45 Box Office Day 6: ಬಾಕ್ಸಾಫೀಸ್‌ನಲ್ಲಿ ತ್ರಿಮೂರ್ತಿಗಳ ಅಬ್ಬರ- 6ನೇ ದಿನ '45' ಗಳಿಸಿದ್ದೆಷ್ಟು ?
ಮಲ್ಟಿಸ್ಟಾರ್ ಚಿತ್ರಕ್ಕೆ ಬೇಡಿಕೆ ಮತ್ತು ಕ್ರೇಜ್ ಎರಡು ತುಸು ಹೆಚ್ಚೇ ಇದೆ. ತಮ್ಮ ಇಷ್ಟದ ತಾರೆಯರನ್ನು ಒಂದೇ ಪರದೆ ಮೇಲೆ ಕಣ್ತುಂಬಿಕೊಂಡು ಹಲವರು ಪುಳಕಿತರಾಗುತ್ತಾರೆ. ಆದರೆ, ಕನ್ನಡದಲ್ಲಿ ಈ ಟ್ರೆಂಡ್ ಬೇರೆ ಭಾಷೆಗೆ ಹೋಲಿಸಿದರೆ ಕಡಿಮೆ ಇದೆ.ಅಲ್ಲೊಮ್ಮೆ- ಇಲ್ಲೊಮ್ಮೆ ನಮ್ಮ ಸ್ಟಾರ್‌ಗಳು ಕೂಡ ಜೊತೆಯಲ್ಲಿ ಕೆಲಸ ಮಾಡುತ್ತಾರೆ. ತೆರೆ ಹಂಚಿಕೊಳ್ಳುತ್ತಾರೆ. ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಬಡಿಸುತ್ತಾರೆ.
ಅಪರೂಪಕ್ಕೆ ನಡೆಯುವ ಈ ಪ್ರಯತ್ನವನ್ನು ಶಿವಣ್ಣ ಎಲ್ಲರಿಗಿಂತ ಸ್ವಲ್ಪ ಜಾಸ್ತಿಯೇ ಮಾಡಿದ್ದಾರೆ. ರಮೇಶ್ ಅರವಿಂದ್ ಅವರಿಂದ ಹಿಡಿದು ಸುದೀಪ್‌ವರೆಗೆ ಒಂದೇ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಆ ಪೈಕಿ ''45'' ಚಿತ್ರ ಕೂಡ ಒಂದು. ಸದ್ಯ ''ಕ್ರಿಸ್ಮಸ್'' ಹಬ್ಬದ ಪ್ರಯುಕ್ತ ತೆರೆಗೆ ಬಂದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ.

ಹೌದು, ಅರ್ಜುನ್ ಜನ್ಯ ಮಾಡಿರುವ ಈ ಜೀವನ ಪಾಠ ಹಲವರಿಗೆ ಇಷ್ಟವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಕ್ಸಾಫೀಸ್ ಮೇಲೆ ಹದ್ದಿನ ಕಣ್ಣಿಡುವ ''ಸ್ಯಾಕ್ನಿಲ್'' ಈ ಚಿತ್ರದ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದು ಆ ಪ್ರಕಾರ ನಿನ್ನೆ (ಡಿಸೆಂಬರ್ 30) ಈ ಚಿತ್ರ ಅಂದಾಜು ಅರವತ್ತು ಲಕ್ಷವನ್ನು ದೋಚಿದೆ. ಈ ಮೂಲಕ ಆರು ದಿನದಲ್ಲಿ ಹದಿಮೂರು ಕೋಟಿಯ ಗಡಿ ಹತ್ತಿರ ಬಂದು ಚಿತ್ರ ತಲುಪಿದೆ.
