ಶಾಕ್ ನೀಡಿದ ಧರ್ಮದ ಹಾದಿ ಹಿಡಿದು ಹೋಗಿದ್ದ ದಂಗಲ್ ನಟಿ, 24ರ ಹರೆಯದಲ್ಲಿ ಸದ್ದಿಲ್ಲದೇ ಮದುವೆಯಾದ ಝೈರಾ ವಾಸಿಂ

ಒಮ್ಮೊಮ್ಮೆ ಯಶಸ್ಸು ಹೇಗೆ ಸ್ವೀಕರಿಸಬೇಕೆನ್ನುವುದೇ ಗೊತ್ತಾಗುವುದಿಲ್ಲ. ಜಾತಕದಲ್ಲಿ ರಾಜಯೋಗ ಇದ್ದರೂ ಕೂಡ ಇಂತಹದ್ದೊಂದು ಕರ್ಮಕ್ಕಾಗಿ ರಾಜಯೋಗ ಬರಬೇಕಿತ್ತಾ ಎಂದು ನಮಗೆ ಅನಿಸುವ ರೀತಿಯಲ್ಲಿ ಯಶಸ್ಸು ದಾರುಣತೆಗಳನ್ನು ನಿರ್ಮಾಣ ಮಾಡಿರುತ್ತೆ. ಹೀಗಾಗಿಯೇ ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಸಿಕ್ಕ ಯಶಸ್ಸನ್ನು ಸಂಭಾಳಿಸಲು ಆಗದೇ ಖಿನ್ನತೆಗೊಳಗಾಗಿ...

ಬದುಕಲು ಸಾಧ್ಯವಾಗದೇ ಬದುಕಿಗೆ ಇತಿಶ್ರೀ ಹಾಡುತ್ತಾರೆ. ಮತ್ತೂ ಕೆಲವರು ಆಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕನ್ನು ಕಂಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ..ಪ್ರಸಿದ್ಧ ಕವಿತೆಯ ಈ ಸಾಲುಗಳಿಗೆ ಝೈರಾ ವಾಸಿಂ ಸದ್ಯದ ತಾಜಾ ಉದಾಹರಣೆ.

Zaira Wasim s New Chapter The Dangal Actress is Married See the First Intimate Nikaah Details

ಹೌದು, ಝೈರಾ ವಾಸಿಂ.. ಒಂದಾನೊಂದು ಕಾಲದಲ್ಲಿ ಬಾಲಿವುಡ್‌ನ ಬೆಕ್ಕಸ ಬೆರಗಾಗಿಸಿದ್ದ ನಟಿ. ''ದಂಗಲ್'' ಚಿತ್ರದಲ್ಲಿ ಆಮಿರ್ ಖಾನ್ ಮಗಳ ಪಾತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಬಂದ ಝೈರಾಗೆ ಈ ಚಿತ್ರದಿಂದ ಊಹೆಗೂ ನಿಲುಕದ ಜನಪ್ರಿಯತೆ ಸಿಕ್ಕಿತ್ತು. ಈ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತ್ತು.

ಆ ನಂತರ ಮತ್ತೆ ಆಮಿರ್ ಖಾನ್ ನಿರ್ಮಾಣದಲ್ಲಿ ಸಿದ್ದವಾದ ''ಸೀಕ್ರೆಟ್ ಸೂಪರ್ ಸ್ಟಾರ್'' ಚಿತ್ರ ಇವರ ಖ್ಯಾತಿಯನ್ನು ಇನ್ನೂ ಹೆಚ್ಚಿಸಿತ್ತು. ''ದಿ ಸ್ಕೈ ಇಸ್ ಪಿಂಕ್'' ಎಂಬ ಚಿತ್ರವನ್ನು ಕೂಡ ಮಾಡಿದರು ಝೈರಾ. ಆದರೆ.. ಆ ನಂತರ ಚಿತ್ರರಂಗದಲ್ಲಿ ಐದು ವರ್ಷ ಪೂರೈಸಿದ್ದ ಝೈರಾ ಏಕಾಏಕಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು.

2019ರ ಜೂನ್‌ನಲ್ಲಿ ಇದ್ದಕ್ಕಿದ್ದಂತೆಯೇ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಆಘಾತ ನೀಡಿದ ಝೈರಾ ವಾಸಿಂ, ಸಮಯ.. ಶ್ರಮ.. ಮತ್ತು ಭಾವನೆಗಳನ್ನು ತೊಡಗಿಸಿ ನಾನು ಮಾಡುತ್ತಿದ್ದ ಕೆಲಸಗಳು ನನ್ನೊಳಗೆ ತಳಮಳ ಹುಟ್ಟುಹಾಕುತ್ತಿದ್ದವು ಎಂದು ಹೇಳಿದರು. ನಾನು ಬಾಲಿವುಡ್‌ಗೆ ಸರಿಯಾಗಿ ಹೊಂದಬಹುದು, ಆದರೆ ಖಂಡಿತ ನಾನು ಅಲ್ಲಿನವಳು ಆಗಲಾರೆ. ಚಿತ್ರಜಗತ್ತು ನನಗೆ ಸಾಕಷ್ಟು ಪ್ರೀತಿ, ಬೆಂಬಲ ಮತ್ತು ಹೊಗಳಿಕೆಯನ್ನು ತಂದುಕೊಟ್ಟಿದೆ. ಆದರೆ ಅದರಿಂದ ಧರ್ಮದ ಜೊತೆಗಿನ ನನ್ನ ಸಂಬಂಧಕ್ಕೆ ಧಕ್ಕೆಯಾಗಿದೆ ಎಂದು ಹೇಳಿದರು.

