ನಿನ್ನ ಒದ್ದೆ ಮಾಡಲು 5 ನಿಮಿಷ ಸಾಕು ; 38ರ ಹರೆಯದ ಖ್ಯಾತ ನಾಯಕಿಗೆ ಅಶ್ಲೀಲ ಸಂದೇಶಗಳ ಮಹಾಪೂರ-ನಟಿ ಧಗಧಗ

ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ.ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ..

ಸಾಕಷ್ಟು ಮಂದಿ ಒಂದು ಕಡೆ ಚಿತ್ರರಂಗದಲ್ಲಿನ ಮಹಿಳೆಯರಿಗೆ, ನಟಿಯರಿಗೆ ಲೈಂಗಿಕ ಶೋಷಣೆ, ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಸ್ತ್ರೀಯರ ಬಾಳಿಗೆ ಕಗ್ಗಂಟಾಗಿ ಉಳಿದಿದ್ದಾರೆ.ಮತ್ತೊಂದು ಕಡೆ ಅಭಿಮಾನದ ಹೆಸರಿನಲ್ಲಿ ಅಂಧಾಭಿಮಾನದ ಪ್ರದರ್ಶನ ಮಾಡುತ್ತಿದ್ದಾರೆ. ಅನೇಕರು ಅನೇಕ ನಾಯಕಿಯರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆಯೇ ''ಜರೀನ್ ಖಾನ್'' ಅವರಿಗಾದ ಅನುಭವ.

Zareen Khan Fights Back Slams Vulgar and Obscene Comments Flooding Her Social Media

ಹೌದು.. ಜರೀನ್ ಖಾನ್.. ಒಂದ್ಕಾಲದಲ್ಲಿ ಕತ್ರಿನಾ ಕೈಫ್ ಅವರ ತದ್ರೂಪಿಯೆಂದೇ ಹೆಸರಾದ ಚೆಲುವೆ. ಇಷ್ಟೇ ಅಲ್ಲ ಕತ್ರಿನಾ ಅವರಂತೆಯೇ ಸಲ್ಮಾನ್ ಖಾನ್ ಅವರ ಕ್ಯಾಂಪ್‌ನಲ್ಲಿ ಗುರುತಿಸಿಕೊಂಡ ಬೆಡಗಿ ಕೂಡ ಹೌದು ಜರೀನ್ ಖಾನ್.

