twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವೈರಸ್ ಗೆದ್ದು ಬಂದ ಬಾಲಿವುಡ್‌ನ ಈ ಕುಟುಂಬ ಮಾಡುತ್ತಿದೆ ಜನಮೆಚ್ಚುವ ಕಾರ್ಯ

    |

    ಬಾಲಿವುಡ್‌ ನಿರ್ಮಾಪಕ ಕರೀಂ ಮೊರಾನಿ ಮತ್ತು ಅವರ ಮಕ್ಕಳಾದ ಜೊಯಾ ಮೊರಾನಿ ಹಾಗೂ ಶಾಜಾ ಮೊರಾನಿ ಮೂವರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಮೂವರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.

    Recommended Video

    ಚಲನಚಿತ್ರ ಕಾರ್ಮಿಕರಿಗೆ ನೇರವಾದ ಉಪೇಂದ್ರ | Upendra Donated | Film chamber | KFI

    ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ಅವರು ಆಸ್ಪತ್ರೆಯನ್ನು ಸಂಪರ್ಕಿಸುವ ಸಮಯಪ್ರಜ್ಞೆ ಮೆರೆದಿದ್ದರಿಂದ ಮೂವರೂ ಬೇಗನೆ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಪ್ರಸ್ತುತ ಮೂವರೂ ಕ್ವಾರೆಂಟೀನ್‌ನಲ್ಲಿದ್ದಾರೆ. ಬಾಲಿವುಡ್‌ನ ಕೊರೊನಾ ಪಾಸಿಟಿವ್ ಕುಟುಂಬ ಎಂಬ ಲೇವಡಿಗೆ ತುತ್ತಾಗಿದ್ದವರು ಈಗ ಜನರ ಅರೋಗ್ಯದ ದೃಷ್ಟಿಯಿಂದ ಮಾದರಿ ಕೆಲಸಕ್ಕೆ ಮುಂದಾಗಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಈ ಮೂವರೂ ದಿಟ್ಟ ತೀರ್ಮಾನ ತೆಗೆದುಕೊಂಡಿದ್ದಾರೆ. ಮುಂದೆ ಓದಿ...

    ಸೋಂಕಿತರಿಗೆ ನೆರವು

    ಸೋಂಕಿತರಿಗೆ ನೆರವು

    ತಂದೆ ಕರೀಂ ಮೊರಾನಿ, ಸಹೋದರಿ ಶಾಜಾ ಮತ್ತು ತಾವು ರಕ್ತದಾನ ಮಾಡುತ್ತಿದ್ದೇವೆ. ಇದು ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಸೋಂಕಿತರು ಗುಣಮುಖರಾಗಲು ಸಹಾಯ ಮಾಡಲಿದೆ ಎಂದು ಜೊಯಾ ಮೊರಾನಿ ತಿಳಿಸಿದ್ದಾರೆ.

    ಮಕ್ಕಳ ಬಳಿಕ ಅಪ್ಪನಿಗೂ ಬಂತು ಕೊರೊನಾ ವೈರಸ್: ಬಾಲಿವುಡ್ ಕುಟುಂಬಕ್ಕೆ ಕೋವಿಡ್ ಕಾಟಮಕ್ಕಳ ಬಳಿಕ ಅಪ್ಪನಿಗೂ ಬಂತು ಕೊರೊನಾ ವೈರಸ್: ಬಾಲಿವುಡ್ ಕುಟುಂಬಕ್ಕೆ ಕೋವಿಡ್ ಕಾಟ

    ರಕ್ತದಾನ ಮಾಡುವುದರಿಂದ ಸಹಾಯ

    ರಕ್ತದಾನ ಮಾಡುವುದರಿಂದ ಸಹಾಯ

    'ಈ ವಾರಾಂತ್ಯದಲ್ಲಿ ನಾವು ರಕ್ತದಾನ ಮಾಡಲಿದ್ದೇವೆ. ನಿಮ್ಮಲ್ಲಿ ಕೊರೊನಾ ವೈರಸ್ ನೆಗೆಟಿವ್ ಕಂಡುಬಂದ 14 ದಿನಗಳ ಬಳಿಕ ರಕ್ತದಾನ ಮಾಡಲು ಅವಕಾಶವಿದೆ. ನಿಮ್ಮ ರಕ್ತವನ್ನು ಬೇರೆಯವರಿಗೆ ಈ ಸಂದರ್ಭದಲ್ಲಿ ನೀಡಬಹುದು. ಏಕೆಂದರೆ ನಿಮ್ಮ ರಕ್ತದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಇದು ಬೇರೆಯ ಜನರು ಗುಣಮುಖರಾಗಲು ಸಹಾಯ ಮಾಡಬಹುದು' ಎಂದಿದ್ದಾರೆ.

