twitter
    For Quick Alerts
    ALLOW NOTIFICATIONS  
    For Daily Alerts

    ಸುಳ್ಳು ಸುದ್ದಿ, ದ್ವೇಷ ಹರಡುವ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್‌ ಬಂದ್: ಸಚಿವ

    |

    ಯೂಟ್ಯೂಬ್ ಚಾನೆಲ್‌ಗಳು ನಾಯಿ ಕೊಡೆಗಳಂತಾಗಿವೆ. ಹಲವು ಮನೊರಂಜನೆ, ಸುದ್ದಿ ಪ್ರಸಾರ, ಮಾಹಿತಿ ಹಂಚಿಕೆ, ಜ್ಞಾನ ಹಂಚಿಕೆ ಇತರೆ ಹಲವು ಕಾರ್ಯಗಳನ್ನು ಯೂಟ್ಯೂಬ್‌ ಚಾನೆಲ್‌ಗಳು ಮಾಡುತ್ತಿವೆ. ಜೊತೆಗೆ ಕೆಲವರು ಯೂಟ್ಯೂಬ್ ಚಾನೆಲ್‌, ವೆಬ್‌ಸೈಟ್‌ಗಳನ್ನು ದ್ವೇಷ ಹರಡಿಸಲು ಸಹ ಬಳಸುತ್ತಿದ್ದಾರೆ. ಇಂಥವರ ವಿರುದ್ಧ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ.

    ಕೆಲವು ದಿನಗಳ ಹಿಂದಷ್ಟೆ 20 ಯೂಟ್ಯೂಬ್ ಚಾನೆಲ್‌ಗಳನ್ನು ದೇಶವಿರೋಧಿ ಕಂಟೆಂಟ್ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಡಿಲೀಟ್ ಮಾಡಲಾಗಿತ್ತು. ಇದೀಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಇನ್ನೂ ಕೆಲವು ಯೂಟ್ಯೂಬ್ ಚಾನೆಲ್, ವೆಬ್‌ಸೈಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

    ''ಸುಳ್ಳು ಸುದ್ದಿ, ದೇಶದ ವಿರುದ್ಧ ಪಿತೂರಿ, ಸಂಚು, ಪ್ರೊಪಾಗಾಂಡ ಹರಡುವ ಯೂಟ್ಯೂಬ್ ಚಾನೆಲ್ ಹಾಗೂ ವೆಬ್‌ಸೈಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದೇನೆ. ಹಲವು ರಾಷ್ಟ್ರಗಳು ಈ ವಿಷಯವಾಗಿ ಜಾಗೃತವಾಗಿವೆ, ಯೂಟ್ಯೂಬ್ ಸಹ ಇಂಥಹಾ ಚಾನೆಲ್‌ಗಳನ್ನು ಡಿಲೀಟ್ ಮಾಡಲು ಮುಂದೆ ಬಂದಿದೆ'' ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

    YouTube Channels Websites Against India Will Be Banned: Minister Anurag Thakur
    ಇಂಥ ದೇಶವಿರೋಧಿ ಯೂಟ್ಯೂಬ್ ಚಾನೆಲ್‌ಗಳನ್ನು ಪತ್ತೆ ಹಚ್ಚಲು ಅದರ ಹಿಂದೆ ಕೆಲಸ ಮಾಡುತ್ತಿರುವವರನ್ನು ಪತ್ತೆ ಹಚ್ಚಲು ಗುಪ್ತಚರ ಇಲಾಖೆಯ ಸಹಾಯ ಪಡೆದಿದ್ದು, ಡಿಸೆಂಬರ್ ತಿಂಗಳಲ್ಲಿ ಸುಳ್ಳು ಸುದ್ದಿ, ದೇಶದ ವಿರುದ್ಧ ಪ್ರಚಾರ ಮಾಡುತ್ತಿದ್ದ 20 ಯೂಟ್ಯೂಬ್ ಚಾನೆಲ್ ಹಾಗೂ ಎರಡು ವೆಬ್‌ಸೈಟ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.

    'ಭವಿಷ್ಯದಲ್ಲಿ ಸಹ ದೇಶದ ವಿರುದ್ಧ ಪ್ರಚಾರ ಮಾಡುವ, ಉದ್ದೇಶಪೂರ್ವಕ ಸುಳ್ಳು ಸುದ್ದಿ ಹರಡಿಸುವ, ಸಂಚು ರೂಪಿಸುವ, ದ್ವೇಷ ಹರಡಲು ಯತ್ನಿಸುವ ಯೂಟ್ಯೂಬ್ ಚಾನೆಲ್‌ ಹಾಗೂ ವೆಬ್‌ಸೈಟ್‌ಗಳನ್ನು ಬಂದ್ ಮಾಡಲಾಗುವುದು'' ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

    ಯೂಟ್ಯೂಬ್ ಚಾನೆಲ್‌ಗಳನ್ನು ಸುಲಭವಾಗಿ ಪ್ರಾರಂಭ ಮಾಡಬಹುದು ಹಾಗೂ ಸಂಪಾದನೆಯೂ ಇರುವ ಕಾರಣ ಕೆಲ ವರ್ಷಗಳಲ್ಲಿ ಹಲವು ಯೂಟ್ಯೂಬರ್‌ಗಳು ಹುಟ್ಟಿಕೊಂಡಿದ್ದಾರೆ. ವೀವ್ಸ್ ಹೆಚ್ಚಾಗಲು, ಚಾನೆಲ್ ಅನ್ನು ಜನಪ್ರಿಯಗೊಳಿಸಲು ಅತಿರಂಜಿತ ಸುಳ್ಳು ಸುದ್ದಿಗಳು, ಸೆಕ್ಸ್ ಟಾಕ್, ಅಶ್ಲೀಲ ವಿಡಿಯೋಗಳ ಪ್ರಸಾರ, ಇನ್ನೂ ಹಲವು ಕಾನೂನು ಬಾಹಿರ ಕಾರ್ಯಗಳಲ್ಲಿ ಕೆಲವು ಯೂಟ್ಯೂಬರ್‌ಗಳು ತೊಡಗಿಕೊಂಡಿದ್ದಾರೆ.