ಆದರೆ.. ಕತ್ರಿನಾ ಕೈಫ್‌ಗೆ ಸಿಕ್ಕ ಯಶಸ್ಸು.. ಅವಕಾಶ.. ಜರೀನ್‌ ಖಾನ್‌ಗೆ ಸಿಗಲಿಲ್ಲ. ವೃತ್ತಿ ಬದುಕು ಮೇಲಕ್ಕೇರಲಿಲ್ಲ. ಇಂಥಾ ಜರೀನ್ ಖಾನ್ ಅವರಿಗೆ ಹಲವರು ಇನ್‌ಸ್ಟಾಗ್ರಾಮ್‌ನಲ್ಲಿ ಕಾಡುತ್ತಿದ್ದಾರೆ. ಅಶ್ಲೀಲ ಅಸಭ್ಯ ಅಸಹ್ಯ ಸಂದೇಶವನ್ನು ಕಳುಹಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನೊಂದು ಬೆಂದು ಹೋಗಿರುವ ಜರೀನ್ ಖಾನ್ ಸದ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಂಡ ಕಾರಿದ್ದಾರೆ. ಕಳವಳವನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜರೀನ್ ಖಾನ್ ನನ್ನಂತೆಯೇ ನಿಮಗೂ ಕೂಡ ಅನುಭವ ಆಗುತ್ತಿದ್ದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಏನಾಗ್ತಿದೆ ಎನ್ನುವುದೇ ನನಗೆ ಅರ್ಥ ಆಗ್ತಿಲ್ಲ ಎಂದಿರುವ ಜರೀನ್ ಖಾನ್ ಯಾವ ಫೋಟೊ ಅಥವಾ ವಿಡಿಯೋ ಹಾಕಿದರು ಕೂಡ ಅಲ್ಲಿ ಹುಡುಗರು ಎಲ್ಲರು ಬಂದು ಹಾಜರಾಗಿ.. ಸರ್ವಿಸ್ ಲಭ್ಯ ಇದೆ.. ನನಗೆ ಬಾಯ್‌ಫ್ರೆಂಡ್ ಬೇಕು.. ಮನೆಯಲ್ಲಿ ಒಬ್ಬಳೇ ಇದ್ದೇನೆ.. ಎಂದು ಯಾಕೆ ಜನ ಕಾಮೆಂಟ್ ಮಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಇವರೆಲ್ಲ ಯಾರು..? ನಿಜವಾದ ವ್ಯಕ್ತಿಗಳಾ ಅಥವಾ ಹೇಗೆ..? ಎಂದು ಪ್ರಶ್ನೆ ಮಾಡಿರುವ ಜರೀನ್ ಖಾನ್, ಯಾರಾದರೂ ಅಗಲಿದಾಗ ಆ ನೋವಲ್ಲಿ ನಾವು ಅವರ ಫೋಟೊ ಹಂಚಿಕೊಂಡರು ಕೂಡ ಇವರು ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲಿಯೂ ಬಂದು ಐದು ನಿಮಿಷದಲ್ಲಿ ನಿಮ್ಮನ್ನು ಒದ್ದೆ ಮಾಡುತ್ತೇವೆ ಎಂದು ಕಾಮೆಂಟ್ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ನನ್ನ ತಿಳುವಳಿಕೆಯನ್ನು ಮೀರಿದ್ದು ಇದೆಲ್ಲದರಿಂದ ನನಗೆ ತುಂಬಾ ಕಿರಿಕಿರಿಯಾಗುತ್ತಿದೆ. ಯಾರಾದರೂ ಗೊತ್ತಿದ್ದವರು ಯಾಕೆ ಹೀಗೆ ಎಂದು ಹೇಳಿ ಎಂದು ಕೂಡ ಜರೀನ್ ಹೇಳಿದ್ದಾರೆ.

Zareen Khan Fights Back Slams Vulgar and Obscene Comments Flooding Her Social Media

ಜರೀನ್ ಖಾನ್ ಅವರ ಈ ಮಾತುಗಳಿಗೆ ಹಲವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಕೊಳಕು ಸಂದೇಶಗಳನ್ನು ಕಳುಹಿಸುವರನ್ನು ನಿರ್ಲಕ್ಷ್ಯ ಮಾಡಿ ಎಂದು ಹೇಳಿದ್ದಾರೆ. ಕೆಲವರು ಅವರನ್ನೆಲ್ಲಾ ಬ್ಲಾಕ್ ಮಾಡಿ ಎಂದಿದ್ದಾರೆ. ಮತ್ತೂ ಕೆಲವರು ಸೈಬರ್ ಕ್ರೈಮ್‌ನಲ್ಲಿ ದೂರು ದಾಖಲಿಸುವಂತೆ ಸಲಹೆಯನ್ನು ಕೂಡ ನೀಡಿದ್ದು ನಮ್ಮ ಸಮಾಜದಲ್ಲಿ ಸಭ್ಯತೆ ಎನ್ನುವುದೇ ಕಣ್ಮರೆಯಾಗಿದೆ ಗಮನ ಸೆಳೆಯಲು ನಾನಾ ಕಸರತ್ತುಗಳನ್ನು ಹಲವರು ಮಾಡುತ್ತಾರೆ ಎಂದು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಜರೀನ್ ಖಾನ್ ಎತ್ತಿದ ಈ ಗಂಭೀರ ಪ್ರಶ್ನೆಯ ಕುರಿತು ಚರ್ಚೆ ನಡೆಯುತ್ತಿದೆ.

More from Filmibeat

English summary
Zareen Khan fights back, publicly shaming social media users for highly inappropriate and vulgar comments. Read her powerful message against online harassment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X