ಮುಂದುವರೆದು ನಿಧಾನವಾಗಿ, ಅಪ್ರಜ್ಞಾಪೂರ್ವಕವಾಗಿ ನಾನು (ಇಮಾನ್) ದೇವರ ಹಾದಿಯಿಂದ ದೂರವಾಗುತ್ತಿದ್ದೇನೆ. ನಾನು ಕೆಲಸ ಮಾಡುವ ಸ್ಥಳವು ನನ್ನ ಇಮಾನ್ ಹಾದಿಗೆ ಅಡ್ಡಬರುತ್ತಿದೆ. ಧರ್ಮದೊಂದಿಗಿನ ನನ್ನ ಸಂಬಂಧಕ್ಕೆ ಆತಂಕವೊಡ್ಡಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುಧೀರ್ಘವಾದ ಪತ್ರ ಹಂಚಿಕೊಂಡರು. ಧರ್ಮದ ಜೊತೆಗಿನ ಸಂಬಂಧಕ್ಕೆ ಈ ಬಣ್ಣದ ಲೋಕ ಅಡ್ಡಗಾಲು ಹಾಕುತ್ತಿದೆ ಎಂದು ಹೇಳಿ ಚಿತ್ರರಂಗದಿಂದ ದೂರ ಆದರು.

Zaira Wasim s New Chapter The Dangal Actress is Married See the First Intimate Nikaah Details

ಇಂಥಾ ಝೈರಾ ವಾಸಿಂ ಇದೀಗ ಸದ್ದು ಗದ್ದಲ ಇಲ್ಲದೇ ತಮ್ಮ 24ನೇ ಪ್ರಾಯದಲ್ಲಿ ಮದುವೆಯಾಗಿದ್ದಾರೆ. ಈ ಮೂಲಕ ಹಲವರನ್ನು ಮತ್ತೊಮ್ಮೆ ಅಚ್ಚರಿಗೆ ದೂಡಿದ್ದಾರೆ. ಮದುವೆ ಪ್ರಮಾಣ ಪತ್ರಕ್ಕೆ ಸಹಿ ಹಾಕುತ್ತಿರುವ ಫೋಟೊವನ್ನು ಹಂಚಿಕೊಂಡಿರುವ ಝೈರಾ ವಾಸಿಂ ಕಬೂಲ್ ಹೈ ಎಂದು ಬರೆದುಕೊಂಡಿದ್ದಾರೆ. ತಮ್ಮ ಮುಖಚಹರೆಯಾಗಲಿ ಅಥವಾ ತಮ್ಮ ಕೈ ಹಿಡಿದ ಹುಡುಗನ ಮುಖವನ್ನಾಗಲಿ ಝೈರಾ ಇಲ್ಲಿ ಬಹಿರಂಗಗೊಳಿಸಿಲ್ಲ. ತಮ್ಮ ಮದುವೆಯ ಕುರಿತು ಹೆಚ್ಚಿನ ವಿವರಗಳನ್ನು ಕೂಡ ಹಂಚಿಕೊಂಡಿಲ್ಲ. ಹೀಗಾಗಿಯೇ ಹಲವರಲ್ಲಿ ಈಗ ಇವರ ವ್ಯೆಯಕ್ತಿಕ ವಿಚಾರ ತಿಳಿದುಕೊಳ್ಳುವ ಕುತೂಹಲ ಮನೆ ಮಾಡಿದೆ.

ಸದ್ಯ ಝೈರಾ ವಾಸಿಂ ಅವರಿಗೆ ಹಲವಾರು ಜನ ಶುಭಾಶಯಗಳನ್ನು ಕೋರುತ್ತಿದ್ದಾರೆ. ಮದುವೆಯ ಫೋಟೊ ಹಂಚಿಕೊಂಡ ಹನ್ನೆರಡು ಗಂಟೆಗಳಲ್ಲಿ 113,978 ಮೆಚ್ಚುಗೆಗಳು ಝೈರಾ ಅವರ ಫೋಸ್ಟ್‌ಗೆ ಸಿಕ್ಕಿವೆ. ತಮ್ಮ ದಾಂಪತ್ಯ ಜೀವನದ ಕುರಿತು ಮುಂಬರುವ ದಿನಗಳಲ್ಲಿ ಝೈರಾ ವಾಸಿಂ ಮಾತನಾಡುತ್ತಾರಾ..? ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..? ತಾವು ಕೈ ಹಿಡಿದ ಹುಡುಗ ಯಾರು..? ಅವನ ಹಿನ್ನೆಲೆಯೇನು..? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zaira Wasim ties the knot in an intimate ceremony. The former 'Dangal' star shares her wedding announcement and first glimpse without showing her face
Read more about: marriage zaira wasim
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X