45 Movie Day 1 Boxoffice: ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್; ಮೊದಲ ದಿನ '45' ಗಳಿಕೆ ಎಷ್ಟು?

ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್‌. ಬಿ ಶೆಟ್ಟಿ ನಟನೆಯ '45' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಎಲ್ಲೆಲ್ಲೂ ಸಿನಿಮಾ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿದೆ. ಪ್ರೀಮಿಯರ್ ಶೋಗಳಲ್ಲೇ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿದ್ದರು. ಕ್ರಿಸ್‌ಮಸ್ ರಜೆ ಹಿನ್ನೆಲೆ ಮೊದಲ ದಿನವೂ ಬಾಕ್ಸಾಫೀಸ್ ಶೇಕ್ ಆಗಿದೆ.

ಗರುಡ ಪುರಾಣ, ಪಾಪ- ಪುಣ್ಯ, ಆತ್ಮ- ಪರಮಾತ್ಮ, ಸಂಚಾರ ನಿಯಮ ಹೀಗೆ ಸಾಕಷ್ಟು ವಿಚಾರಗಳನ್ನು '45' ಚಿತ್ರದಲ್ಲಿ ಹೇಳಲಾಗಿದೆ. ನಮ್ಮ ಪುರಾಣಗಳೂ ಶಿವ, ಯಮನ ಜೊತೆಗೆ 21ನೇ ಶತಮಾನದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಮಂಗಳವಾರ(ಡಿಸೆಂಬರ್ 23) ನಡೆದ ಪ್ರೀಮಿಯರ್ ಶೋಗಳಲ್ಲೇ ಚಿತ್ರಕ್ಕೆ ನೋಡುಗರ ಬೆಂಬಲ ಸಿಕ್ಕಿತ್ತು. ಬುಧವಾರ ಸಂಜೆ ರಾಜ್ಯದ್ಯಂತ ಪ್ರೀಮಿಯರ್ ಶೋಗಳು ಆಯೋಜಿಸಲಾಗಿತ್ತು. ಎಲ್ಲೆಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು.

45 Movie Wins Hearts Strong Premiere Response 5 Crore Net Collection on Day One

ಅರ್ಜುನ್ ಜನ್ಯಾ ಮೊದಲ ಪ್ರಯತ್ನದಲ್ಲೇ ಇಂತಾದೊಂದು ಪ್ರಯೋಗಾತ್ಮಕ ಸಿನಿಮಾ ಮಾಡಿ ಗೆದ್ದಿದ್ದಾರೆ. ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ರೀತಿಯ ಸ್ಟಾರ್ ನಟರನ್ನು ಸೊಗಸಾಗಿ ತೆರೆಮೇಲೆ ತೋರಿಸಿ ಮೆಚ್ಚುಗೆ ಗಳಿಸಿದ್ದಾರೆ. ಜೊತೆಗೆ ರಾಜ್ ಬಿ ಶೆಟ್ಟಿ ನಟನೆಯನ್ನು ಬಳಸಿಕೊಂಡಿದ್ದಾರೆ. 3 ಬೇರೆ ಬೇರೆ ಪ್ರಪಂಚಗಳಲ್ಲಿ ಕಥೆ ಹೇಳಿರುವ ನಿರ್ದೇಶಕರು ಕ್ಲೈಮ್ಯಾಕ್ಸ್‌ನಲ್ಲಿ ಹೊಸ ದೃಶ್ಯವೈಭವವನ್ನು ತೆರೆದಿಟ್ಟಿದ್ದಾರೆ. ಫ್ಯಾಮಿಲಿ ಆಡಿಯನ್ಸ್‌ಗೆ '45' ಸಿನಿಮಾ ಇಷ್ಟವಾಗುವಂತಿದೆ. ಹಾಗಾಗಿ ವೀಕೆಂಡ್‌ನಲ್ಲಿ ಮತ್ತಷ್ಟು ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲಿದೆ.

ಮೊದಲ ದಿನದ ಗಳಿಕೆ

ಅಧಿಕೃತವಾಗಿ ಚಿತ್ರತಂಡದಿಂದ ಸಿನಿಮಾ ಕಲೆಕ್ಷನ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. sacnilk.com ವೆಬ್‌ಸೈಟ್ ವರದಿ ಪ್ರಕಾರ ಮೊದಲ ದಿನ 4.25 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ ಎನ್ನಲಾಗ್ತಿದೆ. ಇನ್ನು ಪ್ರೀಮಿಯರ್ ಶೋಗಳಿಂದ 90 ಲಕ್ಷದಿಂದ 1 ಕೋಟಿ ರೂ. ವರೆಗೆ ಕಲೆಕ್ಷನ್ ಆಗಿರುವ ಅಂದಾಜಿದೆ. ಹಾಗಾಗಿ ಈವರೆಗೆ 5 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದಂತಾಗಿದೆ. ಗ್ರಾಸ್ ಕಲೆಕ್ಷನ್ 8 ಕೋಟಿ ರೂ. ದಾಟಿರುವ ಸಾಧ್ಯತೆಯಿದೆ.