    ಮೂವರಿಗೂ ವಿಭಿನ್ನ ಅನುಭವ

    ಮೂವರಿಗೂ ವಿಭಿನ್ನ ಅನುಭವ

    'ಕೊರೊನಾ ವೈರಸ್ ಲಕ್ಷಣಗಳು ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ನನ್ನ ತಂದೆಯಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಆದರೂ ಪಾಸಿಟಿವ್ ಇತ್ತು. ನನ್ನ ತಂಗಿಯಲ್ಲಿ ತೀವ್ರ ತಲೆನೋವು ಮತ್ತು ಜ್ವರ ಕಾಣಿಸಿಕೊಂಡಿತ್ತು. ಇನ್ನೊಂದೆಡೆ ನನಗೆ ಈ ಎಲ್ಲಾ ಲಕ್ಷಣಗಳೂ ಉಂಟಾಗಿತ್ತು ಎಂದು ತಿಳಿಸಿದ್ದಾರೆ.

    ಬಾಲಿವುಡ್ ನಿರ್ಮಾಪಕನ ಅವಳಿ ಹೆಣ್ಣುಮಕ್ಕಳಿಬ್ಬರಿಗೂ ಕೊರೊನಾ ಪಾಸಿಟಿವ್!ಬಾಲಿವುಡ್ ನಿರ್ಮಾಪಕನ ಅವಳಿ ಹೆಣ್ಣುಮಕ್ಕಳಿಬ್ಬರಿಗೂ ಕೊರೊನಾ ಪಾಸಿಟಿವ್!

    ಎದೆಯಲ್ಲಿ ಏನೋ ಸಿಲುಕಿಕೊಂಡಂತೆ

    ಎದೆಯಲ್ಲಿ ಏನೋ ಸಿಲುಕಿಕೊಂಡಂತೆ

    'ನನಗೆ ಮೊದಲು ಕೆಮ್ಮು ಹಾಗೂ ಕಣ್ಣಿನ ನೋವು ಶುರುವಾಗಿತ್ತು. ಬಳಿಕ ಉಸಿರಾಟದ ತೊಂದರೆ ಉಂಟಾಯಿತು. ಉಸಿರಾಡುವಾಗ ಎದೆಯಲ್ಲಿ ಏನೋ ಸಿಕ್ಕಿಕೊಂಡಂತೆ ಅನಿಸುತ್ತಿತ್ತು' ಎಂದು ಜೊಯಾ ತಮಗಾದ ಕೊರೊನಾ ವೈರಸ್ ಸೋಂಕಿನ ಅನುಭವವನ್ನು ಹಂಚಿಕೊಂಡಿದ್ದಾರೆ.

    ಅವರಿಗೆ ಹೋಲಿಸಿದಾಗ...

    ಅವರಿಗೆ ಹೋಲಿಸಿದಾಗ...

    ಆಸ್ಪತ್ರೆಯಲ್ಲಿ ನನ್ನ ಸುತ್ತಲೂ ಇದ್ದ ಐಟಿಯು ವಾರ್ಡ್‌ನಲ್ಲಿನ ಜನರ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಅವರಿಗೆ ವೆಂಟಿಲೇಟರ್ ಮತ್ತು ಆಕ್ಸಿಜನ್ ಮಾಸ್ಕ್ ಅಗತ್ಯವಾಗಿತ್ತು. ಏಕೆಂದರೆ ಅವರಲ್ಲಿದ್ದ ಸೋಂಕಿನ ಲಕ್ಷಣಗಳು ನನ್ನಲ್ಲಿದ್ದ ಲಕ್ಷಣಗಳಿಗಿಂತ ಹತ್ತು ಪಟ್ಟು ಪ್ರಬಲವಾಗಿದ್ದವು. ಅವರನ್ನು ಕಂಡಾಗ, ನನಗೆ ನಾನು ಕೃತಜ್ಞಳಾಗಿರಬೇಕು. ಏಕೆಂದರೆ ಆ ಲಕ್ಷಣಗಳನ್ನು ಎದುರಿಸಲು ನನಗೆ ಸಾಧ್ಯವಾಯಿತು ಎಂದು ಹೇಳಿಕೊಳ್ಳುತ್ತಿದ್ದೆ ಎಂದಿದ್ದಾರೆ.

    English summary
    Bollywood actress Zoa Morani and her family will be donating ther blood to help fight against coronavirus.
    Wednesday, April 22, 2020, 11:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X