ಮೂರನೇ ಮದುವೆಯಾದ ಇಬ್ಬರು ಹೆಂಡತಿಯರ ಮುದ್ದಿನ ಗಂಡ...!

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪ್ರೇಮಕ್ಕೆ ಒಂದು ಅರ್ಥ ಇತ್ತು. ಎದುರಾದ ಎಲ್ಲ ಅಡೆ ತಡೆಯನ್ನು ದಾಟಿಕೊಂಡು ಎರಡು ಹೃದಯಗಳ ಮಿಲನವಾಗುತ್ತಿತ್ತು. ಅರಳಿದ ಪ್ರೇಮಾಂಕುರ ಎರಡು ಜೀವಗಳನ್ನು ಉಸಿರಿಗೆ ಉಸಿರು ತಾಕುವಷ್ಟು ಹತ್ತಿರವನ್ನಾಗಿಸುತ್ತಿತ್ತು. ಹೀಗೆ ಕುದುರಿದ ಪ್ರೀತಿ ಜೀವಮಾನವಡೀ ಜೊತೆಯಾಗೇ ಬಾಳಿಸುತ್ತಿತ್ತು.

ಆದರೆ ಈಗ ಹಾಗಿಲ್ಲ. ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಬದ್ಲಾಗ್ಬಿಟ್ಟಿದೆ. ಬದಲಾದ ಈ ಕಾಲದಲ್ಲಿ ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ ಅಂತೆಲ್ಲ ಬಟ್ಟೆ ಪ್ರೀತಿಯಲ್ಲಿ ಕೂಡ ಹಲವು ವೆರೈಟಿಗಳು ಬಂದಿವೆ. ಇದಕ್ಕೆ ಅರ್ಮಾನ್ ಮಲ್ಲಿಕ್ ಬದುಕೇ ಅತ್ಯುತ್ತಮ ಸಾಕ್ಷಿ.

Youtuber And Bigg Boss Contestant Armaan Malik Introduces Third Wife In Karwa Chauth Post

ಹೌದು, ಅರ್ಮಾನ್ ಮಲ್ಲಿಕ್.. ಹಿಂದಿಯಲ್ಲಿ ಓಟಿಟಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ನ ಸ್ಫರ್ಧಿ. ಆರಂಭದಿಂದಲೂ ತಮ್ಮ ಸಾಂಸಾರಿಕ ಬದುಕಿನ ಕಾರಣಕ್ಕೆ ಸದಾ ಸುದ್ದಿಯಾಗುತ್ತಾ ಬಂದವರು ಇವರು. 2011ರಲ್ಲಿ ಖಾಸಗಿ ಬ್ಯಾಂಕ್‌ ವೊಂದರಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಲೇ ಅದೇ ಬ್ಯಾಂಕ್‌ ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್‌ ಅವರನ್ನು ಮದ್ವೆಯಾದ ಅರ್ಮಾನ್, ಆ ನಂತರ .. ತಮ್ಮ ಹೆಂಡ್ತಿ ಪಾಯಲ್ ಅವರ ಸ್ನೇಹಿತೆ ಕೃತಿಕಾ ಅವರನ್ನೂ ಪ್ರೀತಿಸಿದರು. ಮೊದಲ ಪತ್ನಿ ಪಾಯಲ್ ಅವರನ್ನು ಒಪ್ಪಿಸಿ ಅವರ ಸಮ್ಮುಖದಲ್ಲಿಯೇ ಕೃತಿಕಾ ಜೊತೆ ಮದುವೆಯೂ ಆದರು. ತಮ್ಮ ಇಬ್ಬರು ಪತ್ನಿಯರ ಜೊತೆಯಲ್ಲಿಯೇ ಬಿಗ್ ಬಾಸ್‌ ಮನೆಯನ್ನು ಕೂಡ ಪ್ರವೇಶಿಸಿದ್ದರು. ಆ ನಂತರ ಮೊದಲ ಪತ್ನಿ ಪಾಯಲ್ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ನಂತರ ಎರಡನೇ ಪತ್ನಿ ಕೃತಿಕಾ ಜೊತೆ ಬಿಗ್ ಬಾಸ್ ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್ ಮಾಡಿ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇಂಥಾ ಅರ್ಮಾನ್ ಮಲ್ಲಿಕ್ ಅಕ್ಕ-ಪಕ್ಕ ಇಬ್ಬರು ಹೆಂಡ್ತಿಯರಿದ್ದರೂ ಕೂಡ ಮೂರನೇ ಮದುವೆಯಾಗಿದ್ದಾರೆ. ಹೀಗೊಂದು ಅನುಮಾನ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ. ಹೌದು, ಅಸಲಿಗೆ ನಿಮಗೆ ಗೊತ್ತಿರಲಿ ಅರ್ಮಾನ್ ಮಲ್ಲಿಕ್ -ಪಾಯಲ್ ಮತ್ತು ಕೃತಿಕಾ ಪ್ರೇಮ ಸಂಕೇತವಾಗಿ ಇವರಿಗೆ ನಾಲ್ಕು ಮಕ್ಕಳಿದ್ದಾರೆ. ಈ ನಾಲ್ಕು ಮಕ್ಕಳನ್ನು ಮನೆಯಲ್ಲಿ ಇರುವ ಪಾಯಲ್ ಮತ್ತು ಕೃತಿಕಾ ಅವರಿಗೆ ನೋಡಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕೆ ತಮ್ಮ ನಾಲ್ಕು ಮಕ್ಕಳ ಪೋಷಣೆ, ರಕ್ಷಣೆ, ಪಾಲನೆಗೆ ಮನೆಯಲ್ಲಿ ಆಯಾನನ್ನು ನೇಮಕ ಮಾಡಿಕೊಂಡಿದ್ದಾರೆ. ಈಕೆಯ ಹೆಸರು ಲಕ್ಷ್ಯ್ ಸೋಗಲ್. ವಿಶೇಷ ಅಂದರೆ ಇನ್ನೂ ಹದಿಹರೆಯದ ಯುವತಿಯಾಗಿರುವ ಲಕ್ಷ್ಯ್ ಜೊತೆ ಅರ್ಮಾನ್ ಮಲ್ಲಿಕ್ ರೀಲ್ಸ್ ಕೂಡ ಮಾಡಿದ್ದಾರೆ. ಆದರೆ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಲಕ್ಷ್ಯ್ ಸೋಗಲ್ ಜೊತೆ ಅರ್ಮಾನ್ ಮಲ್ಲಿಕ್ ಮದುವೆಯಾಗಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ಒಂದು ವೈರಲ್ ಆಗಿದೆ.

