Dhurandhar Box Office Day 5 ; ಬೆಳ್ಳಿತೆರೆಯಲ್ಲಿ ರಣವೀರ್ ಸಿಂಗ್ ಧಗಧಗ,ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಧುರಂಧರ್

ಬಣ್ಣದ ಪ್ರಪಂಚದಲ್ಲಿ ''ಅದೃಷ್ಟ'' ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ಮೂರಕ್ಕಿಳಿದವರು ಏಕಾಏಕಿ ಆರಕ್ಕೇರುತ್ತಾರೆ. ಇದಕ್ಕೆ ದೀಪಿಕಾ ಪಡುಕೋಣೆಯ ಪತಿ ರಣವೀರ್ ಸಿಂಗ್ ಸದ್ಯದ ಉದಾಹರಣೆ. ಹೌದು, ರಣವೀರ್ ಸಿಂಗ್.. ಬಾಲಿವುಡ್‌ನ ಪ್ರತಿಭಾವಂತ ನಟ. ಅದರಲ್ಲಿ ದೂಸ್ರಾ ಮಾತಿಲ್ಲ. ''ಪದ್ಮಾವತ್''.. ''ಗಲ್ಲಿ ಬಾಯ್''.. ''83''..

ಹೀಗೆ ಹಲವು ಚಿತ್ರಗಳ ಮೂಲಕ ತಮ್ಮ ಅಭಿನಯದಿಂದ ಅಭಿಮಾನಿಗಳ ಹೃದಯ ಗೆದ್ದವರು ಇವರು. ಝೀರೋದಿಂದ ಹೀರೋ ಆದ ರಣ್ವೀರ್, ಪಾತ್ರ ಎಂತಹದ್ದೇ ಇರಲಿ, ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಾರೆ.

150 CR TSUNAMI Ranveer Singh s Dhurandhar STORMS Box Office with Massive Day 5 Haul

ಆದರೂ ಅದ್ಯಾಕೋ ರಣ್ವೀರ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಮಂಕಾಗಿದ್ದರು. ಹೊಸಬರ ಹಾವಳಿ.. ಹಳಬರ ಗುಂಪುಗಾರಿಕೆ.. ರಣವೀರ್ ಸಿಂಗ್ ಹೈರಾಣಾಗಿದ್ದರು. ಆದರೆ ಈಗ ವರ್ಷಗಳ ನಂತರ ರಣವೀರ್ ಸಿಂಗ್ ಮತ್ತೆ ಮೈಕೊಡವಿ ಎದ್ದು ನಿಂತಿದ್ದಾರೆ. ಇದಕ್ಕೆ ಕೈಗನ್ನಡಿಯೇ ''ಧುರಂಧರ್'' ಚಿತ್ರದ ಅತ್ಯದ್ಭುತ ಗೆಲುವು.

ಹೌದು, ಕಳೆದ ಶುಕ್ರವಾರ ( ಡಿಸೆಂಬರ್ 5 ) ಬಿಡುಗಡೆಯಾದ ''ಧುರಂಧರ್'' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ವಾರದ ದಿನಗಳಲ್ಲಿ ಕೂಡ ಈ ಚಿತ್ರದ ಕ್ರೇಜ್ ಕಡಿಮೆಯಾಗುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸೋಮವಾರಕ್ಕಿಂತ ಮಂಗಳವಾರದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿದೆ.

ಸೋಮವಾರ ಅಂದರೆ ನಾಲ್ಕನೇ ದಿನ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹ 23.25 ಕೋಟಿಯನ್ನು ಚಿತ್ರ ಗಳಿಸಿತ್ತು. ಆದರೆ ನಿನ್ನೆ (ಮಂಗಳವಾರ ) ಚಿತ್ರ ₹26,50 ಕೋಟಿಯನ್ನು ಗಳಿಸಿದೆ. ಈ ಮೂಲಕ ಕೇವಲ ಐದು ದಿನದಲ್ಲಿ ₹ 152.75ಕೋಟಿಯನ್ನು ಕೊಳ್ಳೆ ಹೊಡೆದಿದೆ ''ಧುರಂಧರ್''.