    ಸಿನಿಮಾ ನಟ-ನಟಿಯರು ಕೆಲವರು ತಮ್ಮ ವಿರುದ್ಧ ಸುಳ್ಳು ಸುದ್ದಿ ಬಿತ್ತರಿಸಿದ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ದಾವೆ ಹೂಡಿ ಗೆದ್ದಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಸಂದರ್ಭದಲ್ಲಿ ಎಫ್ಎಫ್‌ ನ್ಯೂಸ್ ಹೆಸರಿನ ಯೂಟ್ಯೂಬ್ ಚಾನೆಲ್, 'ಸುಶಾಂತ್ ಸಿಂಗ್ ಕೊಲೆಯಲ್ಲಿ ಅಕ್ಷಯ್ ಕುಮಾರ್ ಪಾತ್ರವಿದೆಯೆಂದು, ಕೊಲೆಗಾರ್ತಿ ರಿಯಾ ಚಕ್ರವರ್ತಿ ದೇಶ ಬಿಟ್ಟು ಪರಾರಿಯಾಗಲು ಅಕ್ಷಯ್ ಕುಮಾರ್ ನೆರವು ನೀಡಿದ್ದಾನೆ'' ಎಂದು ಸುಳ್ಳು ಸುದ್ದಿ ಬಿತ್ತರಿಸಿತ್ತು. ಚಾನೆಲ್‌ ಮೇಲೆ ಪ್ರಕರಣ ದಾಖಲಿಸಿದ ಬಳಿಕ ಯೂಟ್ಯೂಬರ್ ರಶೀಧ್ ಸಿದ್ಧಿಕಿ ಬಂಧನವಾಗಿತ್ತು.

    ಸಮಂತಾ-ನಾಗ ಚೈತನ್ಯರ ವಿಚ್ಛೇಧನದ ಬಳಿಕ ಕೆಲವು ಯೂಟ್ಯೂಬ್ ಚಾನೆಲ್‌ಗಳು ಸಮಂತಾ ವಿರುದ್ಧ ಹಲವು ಸುಳ್ಳು ಸುದ್ದಿಗಳನ್ನು, ಅಶ್ಲೀಲ ಆರೋಪಗಳನ್ನು ಮಾಡಿದ್ದವು. ಸಮಂತಾ ಕೆಲವು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ಯೂಟ್ಯೂಬ್ ಚಾನೆಲ್‌ಗಳು ಸಮಂತಾ ಬಗ್ಗೆ ಬಿತ್ತರಿಸಿದ್ದ ಸುದ್ದಿ ವಿಡಿಯೋಗಳನ್ನು ಹಿಂಪಡೆದವು.

    ಚೆನ್ನೈ ಮೂಲಕ ಐಟಿ ನೌಕರ ಮದನ್ ಹಾಗೂ ಆತನ ಪತ್ನಿ 'ಟಾಕ್ಸಿಕ್ ಮದನ್ 18+' ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದರು. ಚಾನೆಲ್‌ನಿಂದ ಆನ್‌ಲೈನ್‌ನಲ್ಲಿ ಗೇಮ್‌ಗಳನ್ನು ಸ್ಟ್ರೀಮ್ ಮಾಡುತ್ತಿದ್ದರು. ಗೇಮ್ ಸ್ಟ್ರೀಮ್ ಮಾಡುವಾಗ ಅಶ್ಲೀಲ ಮಾತುಗಳನ್ನು ಆಡುತ್ತಿದ್ದರು. ಆ ಮೂಲಕ ಹೆಚ್ಚು ಯುವಕರನ್ನು ಆಕರ್ಷಿಸುತ್ತಿದ್ದರು. ಇದರಿಂದಾಗಿಯೇ ಕೋಟ್ಯಂತರ ಹಣವನ್ನು ಈ ದಂಪತಿ ಗಳಿಸಿದ್ದರು. ಎರಡು ಕೋಟಿ ಮೌಲ್ಯದ ಎರಡು ಕಾರನ್ನು ಈ ದಂಪತಿ ಖರೀದಿಸಿದ್ದರು. ಜೊತೆಗೆ ಚೆನ್ನೈನಲ್ಲಿಯೇ ಎರಡು ಐಶಾರಾಮಿ ಬಂಗ್ಲೆ ಜೊತೆಗೆ ಧರ್ಮಪುರಿಯಲ್ಲಿ ಭಾರಿ ದೊಡ್ಡ ಮನೆ ಕಟ್ಟಿಸಿದ್ದರು. ಇತರೆ ಆಸ್ತಿಗಳನ್ನು ಸಹ ಇವರು ಖರೀದಿ ಮಾಡಿದ್ದರು. ಈ ದಂಪತಿ ಕೇವಲ ಯೂಟ್ಯೂಬ್‌ನಿಂದಲೇ ತಿಂಗಳಿಗೆ ಸರಾಸರಿ 10 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದ್ದರು. ಕಳೆದ ವರ್ಷ ಜೂನ್ 20 ರಂದು ಈ ದಂಪತಿಯ ಬಂಧನವಾಯ್ತು.

    English summary
    YouTube channels, websites which are spreading fake news, spreading hate, spreading anti India propaganda will be banned soon says I and B minister Anurag Thakur.
    Thursday, January 20, 2022, 11:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X