ಹೌದು, ಮೊನ್ನೆ ಕರ್ವಾ ಚೌತ್ ದಿನದಂದು ಪಾಯಲ್ ಮತ್ತು ಕೃತಿಕಾ ತಮ್ಮ ಮುದ್ದಿನ ಗಂಡ ಅರ್ಮಾನ್ ಮಲ್ಲಿಕ್ ಅವರ ಧೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡಿದ್ದರು. ಉಪವಾಸ ಕೂಡ ಇದ್ದರು. ಈ ಸಮಯದಲ್ಲಿ ಅರ್ಮಾನ್ ಮಲ್ಲಿಕ್ ಜೊತೆ ಲಕ್ಷ್ಯ್ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಇವರಿಬ್ಬರ ಈ ಡ್ಯಾನ್ಸ್ ಈಗ ವೈರಲ್ ಆಗಿದೆ. ಲಕ್ಷ್ಯ್ ಹಾಕಿಕೊಂಡ ಮೆಹಂದಿಯಲ್ಲಿ ಅರ್ಮಾನ್ ಮಲ್ಲಿಕ್ ನಿಜವಾದ ಮೂಲನಾಮ ಸಂದೀಪ್ ಬರೆದಿರುವುದು ಕಣ್ಣಿಗೆ ಬಿದ್ದಿದೆ. ಇದು ಸಾಲದೆನ್ನುವಂತೆ ಗಂಡ-ಹೆಂಡತಿ ತರ ಇಬ್ಬರು ಅಕ್ಕ-ಪಕ್ಕ ಆತ್ಮೀಯವಾಗಿ ನಿಂತುಕೊಂಡು ಫೋಟೊಗಳನ್ನು ಕ್ಲಿಕಿಸಿಕೊಂಡಿದ್ದಾರೆ. ಪಾಯಲ್ ಮತ್ತು ಕೃತಿಕಾ ಜೊತೆ ಲಕ್ಷ್ಯ್ ಕೂಡ ಉಪವಾಸ ಮಾಡಿದ್ದಾರೆ. ಈ ಕಾರಣಕ್ಕೆ ಬೆಚ್ಚಿ ಬಿದ್ದಿರುವ ಅನೇಕರು ಅರ್ಮಾನ್ ಮಲ್ಲಿಕ್ ಮೂರನೇ ಮದುವೆಯಾಗಿದ್ದಾರೆ ಎನ್ನುತ್ತಿದ್ದಾರೆ. ಇಬ್ಬರು ಪತ್ನಿಯರಿದ್ದರು ಕೂಡ ವಿಚ್ಛೇದನವನ್ನು ನೀಡದೇ ಮೂರನೇ ಮದ್ವೆಯಾಗಿದ್ದಕ್ಕೆ ಅನೇಕರು ಕ್ಯಾಕರಿಸಿ ಉಗಿಯುತ್ತಿದ್ದಾರೆ. ನಿಮಗೆಲ್ಲ ನಾಚಿಕೆ ಮಾನ ಮರ್ಯಾದೆ ಏನಾದರೂ ಇದೆಯಾ ಎನ್ನುವ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಇವರಿಗೆಲ್ಲ ಹೇಳೋರು ಕೇಳೋರು ಯಾರು ಇಲ್ಲವಾ ಎಂದು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

More from Filmibeat

Read more about: biggboss marriage viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X