ಕಾಂತಾರ ಅಬ್ಬರಕ್ಕೆ ಬಾಕ್ಸಾಫೀಸ್ ಗಡಗಡ ; ಜೈಲರ್, ದಂಗಲ್ ದಾಖಲೆ ಉಡೀಸ್- ಭಾರತದ 16ನೇ ಮೆಗಾ ಬ್ಲಾಕ್‌ಬಸ್ಟರ್

ಚಿತ್ರರಂಗದಲ್ಲಿ ಈಗ ದಕ್ಷಿಣ ಭಾರತೀಯ ಚಿತ್ರಗಳ ಪಾರುಪಥ್ಯ ಇದೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರಗಳು ಎಂದರೆ ಮೂಗು ಮುರಿಯುತ್ತಿದ್ದ ಹಿಂದಿ ಉದ್ಯಮದವರೇ ಈಗ ಸೌತ್ ಸಿನಿಮಾಗಳ ಅಬ್ಬರ ಕಂಡು ಬೆರಗಾಗಿದ್ದಾರೆ. ಸತತ ಸೋಲುಗಳನ್ನು ಕಂಡು ಹೈರಾಣಾಗಿದ್ದಾರೆ. ದಕ್ಷಿಣಕ್ಕೆ ಸೆಡ್ಡು ಹೊಡೆಯುವ ಪ್ರಯತ್ನವನ್ನೇನೋ ಬಾಲಿವುಡ್‌ನವರು ಮಾಡುತ್ತಲೇ ಇದ್ದಾರೆ. ಆದರೆ.. ಯಶಸ್ಸು ಮಾತ್ರ ಇವರಿಗೆ ಸಿಗುತ್ತಿಲ್ಲ.

''ಛಾವಾ'' .. ''ಸೈಯಾರ''.. ಹೀಗೆ ಅಲ್ಲೊಂದು.. ಇಲ್ಲೊಂದು.. ಚಿತ್ರ ಹೊರತು ಪಡಿಸಿದರೆ ಬೇರೆ ಯಾವ ಹಿಂದಿ ಚಿತ್ರ ಕೂಡ ಈ ವರ್ಷ ದಾಖಲೆಯ ಗಳಿಕೆಯನ್ನು ಮಾಡಿಲ್ಲ. ಹೀಗಿರುವಾಗ ಕನ್ನಡದ ನೆಲದಿಂದ ಕೇಳಿಸಿದ ದೈವದ ಕೂಗಿಗೆ ಬಾಲಿವುಡ್ ಬೆಚ್ಚಿ ಬಿದ್ದಿದೆ. ಬೆಳ್ಳಿತೆರೆಯಲ್ಲಿ ಆದ ಬೆಳಕಿನ ದರ್ಶನ ದಂಗಲ್ ಚಿತ್ರದ ದಾಖಲೆಯನ್ನು ಉಡೀಸ್ ಮಾಡಿದೆ.

16TH BIGGEST EVER Kantara Chapter 1 KNOCKS OUT Dangal amp amp Jailer in Indian BO History

ಇಷ್ಟೇ ಅಲ್ಲ ''ಕಾಂತಾರ''ದ ಸದ್ದಿಗೆ ದಕ್ಷಿಣ ಭಾರತದ ಬೇರೆ ಭಾಷೆಯ ಚಿತ್ರರಂಗದಲ್ಲಿ ಕೂಡ ಕಂಪನವಾಗಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ''ಜೈಲರ್'' ಚಿತ್ರ ಸೇರಿ ದೊಡ್ಡ ದೊಡ್ಡ ಸ್ಟಾರ್‌ಗಳ ಹಲವು ಚಿತ್ರಗಳ ದಾಖಲೆ ಚೆಲ್ಲಾಪಿಲ್ಲಿಯಾಗಿದ್ದು ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ 16ನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಕಾಂತಾರ ಚಾಪ್ಟರ್ 1'' ಪಾತ್ರವಾಗಿದೆ.

ಹೌದು, 2016ರಲ್ಲಿ ಬಂದ ''ದಂಗಲ್'' ವರ್ಲ್ಡ್ ವೈಡ್ ₹2,070.3 ಕೋಟಿ ಹಣ ದೋಚಿತ್ತು. ಆದರೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹2,070.3 ಕೋಟಿಯಲ್ಲಿ ಭಾರತದ ಪಾಲು ಕೇವಲ ₹387.38 ಕೋಟಿ ಇತ್ತು.

ಇನ್ನು 2023ರಲ್ಲಿ ತೆರೆಗೆ ಬಂದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ''ಜೈಲರ್'' ಭಾರತದಲ್ಲಿ ₹348.55 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಈ ಎರಡು ಚಿತ್ರ ಹೊರತು ಪಡಿಸಿದರೆ 2018ರಲ್ಲಿ ತೆರೆಗೆ ಬಂದಿದ್ದ ರಣಬೀರ್ ಕಪೂರ್ ಅಭಿನಯದ ''ಸಂಜು'' ₹342.57 ಕೋಟಿ, ಹಾಲಿವುಡ್‌ನ ''ಅವೆಂಜರ್ಸ್: ಎಂಡ್ ಗೇಮ್'' ₹373.05 ಕೋಟಿಯನ್ನು ಭಾರತದಲ್ಲಿ ಕೊಳ್ಳೆ ಹೊಡೆದಿದ್ದವು.

ಇಳಯ ದಳಪತಿ ವಿಜಯ್ ಅಭಿನಯದ ''ಲೀಯೋ'' ಭಾರತದ ಬಾಕ್ಸಾಫೀಸ್‌ನಲ್ಲಿ ₹341.04 ಕೋಟಿಯನ್ನು ಗಳಿಸುವ ಮೂಲಕ 20ನೇ ಸ್ಥಾನದಲ್ಲಿತ್ತು. ಈ ವರ್ಷ ತೆರೆಗೆ ಬಂದ ಬಾಲಿವುಡ್‌ನ ಹೊಸ ಹುಡುಗನ ಚಿತ್ರ ಸೈಯಾರ ₹ 329.2 ಕೋಟಿಯನ್ನು ಗಳಿಸಿತ್ತು. ಇನ್ನು ರಜನಿಕಾಂತ್ ಅವರದ್ದೇ ಮತ್ತೊಂದು ಚಿತ್ರ ''ಕೂಲಿ'' ₹ 336.2 ಕೋಟಿ ಮತ್ತು 2014ರಲ್ಲಿ ಬಂದಿದ್ದ ಆಮಿರ್ ಖಾನ್ ಅಭಿನಯದ ''ಪಿಕೆ'' ₹ 340 ಕೋಟಿ ಗಳಿಸಿದ್ದವು.

16TH BIGGEST EVER Kantara Chapter 1 KNOCKS OUT Dangal amp amp Jailer in Indian BO History

ಈ ಎಲ್ಲಾ ಚಿತ್ರಗಳ ಗಳಿಕೆಯನ್ನು ಕೇವಲ ಹತ್ತು ದಿನದಲ್ಲಿ ₹ 398.65 ಕೋಟಿಯನ್ನು ಗಳಿಸುವ ಮೂಲಕ ''ಕಾಂತಾರ-ಚಾಪ್ಟರ್ 1'' ಹಿಂದಿಕ್ಕಿದೆ. ಈ ಮೂಲಕ ಹಲವು ದಾಖಲೆಗಳನ್ನು ಮುರಿದಿದೆ. ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಹದಿನಾರನೇ ಸ್ಥಾನಕ್ಕೇರಿದೆ.

ಸದ್ಯ ''ಕಾಂತಾರ''ದ ಎದುರು ''ಸಲಾರ್'' ಸಾಮ್ರಾಜ್ಯ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ''ಸಲಾರ್-1'' ಭಾರತದಲ್ಲಿ₹ 475.1 ಕೋಟಿ ಗಳಿಸಿತ್ತು. ಈ ಚಿತ್ರ ಹೊರತು ಪಡಿಸಿದರೆ ವಿಕ್ಕಿ ಕೌಶಲ್ ಅಭಿನಯದ ''ಛಾವಾ'' (₹ 601.54ಕೋಟಿ).. ರಾಜಮೌಳಿ ನಿರ್ದೇಶನದ ''ಬಾಹುಬಲಿ 2''(₹ 1030.42 ಕೋಟಿ).. ಶಂಕರ್ ನಿರ್ದೇಶನದ ರಜನಿಕಾಂತ್ ಅಭಿನಯದ ''2.0'' (₹ 407.05ಕೋಟಿ) .. ಸನ್ನಿ ಡಿಯೋಲ್ ಅಭಿನಯದ ''ಗದರ್ 2''(₹ 525.7 ಕೋಟಿ)..ಶ್ರದ್ದಾ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ''ಸ್ತ್ರೀ 2'' (₹ 597.99 ಕೋಟಿ) ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ''ಕೆಜಿಎಫ್‌ 2'' (₹ 1000.85ಕೋಟಿ) ಹೀಗೆ ಇನ್ನು ಕೆಲ ಚಿತ್ರಗಳು ''ಕಾಂತಾರ'' ಕಣ್ಣೆದುರು ಇವೆ. ಈ ಎಲ್ಲಾ ಚಿತ್ರಗಳ ದಾಖಲೆಯನ್ನು ''ಕಾಂತಾರ-ಚಾಪ್ಟರ್ 1'' ಮುರಿಯುತ್ತಾ ? ಭಾರತದ ಬಾಕ್ಸಾಫೀಸ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆಯುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

More from Filmibeat

English summary
The Rishab Shetty-led Kantara: Chapter 1 shatters all-time records, surpassing the domestic net collections of Dangal, Jailer, and countless others to secure the 16th spot
Read more about: kantara chapter 1 rishab shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X