ಈ ವರ್ಷ ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ 5 ಭಾಷೆಗಳ ಟಾಪ್ ಸಿನಿಮಾಗಳ ಪಟ್ಟಿ
ಕನ್ನಡ ಸಿನಿಮಾಗಳು ಚಿತ್ರಮಂದಿಗಳಲ್ಲಿ ಚೆನ್ನಾಗಿ ಓಡಲ್ಲ. ಕನ್ನಡ ಪ್ರೇಕ್ಷಕರು ಕನ್ನಡ ಸಿನಿಮಾ ನೋಡಲ್ಲ ಎನ್ನುವ ಆರೋಪ ಇದೆ. ಈ ವರ್ಷದ 6 ತಿಂಗಳಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಎರಡು ಸಿನಿಮಾಗಳು ಮಾತ್ರ 10 ಕೋಟಿ ರೂ. ಅಧಿಕ ಗ್ರಾಸ್ ಕಲೆಕ್ಷನ್ ಮಾಡಿವೆ. ಈವರೆಗೆ 100 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ. ಆದರೆ ಗೆದ್ದಿದ್ದು ಒಂದೆರಡು ಮಾತು.
ಕನ್ನಡ ಸಿನಿಮಾಗಳ ಪ್ರದರ್ಶನ ಈ ರೀತಿ ಇದೆ. ಆದರೆ ಕರ್ನಾಟಕದಲ್ಲಿ ಪರಭಾಷೆ ಸಿನಿಮಾಗಳು ಒಳ್ಳೆ ಕಲೆಕ್ಷನ್ ಮಾಡ್ತಿವೆ. ಕನ್ನಡಕ್ಕಿಂತ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳು ಈ ವರ್ಷ ರಾಜ್ಯದಲ್ಲಿ ಹೆಚ್ಚು ಗಳಿಕೆ ಕಂಡಿವೆ. ತಮಿಳು ಸಿನಿಮಾಗಳು ತಮಿಳುನಾಡು ಬಿಟ್ಟರೆ ಕರ್ನಾಟಕದಲ್ಲೇ ಹೆಚ್ಚು ಗಳಿಕೆ ಕಂಡಿವೆ. ಇದೇ ರೀತಿ ಉತ್ತರ ಭಾರತ ಬಿಟ್ರೆ ಹಿಂದಿ ಚಿತ್ರಗಳು ಕರ್ನಾಟದಲ್ಲೇ ಹೆಚ್ಚು ಕಲೆಕ್ಷನ್ ಮಾಡಿವೆ.

ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಆಂಧ್ರ, ತೆಲಂಗಾಣ ಬಿಟ್ಟು ಕರ್ನಾಟಕದಲ್ಲೇ ಹೆಚ್ಚು ಗಳಿಕೆ ಕಂಡಿದೆ. ತಮಿಳುನಾಡು, ಕೇರಳ, ಉತ್ತರ ಭಾರತದಲ್ಲಿ ಈ ಸಿನಿಮಾ ಫ್ಲಾಪ್ ಎನಿಸಿಕೊಂಡಿದೆ. ಆಯಾ ಇಂಡಸ್ಟ್ರಿಗಳಿಂದ ಈ ವರ್ಷ ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.
ಕನ್ನಡ ಸಿನಿಮಾ 'ಕೆಡಿ'
ಹೌದು.. ಕರ್ನಾಟಕದಲ್ಲಿ ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಇದು. ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾ ರಾಜ್ಯದಲ್ಲಿ 25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಒಳ್ಳೆ ಓಪನಿಂಗ್ ಪಡೆದರೂ ಬಳಿಕ ಹೆಚ್ಚು ಗಳಿಕೆ ಕಾಣಲಿಲ್ಲ. 'ಕೆಡಿ' ಬಿಟ್ರೆ 'ಲವ್ ಮಾಕ್ಟೇಲ್'-3 ಸಿನಿಮಾ 2ನೇ ಸ್ಥಾನದಲ್ಲಿದೆ.

