ರೆಸ್ಟೋರೆಂಟ್‌ನಲ್ಲಿ ಜೋಡಿ ಹಕ್ಕಿ ; 30 ವರ್ಷದ ಮಾಡೆಲ್‌ಗೆ ಮನ ಸೋತ 39 ವರ್ಷದ ಸ್ಟಾರ್ ನಟಿ-ವಿಡಿಯೋ ವೈರಲ್
ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೇಳಬೇಕು. ಈ ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಪ್ರೀತಿ ಹುಟ್ಟಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಇನ್ನೂ ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ.
ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ. ಸದ್ಯ ಈ ಭಾವ ಜರೀನ್ ಖಾನ್ ಅವರ ಮನದಲ್ಲಿಯೂ ಮೂಡಿದೆಯಾ..? ಗೊತ್ತಿಲ್ಲ. ಆದರೆ.. ಜರೀನ್ ಖಾನ್ ಅವರಿಗೆ ಪ್ರೀತಿಯ ಅಮಲೇರಿದೆ ಎಂಬ ಸುದ್ದಿ ಮಾತ್ರ ಸದ್ಯ ಮಾಯಾನಗರಿ ಮುಂಬೈನೆಲ್ಲೆಡೆ ಗುಲ್ಲಾಗಿದೆ.

ಹೌದು.. ಜರೀನ್ ಖಾನ್.. ಒಂದ್ಕಾಲದಲ್ಲಿ ಕತ್ರಿನಾ ಕೈಫ್ ಅವರ ತದ್ರೂಪಿಯೆಂದೇ ಹೆಸರಾದ ಚೆಲುವೆ. ಇಷ್ಟೇ ಅಲ್ಲ ಕತ್ರಿನಾ ಅವರಂತೆಯೇ ಸಲ್ಮಾನ್ ಖಾನ್ ಅವರ ಕ್ಯಾಂಪ್‌ನಲ್ಲಿ ಗುರುತಿಸಿಕೊಂಡ ಬೆಡಗಿ ಕೂಡ ಹೌದು ಜರೀನ್ ಖಾನ್. ಆದರೆ.. ಕತ್ರಿನಾ ಕೈಫ್‌ಗೆ ಸಿಕ್ಕ ಯಶಸ್ಸು.. ಅವಕಾಶ.. ಜರೀನ್ ಖಾನ್‌ಗೆ ಸಿಗಲಿಲ್ಲ. ವೃತ್ತಿ ಬದುಕು ಮೇಲಕ್ಕೇರಲಿಲ್ಲ.
ಇಂಥಾ ಜರೀನ್ ಖಾನ್ ಅವರಿಗೆ ಈಗ 39ರ ಹರೆಯ. ಆದರೆ ಮದುವೆಯ ಯೋಗ ಮಾತ್ರ ಇನ್ನೂ ಕೂಡಿ ಬಂದಿಲ್ಲ. ಹೀಗಿರುವಾಗ ಇದೀಗ ಮಾಡೆಲ್ ಆಗಿ ಗುರುತಿಸಿಕೊಂಡಿರುವ, 30 ವರ್ಷದ ಫಾರೆನ್ ಹುಡುಗ ರೋಹೆದ್ ಖಾನ್‌ಗೆ ಜರೀನ್ ಖಾನ್ ಮನ ಸೋತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಜರೀನ್ ಖಾನ್ ಮತ್ತು ರೋಹೆದ್ ಖಾನ್ ಮುಂಬೈನ ರೆಸ್ಟೋರೆಂಟ್‌ನಿಂದ ಹೊರ ಬರುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೀಗಾಗಿ ರೋಹೆದ್ ಮತ್ತು ಜರೀನ್ ಖಾನ್ ನಡುವೆ ಪ್ರೇಮಾಂಕುರವಾಗಿದೆ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ಆದರೆ. ಇದಕ್ಕೆ ರೋಹೆದ್ ಖಾನ್ ಹೇಳುವುದೇ ಬೇರೆ. ಈ ಕುರಿತು ''ದಿ ಫ್ರೀ ಪ್ರೆಸ್ ಜರ್ನಲ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರೋಹೆದ್ ಖಾನ್ ನಾವು ಇಬ್ಬರು ಒಳ್ಳೆಯ ಸ್ನೇಹಿತರು ಅಷ್ಟೇ.. ತುಂಬಾ ದಿನ ಆಗಿತ್ತು ಹೀಗಾಗಿ ಜೊತೆಯಲ್ಲಿ ಕುಂತು ಊಟ ಮಾಡಿದ್ವಿ ಅಷ್ಟೇ ಎಂದು ಹೇಳಿದ್ದಾರೆ.
ಆದರೂ ಕೂಡ ರೋಹೆದ್ ಅವರ ಈ ಮಾತುಗಳ ಮೇಲೆ ಹಲವರಿಗೆ ನಂಬಿಕೆ ಇಲ್ಲ. ಯಾಕೆಂದರೆ ಈ ಹಿಂದೆ ನಮ್ಮ ನಡುವೆ ಆ ತರಹದ ಸಂಬಂಧ ಇಲ್ಲ. ನಾವು ಕೇವಲ ಫ್ರೆಂಡ್ಸ್ ಅಷ್ಟೇ ಎಂದು ಹೇಳಿದ ಹಲವರು ಆ ನಂತರ ಮದುವೆಯಾದ ಉದಾಹರಣೆಗಳಿವೆ. ಹೀಗಾಗಿಯೇ ಈ ಡ್ರಾಮಾ ಎಲ್ಲ ನಮ್ಮ ಹತ್ರ ಬೇಡ ಎಂದು ಹಲವರು ಮುಂಬೈನಲ್ಲಿ ರೋಹೆದ್ ಮತ್ತು ಜರೀನ್‌ಗೆ ಹೇಳುತ್ತಿದ್ಧಾರೆ.