ಸ್ಯಾಕ್ನಿಲ್ ಪ್ರಕಾರ ''45''ಚಿತ್ರದ ಮೊದಲ 5 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಗುರುವಾರ] - ₹ 5.5 ಕೋಟಿ
ಎರಡನೇ ದಿನ [ಶುಕ್ರವಾರ] - ₹2 ಕೋಟಿ
ಮೂರನೇ ದಿನ [ಶನಿವಾರ] - ₹1.95 ಕೋಟಿ
ನಾಲ್ಕನೇ ದಿನ [ಭಾನುವಾರ]- ₹2 ಕೋಟಿ * ಅಂದಾಜು
ಐದನೇ ದಿನ [ಸೋಮವಾರ]- ₹85 ಲಕ್ಷ * ಅಂದಾಜು
ಆರನೇ ದಿನ [ಮಂಗಳವಾರ]- ₹60 ಲಕ್ಷ *ಅಂದಾಜು
ಒಟ್ಟು ಗಳಿಕೆ - ₹ 12.90 ಕೋಟಿ

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಇದು ಪೈರಸಿ ಕಾಲ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಚಿತ್ರವನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುತ್ತಾರೆ. ''45'' ಚಿತ್ರದ ವಿಚಾರದಲ್ಲಿ ಕೂಡ ಇದಾಗಿದೆ. ಇದರ ಜೊತೆಯಲ್ಲಿ ಕನ್ನಡದಲ್ಲಿ ''ಮಾರ್ಕ್'' ಬಿಡುಗಡೆಯಾಗಿದೆ. ''45'' ಚಿತ್ರಕ್ಕೆ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇದು ಸಾಲದೆಂಬಂತೆ ಪರಭಾಷಾ ಚಿತ್ರಗಳ ಹಾವಳಿ. ಇಷ್ಟೆಲ್ಲ ಸವಾಲುಗಳಿದ್ದರು ಕೂಡ ''45'' ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ತ್ರೀಮೂರ್ತಿಗಳನ್ನು ಬೆಳ್ಳಿತೆರೆಯಲ್ಲಿ ನೋಡಲು ಪ್ರೇಕ್ಷಕರ ದಂಡು ಬರುತ್ತಿದೆ.
ಅದರಲ್ಲಿಯೂ ಬೆಂಗಳೂರು, ಮೈಸೂರು ಹೊರತು ಪಡಿಸಿದರೆ ತುಮಕೂರಿನಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚು ಕಂಡು ಬರುತ್ತಿದೆ. ಕುಂದಾಪುರ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಕೂಡ ಈ ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿ ತುಸು ಹೆಚ್ಚು ಸಿಗುತ್ತಿದೆ.
ಅಂದ್ಹಾಗೇ ''45'' ಪ್ಯಾನ್ ಇಂಡಿಯಾ ಸಿನಿಮಾ. ಸದ್ಯ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿರುವ ಈ ಚಿತ್ರ ಈ ವಾರದಿಂದ (ಜನವರಿ 1) ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಕೂಡ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಚಿತ್ರದ ಗಳಿಕೆ ಈ ವಾರಾಂತ್ಯದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಕೂಡ ಕರ್ನಾಟಕದಲ್ಲಿ ಚಿತ್ರ ಉತ್ತಮವಾದ ಗಳಿಕೆ ಮಾಡುವ ನಿರೀಕ್ಷೆ ಇದೆ.
ಒಟ್ನಲ್ಲಿ ''45'' ಚಿತ್ರ ಬಾಕ್ಸಾಫೀಸ್‌ನಲ್ಲಿ ನಿಧಾನಕ್ಕೆ ಒಂದೊಂದೇ ಮೆಟ್ಟಿಲೇರುತ್ತಾ 13 ಕೋಟಿಯ ಗಡಿಯತ್ತ ಬಂದಿದೆ. ಈ ವಾರಾಂತ್ಯದಲ್ಲಿ ಚಿತ್ರ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ''45''ರ ಸಂಭ್ರಮಾಚರಣೆಯನ್ನು ಚಿತ್ರತಂಡ ಶೀಘ್ರದಲ್ಲಿಯೇ ಮಾಡುವ ಸಾಧ್ಯತೆ ಇದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications










