ಧುರಂಧರ್ ಅಬ್ಬರ ; ಕದಲದ ಧನುಷ್- ಬಾಲಿವುಡ್‌ನಲ್ಲಿ ಮೊದಲ ಶತಕ ಬಾರಿಸಿದ ಸೌತ್ ಸೂಪರ್ ಸ್ಟಾರ್
ಕಂಗಾಲಾಗಿದ್ದ ಬಾಲಿವುಡ್‌ನಲ್ಲಿ ಹೊಸದೊಂದು ಅಲೆ ಎದ್ದಿದೆ. ಆ ಅಲೆಯ ಹೆಸರು ''ಧುರಂಧರ್''. ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿರುವ ಈ ಚಿತ್ರವನ್ನು ಭಾಷೆಯ ಭೇದ ಭಾವ ಇಲ್ಲದೆ ಹಲವರು ನೋಡುತ್ತಿದ್ದಾರೆ. ಎರಡು ವಾರ ಆದರೂ ಈ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಇಂದು ( ಡಿಸೆಂಬರ್ 15 ) ಸೋಮವಾರ ಆದರೂ ಕೇವಲ ಬೆಂಗಳೂರಿನಲ್ಲಿಯೇ ಈ ಚಿತ್ರದ ಟಿಕೆಟ್‌ಗಳು ಬಿಸಿ ಬಿಸಿ ಬೋಂಡಾದಂತೆ ಬಿಕರಿಯಾಗಿವೆ.
ಓರಾಯನ್ ಮಾಲ್.. ಲುಲು ಮಾಲ್ .. ಮೀನಾಕ್ಷಿ ಮಾಲ್ .. ಮಂತ್ರಿ ಮಾಲ್ .. ಹೀಗೆ ಹಲವು ಮಾಲ್‌ಗಳಲ್ಲಿ ಇಂದಿನ ಹಲವಾರು ಪ್ರದರ್ಶನಗಳು ಹೌಸ್‌ಫುಲ್ ಆಗಿವೆ. ಇನ್ನೂ ಧುರಂಧರ್ ಅಬ್ಬರಕ್ಕೆ ಚಿತ್ರದ ಹಿಂದೆ ಮತ್ತು ಮುಂದೆ ಬಿಡುಗಡೆಯಾದ ಹಲವು ಚಿತ್ರಗಳಿಗೆ ಹೊಡೆತ ಬಿದ್ದಿದೆ. ಗೆಲ್ಲುವ ಅರ್ಹತೆ ಇದ್ದರೂ ಕೂಡ ಬೇರೆ ಬೇರೆ ಚಿತ್ರಗಳಿಗೆ ಹಿನ್ನೆಡೆಯಾಗಿದೆ. ಆ ಪೈಕಿ ಧನುಷ್ ಅಭಿನಯದ ''ತೇರೆ ಇಷ್ಕ್ ಮೇ'' ಚಿತ್ರ ಕೂಡ ಒಂದು.

ಆದರೆ.. ಈ ಅಬ್ಬರ ನಡುವೆ ಕೂಡ ''ತೇರೆ ಇಷ್ಕ್ ಮೇ'' 100 ಕೋಟಿಯನ್ನು ಕೊಳ್ಳೆ ಹೊಡೆದಿದೆ ಎನ್ನುವುದೇ ಸದ್ಯ ಧನುಷ್ ಮತ್ತು ಚಿತ್ರತಂಡಕ್ಕೆ ಸಮಾಧಾನದ ವಿಷಯ.
ಹೌದು, ''ತೇರೆ ಇಷ್ಕ್ ಮೇ'' ಬಂದು ಒಂದು ವಾರದ ನಂತರ ''ಧುರಂಧರ್'' ತೆರೆಗೆ ಬಂದಿತ್ತು. ಈ ಒಂದು ವಾರ ಬಾಕ್ಸಾಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದಿದ್ದ ಈ ಚಿತ್ರ ₹ 83.65 ಕೋಟಿಯನ್ನು ದೋಚಿತ್ತು.
ಆದರೆ.. ಡಿಸೆಂಬರ್ 5ರಂದು ''ಧುರಂಧರ್'' ಬಿಡುಗಡೆಯಾದ ನಂತರ ಈ ಚಿತ್ರದ ಗಳಿಕೆ ಕುಸಿಯಲು ಶುರುವಾಯ್ತು. ಆದರೂ ಕೂಡ ''ತೇರೆ ಇಷ್ಕ್ ಮೇ'' ಎರಡನೇ ವಾರದಲ್ಲಿ ಕದಲಿರಲಿಲ್ಲ. ''ಸ್ಯಾಕ್ನಿಲ್'' ಪ್ರಕಾರ ಎರಡನೇ ವಾರ ''ತೇರೆ ಇಷ್ಕ್ ಮೇ'' ₹ 25.15 ಕೋಟಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಎರಡು ವಾರದಲ್ಲಿ ನೂರು ಕೋಟಿಯ ಗಡಿಯನ್ನು ಕೂಡ ಪಾರು ಮಾಡಿತ್ತು. ₹ 150 ಕೋಟಿಯ ಗುರಿಯನ್ನು ಚಿತ್ರ ಆರಾಮಾಗಿ ತಲುಪುತ್ತೆ ಎನ್ನುವ ವಿಶ್ವಾಸವೂ ಹಲವರಲ್ಲಿತ್ತು.
ಆದರೆ.. ಅಷ್ಟರಲ್ಲಾಗಲೇ ''ಧುರಂಧರ್'' ಜ್ವರ ಭಾರತದೆಲ್ಲೆಡೆ ಆವರಿಸಿಕೊಂಡಿಯಾಗಿತ್ತು. ಹೀಗಾಗಿ ''ತೇರೆ ಇಷ್ಕ್ ಮೇ'' ಚಿತ್ರವನ್ನು ''ಧುರಂಧರ್''ಗಾಗಿ ಹಲವಡೆ ಎತ್ತಂಗಡಿ ಮಾಡಲಾಯ್ತು. ಆದರೂ ಕೂಡ ಸೀಮಿತ ಚಿತ್ರಮಂದಿರಗಳಲ್ಲಿಯೇ.. ''ಧುರಂಧರ್'' ಅಬ್ಬರದ ನಡುವೆಯೂ '' ತೇರೆ ಇಷ್ಕ್ ಮೇ'' ನಿನ್ನೆ (ಡಿಸೆಂಬರ್ 14-ಭಾನುವಾರ) ₹ 1.85 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 17 ದಿನದಲ್ಲಿ ''ತೇರೆ ಇಷ್ಕ್ ಮೇ'' ₹ 113.51 ಕೋಟಿಯನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇಂದು ( ಡಿಸೆಂಬರ್ 15 ) ಸೋಮವಾರವಾದ ಹಿನ್ನೆಲೆ ಸಹಜವಾಗಿ ಈ ಚಿತ್ರದ ಗಳಿಕೆ ಕುಸಿದಿದೆ. ಬಾಲಿವುಡ್ ಪಂಡಿತರ ಪ್ರಕಾರ ಈ ವಾರ ಚಿತ್ರಮಂದಿರಗಳಲ್ಲಿ ''ತೇರೆ ಇಷ್ಕ್ ಮೇ'' ತನ್ನ ಪ್ರದರ್ಶನವನ್ನು ಕೂಡ ಮುಗಿಸಲಿದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ₹ 120 ಕೋಟಿಯ ಗಡಿಯನ್ನು ದಾಟುವ ವಿಶ್ವಾಸ ಕೂಡ ಚಿತ್ರಪಂಡಿತರಿಗಿದೆ.
ಅಂದ್ಹಾಗೇ ಒಂದು ದಶಕದ ಹಿಂದೆ ತೆರೆಗೆ ಬಂದಿದ್ದ ಇದೇ ಜೋಡಿಯ ''ರಾಂಝಾನ'' ಬಾಕ್ಸಾಫೀಸ್‌ನಲ್ಲಿ ₹87,26 ಕೋಟಿಯನ್ನು ದೋಚಿತ್ತು. ಆ ಕಾಲದಲ್ಲಿ ಬ್ಲಾಕ್‌ಬಸ್ಟರ್ ಚಿತ್ರ ಇದು. ತಮ್ಮ ಈ ಚಿತ್ರದ ಗಳಿಕೆಯನ್ನು ಧನುಷ್ ಸದ್ಯ ಹಿಂದಿಕ್ಕಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ಮೊದಲ ಸೆಂಚ್ಯುರಿಯನ್ನು ಹೊಡೆದಿದ್ದಾರೆ. ಈ ಮೊಲಕ ಹಿಂದಿ ಚಿತ್ರರಂಗದಲ್ಲಿ ಹೊಸದೊಂದು ದಾಖಲೆಯನ್ನು ಸೌತ್ ಸೂಪರ್ ಸ್ಟಾರ್ ಧನುಷ್ ಬರೆದಿದ್ದಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











