ತೆಲುಗಿನಲ್ಲಿ ಮಕಾಡೆ ಮಲಗಿದ ವಾರ್ 2, ₹22 ಕೋಟಿ ನಷ್ಟ ಭರಿಸಲು ಮುಂದಾದ ಯಶ್ ರಾಜ್ ಸಂಸ್ಥೆ

ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಹಲವಾರು ಜನ ತಮ್ಮ ಬದುಕು ಬದಲಾಗಬಹುದೆಂಬ ಆಶಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ತಾರೆ. ನಿರ್ಮಾಪಕರು ಕೂಡ ಹಿಂದೆ ಮುಂದೆ ಯೋಚನೆ ಮಾಡದೇ ಲಾಭದಾಸೆಗೆ ಯತೇಚ್ಚವಾಗಿ ದುಡ್ಡು ಸುರಿಯುತ್ತಾರೆ. ಆದರೆ.. ಇದು ಬಣ್ಣದ ಲೋಕ. ಇಲ್ಲಿ ಯಾವತ್ತು ಯಾರ ಹಣೆಬರಹ ಖುಲಾಯಿಸುತ್ತೆ. ಯಾರ ಬದುಕು ಹಳಿ ತಪ್ಪುತ್ತೆ ಎಂದು ಹೇಳುವುದು ಕಷ್ಟ.

ಕೆಲ ಒಮ್ಮೆ ಹಾಕಿದ ಬಂಡವಾಳ ಬಂದರೆ ಸಾಕು ಎಂಬ ಮನೋಭಾವದಲ್ಲಿ ನಿರ್ಮಾಣವಾದ ಚಿತ್ರಗಳು ಚರಿತ್ರೆ ಬರೆಯುತ್ತವೆ. ಇನ್ನೂ ಕೆಲ ಒಮ್ಮೆ ಲಾಭದ ಆಸೆಯನ್ನೊತ್ತು ಮಾಡಿದ ಚಿತ್ರಗಳು ನೆಲ ಕಚ್ಚುತ್ತವೆ. ನಿರ್ಮಾಪಕರ ಜೊತೆ ಆ ಚಿತ್ರದ ಮುತ್ತ ಸೃಷ್ಟಿಯಾದ ಹೈಪ್‌ ನೆಚ್ಚಿಕೊಂಡು ಚಿತ್ರವನ್ನು ವಿತರಣೆ ಮಾಡಿದ ವಿತರಕರ ಕೈಯನ್ನು ಕೂಡ ಕಚ್ಚುತ್ತವೆ. ಉದಾಹರಣೆಗೆ ''ವಾರ್ 2''.

22 Cr Loss Yash Raj Films Steps in to Save War 2 Distributor Naga Vamsi

ಹೌದು ''ವಾರ್ 2'' ..ಹೃತಿಕ್ ರೋಷನ್ ಮತ್ತು ತಾರಕ್ ಅಭಿನಯದ ಚಿತ್ರ. ಜ್ಯೂ.ಎನ್.ಟಿ.ಆರ್ ಅಭಿನಯದ ಚೊಚ್ಚಲ ಹಿಂದಿ ಚಿತ್ರ ಎನ್ನುವ ಕಾರಣಕ್ಕೆ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆಗಳಿದ್ದವು.

ಇನ್ನು ಚಿತ್ರದ ಬಿಡುಗಡೆಗೆ ಮುನ್ನ ಈ ಚಿತ್ರದ ಕುರಿತು ಹಲವಾರು ಜನ ಹಲವು ಮಾತುಗಳನ್ನಾಡಿದ್ದರು. ಚಿತ್ರ ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆಯುತ್ತೆ ಎಂದೆಲ್ಲಾ ಭವಿಷ್ಯ ಹೇಳಿದ್ದರು.

ಅದರಲ್ಲಿಯೂ ಚಿತ್ರವನ್ನು ಅಖಂಡ ಆಂಧ್ರ ಪ್ರೇಕ್ಷಕರಿಗೆ ತಲುಪಿಸುವ ತೋರಿಸುವ ಹೊಣೆ ಹೊತ್ತ ನಾಗವಂಶಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಫುಲ್ ಬಿಲ್ಡಪ್ ಕೊಟ್ಟಿದ್ದರು. ಜ್ಯೂ.ಎನ್.ಟಿ.ಆರ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಹೋಗ್ತಿದ್ದಾರೆ ಹೃತಿಕ್ ರೋಷನ್ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬರುತ್ತಿದ್ದಾರೆ ಎಂದೆಲ್ಲಾ ಮಾತನಾಡಿದ್ದರು. ಹಿಂದಿ ಅವತರಣಿಕೆಗಿಂತ ತೆಲುಗು ವರ್ಷನ್‌ನಲ್ಲಿ ಗಳಿಕೆ ಹೆಚ್ಚಾಗಬೇಕು ಅದಕ್ಕೆ ನೀವೆಲ್ಲರು ನಿಮ್ಮ ಕೊಡುಗೆಯನ್ನು ಮತ್ತು ಸಹಕಾರವನ್ನು ನೀಡಬೇಕು ಎಂದು ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಕರೆಯನ್ನು ನೀಡಿದ್ದರು.