ಇನ್ನು ದೀಪಾವಳಿ ಹಬ್ಬವನ್ನು ಕೂಡ ಮೊನ್ನೆ ಮೊನ್ನೆ ಇಬ್ಬರು ಜೊತೆಯಲ್ಲಿಯೇ ಆಚರಿಸಿದ್ದಾರೆ. ಈ ಹಿನ್ನೆಲೆ ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂಬ ಅಭಿಪ್ರಾಯವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ಧಾರೆ. ಅಂದ್ಹಾಗೇ ಜರೀನ್ ಖಾನ್ ಅವರ ಹೆಸರು ಈ ಹಿಂದೆ ''ಬಿಗ್ ಬಾಸ್ 12''ರ ಸ್ಫರ್ಧಿ ಶಿವಾಶೀಶ್ ಮಿಶ್ರಾ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಹೊರ ಬಂದಿತ್ತು. ಆದರೆ.. ಕಳೆದ ವರ್ಷ ಇವರ ಸಂಬಂಧದಲ್ಲಿ ಬಿರುಕು ಮೂಡಿತು. ಈಗ ರೋಹೆದ್ ಜೊತೆ ಜರೀನ್ ಹೆಸರು ಕೇಳಿ ಬರುತ್ತಿದೆ.
ಇನ್ನುಳಿದಂತೆ ರೋಹೆದ್ ಕೇವಲ ಮಾಡೆಲ್ ಮಾತ್ರ ಅಲ್ಲ ಆಕ್ಟರ್ ಕೂಡ ಹೌದು. ಕಂಗನಾ ರಣಾವತ್ ಅಭಿನಯದ '' ತೇಜಸ್''.. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ''ಬಡೇ ಮಿಯಾ ಚೋಟೆ ಮಿಯಾ''.. ಚಿತ್ರಗಳಲ್ಲಿ ರೋಹೆದ್ ಅಭಿನಯಿಸಿದ್ದಾರೆ. ''ಸರ್ಜಮಿನ್'' ಮತ್ತು ''ಡಿಟೆಕ್ಟಿವ್ ಶೇರ್‌ದಿಲ್'' ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ಧಾರೆ. ತಮ್ಮ ಕುರಿತ ಈ ಸುದ್ದಿಗೆ ಜರೀನ್ ಖಾನ್ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


Click it and Unblock the Notifications











