ಶಾರುಖ್ ಪುತ್ರಿಯ ಅದ್ದೂರಿ ಸಿನಿಮಾ ಎಂಟ್ರಿ; ಸುಹಾನಾಗೆ ಸ್ಟಾರ್ ನಿರ್ದೇಶಕಿ ಆ್ಯಕ್ಷನ್ ಕಟ್
ಬಾಲಿವುಡ್ ಸ್ಟಾರ್ ನಟ, ಕಿಂಗ್ ಖಾನ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಆಗಾಗ ಸಖತ್ ಹಾಟಾಗಿ ಕಾಣಿಸಿಕೊಳ್ಳುವ ಮೂಲಕ ನೆಟ್ಟಿಗರು ಹಾರ್ಟ್ ಬೀಟ್ ಹೆಚ್ಚಿಸುತ್ತಿದ್ದ ಸುಹಾನಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಈ ಬಾರಿ ಸುದ್ದಿಯಾಗಿರುವುದು ಸಿನಿಮಾ ವಿಚಾರಕ್ಕೆ ಎನ್ನುವುದು ವಿಶೇಷ. ಹೌದು, ಶಾರುಖ್ ಪುತ್ರಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ದೊಡ್ಡ ಸಿನಿಮಾ ಮೂಲಕ ಸುಹಾನಾ ಖಾನ್ ತೆರೆಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಅಂದಹಾಗೆ ಸುಹಾನಾ ಸಿನಿಮಾ ಎಂಟ್ರಿ ಬಗ್ಗೆ ಆಗಾಗಾ ಮಾತುಗಳು ಕೇಳಿಬರುತ್ತಲೇ ಇತ್ತು. ಆದರೀಗ ಸಿನಿಮಾಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಸಿನಿಮಾಗೆ ತಯಾರಿ ನಡೆಯುತ್ತಿರುವ ಸುಹಾನಾ ಸದ್ಯದಲ್ಲೇ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಸಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಸ್ಟಾರ್ ನಟನ ಪುತ್ರಿಯ ಸಿನಿಮಾ ಅಂದ್ಮೇಲೆ ನಿರೀಕ್ಷೆ ತುಸು ಹೆಚ್ಚಾಗಿಯೇ ಇರುತ್ತೆ. ಅದರಂತೆ ಸುಹಾನಾ ಅದ್ದೂರಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಸುಹಾನಾ ಎಂಟ್ರಿಗೆ ಈಗಾಗಲೇ ತಯಾರಿ ನಡೆಸಿದ್ದು, ಸ್ಟಾರ್ ನಿರ್ದೇಶಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಶಾರುಖ್ ಪುತ್ರಿಯನ್ನು ಸಿನಿಮಾರಂಗಕ್ಕೆ ಕರೆತರುತ್ತಿರುವ ನಿರ್ದೇಶಕಿ ಮತ್ಯಾರು ಅಲ್ಲ ಜೋಯಾ ಅಖ್ತರ್. ಶಾರುಖ್ ಪುತ್ರಿ ಸುಹಾನಾಗೆ ಆಕ್ಷನ್ ಕಟ್ ಹೇಳಲು ಜೋಯಾ ಕೂಡ ಉತ್ಸುಕರಾಗಿದ್ದು, ಈಗಾಗಲೇ ತಯಾರಿ ನಡೆಸಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಗಲ್ಲಿ ಬಾಯ್ ಅಂತ ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದ ಜೋಯಾ ಅಖ್ತರ್ ಬಳಿಕ ಮೇಡ್ ಇನ್ ಹೆವೆನ್ ಸೀರಿಸ್ ಅನ್ನು ನಿರ್ದೇಶನ ಮಾಡಿದ್ದರು. ಬಳಿಕ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದ ಗೋಸ್ಟ್ ಸ್ಟೋರೀಸ್ ಸೀರಿಸ್ ನ ಒಂದು ಭಾಗಕ್ಕೆ ಜೋಯಾ ಆಕ್ಷನ್ ಕಟ್ ಹೇಳಿದ್ದರು. ಗಲ್ಲಿ ಬಾಯ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಆಸ್ಕರ್ ರೇಸ್ ನಲ್ಲೂ ಇತ್ತು ಎನ್ನುವುದು ವಿಶೇಷ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಜೋಯಾ ಅಖ್ತರ್ ನಿರ್ದೇಶನದಲ್ಲಿ ಸುಹಾನಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಅಂದಹಾಗೆ ಜೋಯಾ ಅಂತರಾಷ್ಟ್ರೀಯ ಕಾಮಿಕ್ ಪುಸ್ತಕವನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದು, ಇದನ್ನು ಒಟಿಟಿ ವೇದಿಕೆಯಾದ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಇದೊಂದು ಹದಿಹರೆಯದ ಪ್ರೇಮ ಕಥೆಯಾಗಿದ್ದು, ಈ ಸಿನಿಮಾಗಾಗಿ ಈಗಾಗಲೇ ಒಂದಿಷ್ಟು ಕಲಾವಿದರನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಸುಹಾನಾ ಕೂಡ ಒಬ್ಬರು ಎನ್ನುವ ಮಾತು ಕೇಳಿಬರುತ್ತಿದೆ.
ಸದ್ಯ ಜೋಯಾ ಲಿಸ್ಟ್ ಮಾಡಿರುವ ಕಲಾವಿದರಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಸುಹಾನಾ ಫೈನಲ್ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅಂದಹಾಗೆ ಸುಹಾನಾಗೆ ನಟನೆ ಹೊಸದಲ್ಲ ಈಗಾಗಲೇ ನಾಟಕಗಳಲ್ಲಿ ನಟಿಸಿದ್ದಾರೆ. ಲಂಡನ್ ನಲ್ಲಿ ರೋಮಿಯೋ ಜೂಲಿಯಟ್ ನಾಯಕದಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಜೊತೆಗೆ ಕಿರುಚಿತ್ರದಲ್ಲೂ ಸುಹಾನಾ ನಟಿಸಿದ್ದರು. ಇದೀಗ ಸಿನಿಮಾ ಮೂಲಕ ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಸುಹಾನಾ ಜೊತೆಗೆ ಇನ್ನು ಕೆಲವು ಸ್ಟಾರ್ ಮಕ್ಕಳನ್ನು ಪರಿಚಯಿಸುವ ಪ್ಲಾನ್ ಮಾಡಿದ್ದಾರೆ ನಿರ್ದೇಶಕಿ ಜೋಯಾ ಅಖ್ತರ್.
ಇತ್ತೀಚಿಗಷ್ಟೆ ಸುಹಾನಾ 21ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸುಹಾನಾ ಸದ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಶಾರುಖ್ ಖಾನ್ ಪುತ್ರ ಆರ್ಯನ್ ಕೂಡ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸಿನಿಮಾಗೆ ಎಂಟ್ರಿ ಕೊಡಲು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಆರ್ಯನ್ ನಟನಾಗಿ ಎಂಟ್ರಿ ಕೊಡುವ ಮೊದಲು ನಿರ್ದೇಶಕನಾಗಿ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ ಎನ್ನುವ ಮಾತು ಈ ಹಿಂದೆಯೇ ಕೇಳಿಬಂದಿತ್ತು. ಇದೀಗ ಶಾರುಖ್ ಇಬ್ಬರು ಮಕ್ಕಳ ಸಿನಿಮಾ ಎಂಟ್ರಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.


Click it and Unblock the Notifications











