For Quick Alerts
  ALLOW NOTIFICATIONS  
  For Daily Alerts

  ಪತ್ನಿಯನ್ನು ಕೊಂದ ಆರೋಪದಲ್ಲಿ ಜನಪ್ರಿಯ ಯೂಟ್ಯೂಬರ್ ಬಂಧನ

  |

  ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್‌ಗಳ ಅಪರಾಧ ಪ್ರಕರಣಗಳು, ಸಾರ್ವಜನಿಕ ಕಿರಿಕ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಹೊರಗೆ ಬರುತ್ತಿವೆ. ಇದೀಗ ಜನಪ್ರಿಯ ಯೂಟ್ಯೂಬರ್‌ ಒಬ್ಬನ್ನು ಪತ್ನಿಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ.

  ಜೀತು ಜಾನ್ ಹೆಸರಿನಿಂದ ಯೂಟ್ಯೂಬ್‌ನಲ್ಲಿ ಖ್ಯಾತವಾಗಿರುವ ಜಿತೇಂದ್ರ ಅನ್ನು ಮುಂಬೈನ ಬ್ಯಾಂಡಪ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಜೀತು ಹಾಗೂ ಕೋಮಲ್ ಅಗರ್ವಾಲ್ ಇದೇ ವರ್ಷದ ಆರಂಭದಲ್ಲಿ ಪ್ರೇಮವಿವಾಹವಾಗಿದ್ದರು. ಕೋಮಲ್ ಹಾಗೂ ಜೀತು ಮುಂಬೈನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಭಾನುವಾರ ಕೋಮಲ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜೀತು ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ಕೋಮಲ್ ಪೋಷಕರು ದೂರು ನೀಡಿದ್ದಾರೆ.

  ಕೋಮಲ್ ತಮ್ಮ ಮನೆಯವರ ವಿರೋಧ ಕಟ್ಟಿಕೊಂಡು ಜೀತು ಜೊತೆ ಪರಾರಿಯಾಗಿ ವಿವಾಹವಾಗಿದ್ದರು. ವಿವಾಹದ ಬಳಿಕ ಇಬ್ಬರಲ್ಲೂ ಸಾಕಷ್ಟು ಜಗಳಗಳು ಆಗುತ್ತಲೇ ಇದ್ದವು. 'ಜೀತು ನನ್ನನ್ನು ಹೊಡೆಯುತ್ತಾನೆ, ಕೆಟ್ಟದಾಗಿ ಬೈಯುತ್ತಾನೆ' ಎಂದು ಹಲವಾರು ಬಾರಿ ಕೋಮಲ್ ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದರಂತೆ.

  ಪೊಲೀಸರಿಗೆ ಹೇಳಿಕೆ ನೀಡಿರುವ ಕೋಮಲ್ ಸಹೋದರಿ, 'ಜೀತು ಸದಾ ನನ್ನ ಸಹೋದರಿಯನ್ನು ಹೊಡೆಯುತ್ತಿದ್ದ. ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ ಅವನಿಗೆ ಅವಳನ್ನು ಕೊಲ್ಲವುದು ದೊಡ್ಡ ವಿಷಯವಲ್ಲ' ಎಂದಿದ್ದಾರೆ.

  Yash ಮಾಡಿದ ಒಳ್ಳೆ ಕೆಲಸಕ್ಕೆ Upendra ಫಿದಾ | Filmibeat Kannada

  ಜೀತು ಅನ್ನು ಪೊಲೀಸರು ಬಂಧಿಸಿದ್ದು ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ತೆಲುಗಿನ ಜನಪ್ರಿಯ ಯೂಟ್ಯೂಬರ್ ಫನ್‌ಬಕೆಟ್ ಭಾರ್ಗವ್ ಅನ್ನು ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

  English summary
  YouTuber Jeetu Jaan alias Jitendra arrest for allegedly killing his wife Komal Agarwal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X