ಜೈರಾಗೆ ಕಿರುಕುಳ: ಪ್ರಚಾರಕ್ಕಾಗಿ ಆರೋಪ ಮಾಡ್ತಿದ್ದಾರಾ ನಟಿ.?
ವಿಮಾನದಲ್ಲಿ 'ದಂಗಲ್' ನಟಿ ಜೈರಾ ವಾಸಿಂಗೆ ಲೈಂಗಿಕ ಕಿರಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನ ಪೊಲೀಸರು ಬಂಧಿಸಿದ್ದಾರೆ. ಆದ್ರೆ, ಬಂಧಿತ ವ್ಯಕ್ತಿಯ ಪತ್ನಿ ಈ ಆರೋಪವನ್ನ ತಳ್ಳಿ ಹಾಕಿದ್ದು, ನಟಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ನಟಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದೇ ಆದ್ರೆ, ಯಾಕೆ ಆ ನಟಿ ಆ ಸಮಯದಲ್ಲಿ ಸುಮ್ಮನಿದ್ದರು. ಯಾಕೆ ಆ ವ್ಯಕ್ತಿಯನ್ನ ಪ್ರಶ್ನಿಸಲಿಲ್ಲ. ಆಕೆಯ ಜೊತೆ ಅವರ ಅಮ್ಮ ಕೂಡ ಇದ್ದರು. ಹೀಗಿದ್ದರೂ ಯಾಕೆ ಅವರಿಬ್ಬರು ಸೇರಿ ಗಲಾಟೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇನ್ನು ತಮ್ಮ ಪತಿಯ ಬಗ್ಗೆ ಸಮರ್ಥಿಸಿಕೊಂಡಿರುವ ಆಕೆ ''ನನ್ನ ಗಂಡ ತುಂಬ ದಣಿದಿದ್ದು ವಿಮಾನದಲ್ಲಿ ನಿದ್ದೆ ಹೋಗಿದ್ದರು. ಆತ ಅಮಾಯಕ, ಲೈಂಗಿಕ ಕಿರುಕುಳ ನೀಡುವವನಲ್ಲ. ಆಕೆ (ಜೈರಾ) ತಪ್ಪು ಗ್ರಹಿಕೆಯಿಂದ ದೂರು ನೀಡಿದ್ದಿರಬಹುದು ಎಂದಿದ್ದಾರೆ.
"ನಮ್ಮ ಕುಟುಂಬದಲ್ಲಿ ಸಂಬಂಧಿಕರೊಬ್ಬರು ಸತ್ತ ಹೋಗಿದ್ದರು. ಅವರ ಅಂತ್ಯಕ್ರಿಯೆಗೆ ಹೋಗಲು ವಿಮಾನ ಪ್ರಯಾಣ ಮಾಡುತ್ತಿದ್ದರು. ಅವರಿಗೆ ಕಳೆದ 24 ತಾಸುಗಳಲ್ಲಿ ನಿದ್ದೆಯೇ ಇರಲಿಲ್ಲ. ಹೀಗಾಗಿ, ಯಾರೂ ತೊಂದರೆ ಕೊಡಬೇಡಿ ಎಂದು ಹೇಳಿಯೇ ಮಲಗಿದ್ದರು ಎಂದು ಆರೋಪಿತ ವ್ಯಕ್ತಿಯ ಪತ್ನಿ ತಿಳಿಸಿದ್ದಾರೆ.
'ದಂಗಲ್' ಚಿತ್ರದ ನಟಿ ಜೈರಾಗೆ ವಿಮಾನದಲ್ಲಿ ಕಿರುಕುಳ

ಈಕೆಯ ಆರೋಪಗಳನ್ನ ಪರಿಗಣಿಸುವುದಾದರೇ, ನಟಿ ಜೈರಾ ಏನಾದರೂ ಪ್ರಚಾರಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರಾ ಎಂಬ ಅನುಮಾನ ಕಾಡುವುದು ಸಹಜ. ಆದ್ರೆ, ತನಿಖೆಯಿಂದ ಮಾತ್ರ ಸತ್ಯ ಏನು ಎಂಬುದು ಹೊರಬರಬೇಕಿದೆ.


Click it and Unblock the Notifications