45 Movie Wins Hearts Strong Premiere Response 5 Crore Net Collection on Day One

ಟಿಕೆಟ್ ದರ ಕಮ್ಮಿ

ಮೇಲ್ನೋಟಕ್ಕೆ '45' ಸಿನಿಮಾ ಕಲೆಕ್ಷನ್ ಕೊಂಚ ಕಮ್ಮಿ ಎನಿಸಬಹುದು. ಆದರೆ ಟಿಕೆಟ್ ದರ ಹೆಚ್ಚಿಸದೇ ಸಾಮಾನ್ಯ ದರದಲ್ಲೇ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ. ಹಾಗಾಗಿ ಇದು ತುಸು ಕಮ್ಮಿ ಎನಿಸಿರಬಹುದು. ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಮೊದಲ ದಿನ ದಿನ 'ಮಾರ್ಕ್' 6.28 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk.com ವರದಿ ಮಾಡಿದೆ.

ವೀಕೆಂಡ್ ಲೆಕ್ಕಾಚಾರ

ಗುರುವಾರ ಕ್ರಿಸ್‌ಮಸ್ ರಜೆ ಇತ್ತು. ಆದರೆ ಶುಕ್ರವಾರ ವಾರದ ದಿನ. ಹಾಗಾಗಿ ಕಲೆಕ್ಷನ್ ಕೊಂಚ ತಗ್ಗಬಹುದು. ಶನಿವಾರ ಹಾಗೂ ಭಾನುವಾರ '45' ಸಿನಿಮಾ ಕಲೆಕ್ಷನ್ ಹೆಚ್ಚುವ ನಿರೀಕ್ಷೆಯಿದೆ. ಹೊಸ ವರ್ಷದ ಸಂಭ್ರಮದಲ್ಲೂ ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲಿದೆ. ಮಕ್ಕಳಿಗೆ, ಫ್ಯಾಮಿಲಿ ಆಡಿಯನ್ಸ್‌ಗೆ '45' ಸಿನಿಮಾ ಇಷ್ಟವಾಗುವಂತಿದೆ. ಹಾಗಾಗಿ ಮುಂದೆ ಮತ್ತಷ್ಟು ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ.

ನೆಗೆಟಿವ್ ರಿವ್ಯೂಗೆ ಬ್ರೇಕ್

ಇತ್ತೀಚೆಗೆ ಯಾವುದೇ ಸಿನಿಮಾ ಬಂದರೂ ನೆಗೆಟಿವ್ ಪ್ರಚಾರ ಹೆಚ್ಚುತ್ತಿದೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿ ಅಲ್ಲೇ ರಿವ್ಯೂ, ರೇಟಿಂಗ್ ನೀಡುವ ಅವಕಾಶವಿದೆ. ಉದ್ದೇಶ ಪೂರ್ವಕವಾಗಿ ಕೆಲವರು ನೆಗೆಟಿವ್ ವಿಮರ್ಶೆ ಕೊಡುತ್ತಾರೆ ಎನ್ನುವ ಆರೋಪ ಇದೆ. ದರ್ಶನ್ ನಟನೆಯ 'ಡೆವಿಲ್' ಚಿತ್ರಕ್ಕೆ BMSನಲ್ಲಿ ರಿವ್ಯೂ ರೇಟಿಂಗ್ ನೀಡದಂತೆ ಕೋರ್ಟ್ ಆದೇಶ ತಂದಿತ್ತು ಚಿತ್ರತಂಡ. ಇದೀಗ 'ಮಾರ್ಕ್' ಹಾಗೂ '45' ಚಿತ್ರತಂಡಗಳು ಇದೇ ಪ್ರಯತ್ನ ಮಾಡಿವೆ. ಚಿತ್ರಗಳಿಗೆ ಆಗಬಹುದಾದ ಡ್ಯಾಮೇಜ್ ಕಂಟ್ರೋಲ್ ಮಾಡುವ ಯತ್ನ ಮಾಡಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Read more about: shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X