ಹೀಗೆ ಕುಬೇರ ವರದ ನಿರೀಕ್ಷೆಯಲ್ಲಿದ್ದ ನಾಗವಂಶಿಯೇ ಸದ್ಯ ನಾಪತ್ತೆಯಾಗಿದ್ದಾರೆ. ಹೀಗೊಂದು ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದು ನಾಗವಂಶಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

22 Cr Loss Yash Raj Films Steps in to Save War 2 Distributor Naga Vamsi

ಹೌದು, ಅಸಲಿಗೆ ಅತಿಯಾದ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ''ವಾರ್ 2'' ತೆಲುಗು ವಿತರಣೆಯ ಹಕ್ಕುಗಳನ್ನು ತೆಲುಗು ಮಾಧ್ಯಮಗಳ ವರದಿಯ ಪ್ರಕಾರ ನಾಗವಂಶಿ 80 ಕೋಟಿ ನೀಡಿ ಖರೀದಿ ಮಾಡಿದ್ದರು. ಆದರೆ ಈ 80 ಕೋಟಿಯಲ್ಲಿ ಮರಳಿ ಬಂದಿದ್ದು ಅರ್ಧ ಹಣ ಮಾತ್ರ. ಮಿಕ್ಕ ಹಣವೆಲ್ಲಾ ಗೋತಾ ಆಗಿದೆ. ''ವಾರ್ 2'' ತೆಲುಗಿನಲ್ಲಿ ಫ್ಲಾಪ್ ಆಗಿದೆ ಎಂದು ಷರಾ ಕೂಡ ಬರೆಯಲಾಗಿದೆ.

ಹೀಗಾಗಿಯೇ ''ಯಶ್ ರಾಜ್ ಸಂಸ್ಥೆ'' ಸದ್ಯ ನಾಗವಂಶಿಯ ಸಹಾಯಕ್ಕೆ ದೌಡಾಯಿಸಿದ್ದು 22 ಕೋಟಿ ಹಣವನ್ನು ನಾಗವಂಶಿಗೆ ಮರಳಿ ನೀಡಲು ಮುಂದಾಗಿದೆ ಎಂದು ''ಗ್ರೇಟ್ ಆಂಧ್ರ'' ವೆಬ್ ಸೈಟ್ ವರದಿಯನ್ನು ಮಾಡಿದೆ.

ಸ್ಯಾಕ್ನಿಲ್ ಪ್ರಕಾರ ವಾರ್ 2 ತೆಲುಗು ಚಿತ್ರದ 6 ದಿನಗಳ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ (ಗುರುವಾರ) ₹22.75 ಕೋಟಿ
ಎರಡನೇ ದಿನ (ಶುಕ್ರವಾರ) ₹12.5 ಕೋಟಿ
ಮೂರನೇ ದಿನ (ಶನಿವಾರ) ₹6.95ಕೋಟಿ
ನಾಲ್ಕನೇ ದಿನ (ಭಾನುವಾರ)₹5.35 ಕೋಟಿ
ಐದನೇ ದಿನ (ಸೋಮವಾರ)₹1.6 ಕೋಟಿ
ಆರನೇ ದಿನ (ಮಂಗಳವಾರ)₹1.15ಕೋಟಿ

ಒಟ್ಟು ಗಳಿಕೆ ₹50.3 ಕೋಟಿ

ಹೀಗೆ ತೆಲುಗಿನಲ್ಲಿ ಮಕಾಡೆ ಮಲಗಿರುವ ''ವಾರ್ 2'' ಚಿತ್ರ ಹಿಂದಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ. ಹಿಂದಿಯಲ್ಲಿ ಕೂಡ ದಿನದಿಂದ ದಿನಕ್ಕೆ ಗಳಿಕೆ ಕುಸಿಯುತ್ತಿದೆ. ಸದ್ಯ ಈ ಎರಡು ಭಾಷೆಗಳ ಜೊತೆ ತಮಿಳಿನಲ್ಲಿನ ಗಳಿಕೆಯನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡರೆ ''ವಾರ್ 2'' ಈ 7 ದಿನದಲ್ಲಿ ₹ 196.18 ಕೋಟಿಯನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
A box office disaster? The highly anticipated 'War 2' failed to impress in the Telugu states, leaving its distributor with a massive financial blow. Learn how Yash Raj Films is reportedly stepping in to save him with a ₹22 Cr refund,
Read more about: bollywood jr ntr hrithik roshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X