''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ ಐದು ದಿನಗಳ ಗಳಿಕೆ ಕೆಳಗಿನಂತೆ ಇದೆ.

ಮೊದಲ ದಿನ [ಶುಕ್ರವಾರ] ₹ 28 ಕೋಟಿ
ಎರಡನೇ ದಿನ [ಶನಿವಾರ] ₹ 32 ಕೋಟಿ
ಮೂರನೇ ದಿನ [ಭಾನುವಾರ]₹ 43 ಕೋಟಿ
ನಾಲ್ಕನೇ ದಿನ [ಸೋಮವಾರ]₹ 23.25 ಕೋಟಿ
ಐದನೇ ದಿನ [ಮಂಗಳವಾರ]₹ 26.50 ಕೋಟಿ *

ಒಟ್ಟು ಗಳಿಕೆ ₹ 152.75 ಕೋಟಿ

150-cr-tsunami-ranveer-singh-s-dhurandhar-storms-box-office-with-massive-day-5-haul

ಹೀಗೆ ಕೇವಲ ಐದು ದಿನದಲ್ಲಿ ₹152.75 ಕೋಟಿಯನ್ನು ದೋಚಿರುವ ''ಧುರಂಧರ್'' ಈಗಾಗಲೇ ಭಾರತದ ಬಾಕ್ಸಾಫೀಸ್‌ನಲ್ಲಿ ಸಲ್ಮಾನ್ ಖಾನ್ ಅಭಿನಯದ ''ಸಿಕಂದರ್'' (₹109.83 ಕೋಟಿ ) ಅಕ್ಷಯ್ ಕುಮಾರ್ ಅಭಿನಯದ ''ಸ್ಕೈ ಫೋರ್ಸ್‌'' (₹112.75 ಕೋಟಿ)ಆಯುಷ್ಮಾನ್ ಖುರಾನ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ''ಥಮ್ಮ'' ( ₹134.78 ಕೋಟಿ) ಸೇರಿ ಈ ವರ್ಷ ಬಂದ ಹಲವು ಸಿನಿಮಾಗಳನ್ನು ಹಿಂದಿಕ್ಕಿದೆ.

ಇಂದು (ಡಿಸೆಂಬರ್ 10) ಕೂಡ ''ಧುರಂಧರ್'' ಎರಡಂಕಿಯ ಗಳಿಕೆಯನ್ನು ಕಾಣುವ ವಿಶ್ವಾಸ ಬಾಲಿವುಡ್‌ ಪಂಡಿತರಿಗಿದೆ. ಮೂರುವರೆ ಗಂಟೆಯ ಸಿನಿಮಾ ಆದರೂ ಈ ಚಿತ್ರಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯ ಮತ್ತು ಚಿತ್ರದ ಈ ಗಳಿಕೆ ಹಲವರ ಅಚ್ಚರಿಗೆ ಕೂಡ ಕಾರಣವಾಗಿದೆ. ''ಧುರಂಧರ್'' ಮುಂಬರುವ ದಿನಗಳಲ್ಲಿ ಇನ್ನೆಷ್ಟು ಹಣ ಗಳಿಸುವಲ್ಲಿ ಯಶಸ್ವಿಯಾಗುತ್ತೆ, ಯಾವೆಲ್ಲ ದಾಖಲೆಗಳನ್ನು ಮುರಿಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ''ಅಖಂಡ''.."ಡೆವಿಲ್'' ಸೇರಿ ಈ ವಾರ ಬಿಡುಗಡೆಯಾಗುತ್ತಿರುವ ಹಲವು ಚಿತ್ರಗಳಿಂದ ''ಧುರಂಧರ್'' ಗಳಿಕೆ ಮೇಲೆ ಕೂಡ ಪರಿಣಾಮ ಬೀರುತ್ತಾ ಎನ್ನುವುದನ್ನು ಕೂಡ ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The spy-thriller Dhurandhar is on fire! Ranveer Singh's starrer explodes past ₹150 Cr. with stunning Tuesday growth. Get the full Day 5 box office report here.
Read more about: ranveer singh bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X