ತೆಲುಗು ಸಿನಿಮಾ 'ಪೆದ್ದಿ'
ಒಂದೇ ವಾರಕ್ಕೆ ಕರ್ನಾಟಕದಲ್ಲಿ 'ಪೆದ್ದಿ' ಸಿನಿಮಾ 24 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. 11 ಕೋಟಿ ರೂ. ವಿತರಕರ ಶೇರ್ ಸಿಕ್ಕಿದೆ. 2ನೇ ವಾರ ಕೂಡ ರಾಜ್ಯದಲ್ಲಿ 'ಪೆದ್ದಿ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವೀಕೆಂಡ್ ಸಿನಿಮಾ ಕಲೆಕ್ಷನ್ ಜೋರಾಗಿದೆ.
ತಮಿಳು ಸಿನಿಮಾ 'ಕರುಪ್ಪು'
ಸೂರ್ಯ ನಟನೆಯ ಫ್ಯಾಂಟಸಿ ಎಂಟರ್‌ಟೈನರ್ 'ಕರುಪ್ಪು' ಸಿನಿಮಾ 300 ಕೋಟಿ ರೂ. ಕಲೆಕ್ಷನ್ ಮಾಡಿದ ದಾಖಲೆ ಬರೆದಿದೆ. ಇದರಲ್ಲಿ ಕರ್ನಾಟಕ ಪಾಲು ದೊಡ್ಡದಿದೆ. ಆರ್‌ಜೆ ಬಾಲಾಜಿ ನಿರ್ದೇಶನದ ಸಿನಿಮಾ ರಾಜ್ಯದಲ್ಲಿ 23 ಕೋಟಿ ರೂ. ಕೊಳ್ಳೆ ಹೊಡೆದಿರುವುದಾಗಿ ಹೇಳಲಾಗ್ತಿದೆ. ಸದ್ಯ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಓಟಿಟಿಗೆ ಬಂದಿದೆ.
ಮಲಯಾಳಂ ಸಿನಿಮಾ ದೃಶ್ಯಂ-3
ಮೋಹನ್ ಲಾಲ್ ನಟನೆಯ 'ದೃಶ್ಯಂ' ಸರಣಿ ಸಿನಿಮಾಗಳು ಹಿಟ್ ಆಗಿರುವುದು ಗೊತ್ತೇಯಿದೆ. ಸರಣಿಯ 3ನೇ ಸಿನಿಮಾ ಈಗ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಿದೆ. ಕನ್ನಡಕ್ಕೂ ಡಬ್ ಆಗಿ ಬಿಡುಗಡೆಯಾಗಿದೆ. ಹಿಂದಿನ ಎರಡು ಸಿನಿಮಾಗಳು ಕನ್ನಡಕ್ಕೆ ರೀಮೆಕ್ ಆಗಿತ್ತು. ಆದರೆ 3ನೇ ಭಾಗ ಡಬ್ ಆಗಿ ಬಂದಿದೆ. ಕರ್ನಾಟಕದಲ್ಲಿ ಸಿನಿಮಾ 14 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ.
ಹಿಂದಿ ಸಿನಿಮಾ 'ಧುರಂಧರ್'-2
ಬಾಲಿವುಡ್ 'ಧುರಂಧರ್' ಸರಣಿ ಸಿನಿಮಾ 3000 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದು ಗೊತ್ತೇಯಿದೆ. ಎರಡೂ ಚಿತ್ರಗಳಿಗೆ ಕರ್ನಾಟಕದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 2ನೇ ಭಾಗ ಕನ್ನಡಕ್ಕೆ ಡಬ್ ಆಗಿ ಕೂಡ ಬಿಡುಗಡೆ ಆಗಿತ್ತು. ಈ ಸ್ಪೈ ಥ್ರಿಲ್ಲರ್ ಸಿನಿಮಾ ರಾಜ್ಯದಲ್ಲಿ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು.


Click it and Unblock the Notifications