Zee Cini Awards 2023: ಅತ್ಯುತ್ತಮ ನಟ, ನಟಿ ಹಾಗೂ ಚಿತ್ರ ಪ್ರಶಸ್ತಿ ಯಾರ ಪಾಲು?
ಕಳೆದ ವರ್ಷ ( 2022 ) ಸಿನಿಮಾ ಕ್ಷೇತ್ರಕ್ಕೆ ಗೋಲ್ಡನ್ ಇಯರ್ ಎಂದೇ ಹೇಳಬಹುದು. ಕೊರೊನಾದಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಸಿನಿಮಾ ಕ್ಷೇತ್ರ ಸುಧಾರಿಸಿಕೊಂಡ ವರ್ಷ ಇದಾಗಿದ್ದು, ಒಳ್ಳೊಳ್ಳೆ ಚಿತ್ರಗಳು ಬಿಡುಗಡೆಯಾದವು. ಅದರಲ್ಲಿಯೂ ವಿಶೇಷವಾಗಿ ಸೌತ್ ಇಂಡಸ್ಟ್ರಿಯ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದವು.
ಕಳೆದ ವರ್ಷ ದಕ್ಷಿಣ ಭಾರತ ಚಿತ್ರರಂಗಗಳ ಸಿನಿಮಾಗಳು ಅಬ್ಬರಿಸಿದರೆ, ಬಾಲಿವುಡ್ ಸಿನಿಮಾಗಳು ಗೆಲುವು ಕಂಡದ್ದಕ್ಕಿಂತ ಸೋತಿದ್ದೇ ಹೆಚ್ಚು. ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳು ಬಾಯ್‌ಕಟ್ ಟ್ರೆಂಡ್‌ಗೆ ಸಿಲುಕಿ ಮಕಾಡೆ ಮಲಗಿದರೆ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದವು. ಇನ್ನು ಕಳೆದ ಸಾಲಿನಲ್ಲಿ ಬಿಡುಗಡೆಗೊಂಡ ಚಿತ್ರಗಳಿಗೆ ಈ ವರ್ಷ ಹಲವು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಜರುಗುತ್ತಿದ್ದು, ಉತ್ತಮ ಚಿತ್ರಗಳು ಹಾಗೂ ಕಲಾವಿದರು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿದ್ದಾರೆ.

ಇದೀಗ ಕಳೆದ ಭಾನುವಾರ ( ಫೆಬ್ರವರಿ 26 ) ಜೀ ಸಂಸ್ಥೆ ನೀಡುವ ಜೀ ಸಿನಿ ಪ್ರಶಸ್ತಿ ಕಾರ್ಯಕ್ರಮ ಜರುಗಿದ್ದು, ಈ ಕಾರ್ಯಕ್ರಮದಲ್ಲಿ ಯಾವ ಯಾವ ಕಲಾವಿದರು ಪ್ರಶಸ್ತಿ ಪಡೆದುಕೊಂಡರು ಹಾಗೂ ಯಾವ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..
ಅತ್ಯುತ್ತಮ ನಟ: ಕಾರ್ತಿಕ್ ಆರ್ಯನ್ (ಭೂಲ್ ಭುಲೈಯಾ 2)
ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಥಿಯಾವಾಡಿ)
ಅತ್ಯುತ್ತಮ ಚಿತ್ರ: ದಿ ಕಾಶ್ಮೀರ್ ಫೈಲ್ಸ್

ವೀಕ್ಷಕರ ಆಯ್ಕೆ ಅತ್ಯುತ್ತಮ ನಟಿ: ಆಲಿಯಾ ಭಟ್ (ಡಾರ್ಲಿಂಗ್ಸ್)
ವೀಕ್ಷಕರ ಆಯ್ಕೆ ಅತ್ಯುತ್ತಮ ನಟ: ಅನುಪಮ್ ಖೇರ್ (ದಿ ಕಾಶ್ಮೀರ್ ಫೈಲ್ಸ್)
ಪರ್ಫಾಮರ್ ಆಫ್ ದಿ ಇಯರ್ ( ಪುರುಷ ): ವರುಣ್ ಧವನ್ (ಜುಗ್ ಜುಗ್ ಜೀಯೋ ಮತ್ತು ಭೇದಿಯಾ)
ಪರ್ಫಾಮರ್ ಆಫ್ ದಿ ಇಯರ್ ( ಮಹಿಳೆ ): ಕಿಯಾರಾ ಅಡ್ವಾಣಿ (ಜುಗ್ ಜುಗ್ ಜೀಯೋ ಮತ್ತು ಭೂಲ್ ಭುಲೈಯಾ 2)
ಅತ್ಯುತ್ತಮ ಉದಯೋನ್ಮುಖ ನಟಿ: ರಶ್ಮಿಕಾ ಮಂದಣ್ಣ (ಗುಡ್ ಬೈ)
ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್ (ಜುಗ್ ಜುಗ್ ಜೀಯೋ)


Click it and Unblock the Notifications











