೆ ಅನೇಕರು ಈ ಕ್ರೌರ್ಯವನ್ನು ಖಂಡಿಸಿದ್ದಾರೆ. ಮುಂದೆ ಓದಿ...

  ಆಟವಾಡುತ್ತಿದ್ದ ನಾಯಿಯನ್ನು ಹೊಡೆದು ಸಾಯಿಸಿದ ಯುವಕರು

  ಆಟವಾಡುತ್ತಿದ್ದ ನಾಯಿಯನ್ನು ಹೊಡೆದು ಸಾಯಿಸಿದ ಯುವಕರು

  ಕಪ್ಪು ಬಣ್ಣದ ಲ್ಯಾಬ್ರಡಾರ್ ನಾಯಿ ಫೋಟೋ ಶೇರ್ ಮಾಡಿ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಸಿನಿ ಮಂದಿ ಶೇರ್ ಮಾಡಿರುವ ಪೋಸ್ಟ್ ನಲ್ಲಿ, "ಕ್ರಿಸ್ಟರಾಜ್ ಅವರ ಬ್ರೂನೋ ಹೆಸರಿನ ನಾಯಿಯನ್ನು 3 ಜನ ಹತ್ಯೆಮಾಡಿದ್ದಾರೆ. ಬ್ರೂನೋ ದಿನ ಬೀಚ್ ನಲ್ಲಿ ಆಟವಾಡುತ್ತಿತ್ತು. ಆಟದ ಬಳಿಕ ಬೋಟ್ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಅಲ್ಲಿದ್ದ 3 ಮಂದಿ ಬ್ರೂನೋವನ್ನು ಹೊಡೆದು ಬಳಿಕ ಜೀವಂತವಾಗಿ ಫಿಶ್ ಹುಕ್ ಗೆ ನೇತಾಕಿದ್ದಾರೆ" ಎಂದು ಬರೆಯಲಾಗಿದೆ.

  ಕಠಿಣ ಶಿಕ್ಷೆ ನೀಡದಿದ್ದರೆ ಇಂಥವರು ಬದಲಾಗಲ್ಲ- ಅಲಿಯಾ

  ಕಠಿಣ ಶಿಕ್ಷೆ ನೀಡದಿದ್ದರೆ ಇಂಥವರು ಬದಲಾಗಲ್ಲ- ಅಲಿಯಾ

  ಎಲ್ಲರೂ ಈ ಪೋಸ್ಟ್ ಶೇರ್ ಮಾಡಿ, #JusticeforBruno ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಈ ಪೋಸ್ಟ್ ಶೇರ್ ಮಾಡಿ ಅಲಿಯಾ ಭಟ್, "ಇದು ಭಯಂಕರ. ಇದರಿಂದ ಪಾರಾಗಲು ಸಾಧ್ಯವಿಲ್ಲ. ಇಂಥವರಿಗೆ ಕಠಿಣ ಶಿಕ್ಷೆ ನೀಡುವವರೆಗೂ ಇಂಥ ಕೆಟ್ಟ ಮನಸ್ಥಿತಿಯವರು ಬದಲಾಗುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.

  ದಿಶಾ ಪಟಾನಿ- ಅನುಷ್ಕಾ ಶರ್ಮಾ ಪ್ರತಿಕ್ರಿಯೆ

  ದಿಶಾ ಪಟಾನಿ- ಅನುಷ್ಕಾ ಶರ್ಮಾ ಪ್ರತಿಕ್ರಿಯೆ

  ಇನ್ನು ನಟಿ ದಿಶಾ ಪಟಾನಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ. ನಟಿ ಅನುಷ್ಕಾ ಶರ್ಮಾ ಕೂಡ ಬೇಸರ ವ್ಯಕ್ತಪಡಿಸಿತ್ತು, ಇಂಥ ರಾಕ್ಷಸರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.

  ಘಟನೆ ಬಗ್ಗೆ ಸ್ಪಷ್ಟ ಪಡಿಸಿದ ಚಿಕ್ಕಬಳ್ಳಾಪುರ ಎಸ್ ಪಿ ಮಿಥುನ್ | Jaggesh | Yathiraj | Filmibeat Kannada
  ನಟಿ ಜಾಕ್ವೆಲಿನ್ ಫರ್ನಾಂಡಿಸ್

  ನಟಿ ಜಾಕ್ವೆಲಿನ್ ಫರ್ನಾಂಡಿಸ್

  ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬ್ರೂನೋ ಫೋಟೋ ಶೇರ್ ಮಾಡಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ಜೊತೆಗೆ ಇಬ್ಬರು ಆರೋಪಿಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

  English summary
  Youths Beat a Dog Bruno to Death in Kerala; Bollywood Actress react.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X