50 ವರ್ಷಗಳಲ್ಲಿ ಆಯಾ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಯಾವ್ದು? 'KGF- 2' ಯಾಕೆ ಲಿಸ್ಟ್‌ನಲ್ಲಿ ಇಲ್ಲ?

'ಛಾವ' ಚಿತ್ರವನ್ನು ಹಿಂದಿಕ್ಕಿ 'ಕಾಂತಾರ- 1' ಸಿನಿಮಾ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ರಿಷಬ್ ಶೆಟ್ಟಿ ಸಾರಥ್ಯದ ಈ ಸಿನಿಮಾ ಗಳಿಕೆ 800 ಕೋಟಿ ರೂ. ದಾಟಿದೆ. ಹಲವು ದಾಖಲೆಗಳನ್ನು ಬರೆದು ಸಿನಿಮಾ ಅಚ್ಚರಿ ಮೂಡಿಸಿದೆ. ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತಾಗಿದೆ.

ಎರಡು ವಾರಕ್ಕೆ 'ಕಾಂತಾರ- 1' ಸಿನಿಮಾ 717.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಘೋಷಣೆ ಮಾಡಿತ್ತು. ಭಾರತದಲ್ಲಿ ನೆಟ್ ಕಲೆಕ್ಷನ್ 500 ಕೋಟಿ ರೂ. ಗಡಿ ದಾಟಿದೆ. ವಿದೇಶಗಳಲ್ಲಿ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. 25 ದಿನ ಪೂರೈಸಿ ಸಿನಿಮಾ ದರ್ಬಾರ್ ನಡೆಸ್ತಿದೆ. ಶೀಘ್ರದಲ್ಲೇ ಇಂಗ್ಲೀಷ್ ಭಾಷೆಗೆ ಡಬ್ ಆಗಿ ಬಿಡುಗಡೆ ಆಗಲಿದೆ.

50 Years 50 Winners The Highest-Grossing Indian Films from Sholay to Kantara-1

ಈ ವರ್ಷ 'ಕಾಂತಾರ- 1' ಸಿನಿಮಾ ವರ್ಲ್ಡ್‌ವೈಡ್ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಭಾರತದ ಸಿನಿಮಾ ಎನಿಸಿಕೊಂಡಿದೆ. ಇನ್ನೆರಡು ತಿಂಗಳಲ್ಲಿ ಯಾವುದೇ ಸಿನಿಮಾ ಈ ದಾಖಲೆ ಮುರಿಯುವುದು ಕಷ್ಟ. ಇನ್ನು ಕಳೆದ 50 ವರ್ಷಗಳಲ್ಲಿ ಪ್ರತಿವರ್ಷ ಯಾವ ಸಿನಿಮಾ ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಮಾಡಿದೆ ಎನ್ನುವುದನ್ನು ಮುಂದೆ ಓದಿ.

ಒಂದ್ಕಾಲದಲ್ಲಿ ಭಾರತೀಯ ಚಿತ್ರರಂಗ ಅಂದ್ರೆ ಬಾಲಿವುಡ್ ಎಂದು ಸಾಕಷ್ಟು ಜನ ಭಾವಿಸಿದ್ದರು. ಹಿಂದಿ ಸಿನಿಮಾಗಳೇ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದರು. ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿ ದೇಶ ವಿದೇಶಗಳಲ್ಲಿ ಬಿಡುಗಡೆ ಮಾಡುತ್ತಿದ್ದರು. ಕಳೆದ 20 ವರ್ಷಗಳಿಂದ ಈಚೆಗೆ ದಕ್ಷಿಣದ ಸಿನಿಮಾಗಳು ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆಯುತ್ತಿವೆ. ಇತ್ತೀಚೆಗೆ ಅದು ಮತ್ತಷ್ಟು ಹೆಚ್ಚಾಗಿದೆ. ಬಾಲಿವುಡ್ ಕೂಡ ಈಗ ಮಂಕಾಗಿದೆ.

50 Years 50 Winners The Highest-Grossing Indian Films from Sholay to Kantara-1

50 ವರ್ಷಗಳ ಹಿಂದೆ ಅಂದರೆ 1975ರಲ್ಲಿ 'ಶೋಲೆ' ಸಿನಿಮಾ ವರ್ಷದ ಅತಿದೊಡ್ಡ ಹಿಟ್ ಎನಿಸಿಕೊಂಡಿತ್ತು. ಬಾಲಿವುಡ್ ಇತಿಹಾಸದಲ್ಲಿ ಮರೆಯಲಾಗದ ಸಿನಿಮಾ ಇದು. ಅವತ್ತಿನ ಕಾಲಕ್ಕೆ ಅಂದಾಜು 3 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು. ಧರ್ಮೇಂದ್ರ, ಸಂಜೀವ್ ಕುಮಾರ್, ಹೇಮಾ ಮಾಲಿನಿ, ಅಮಿತಾಬ್ ಬಚ್ಚನ್ ಹೀಗೆ ಬಾಲಿವುಡ್ ದಿಗ್ಗಜರು ನಟಿಸಿದ್ದ ಚಿತ್ರಕ್ಕೆ ರಮೇಶ್ ಸಿಪ್ಪಿ ಆಕ್ಷನ್ ಕಟ್ ಹೇಳಿದ್ದರು. ಅಂದಿನ ಕಾಲಕ್ಕೆ ಸಿನಿಮಾ 35 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎನ್ನಲಾಗುತ್ತದೆ.

ಮುಂದೆ 1976ರಲ್ಲಿ 'ಬರೂದ್' ಸಿನಿಮಾ ಅತಿಹೆಚ್ಚು ಗಳಿಕೆ ಕಂಡ ದಾಖಲೆ ಬರೆದಿತ್ತು. 1977ರಲ್ಲಿ 'ಧರಮ್ ವೀರ್', 1978ರಲ್ಲಿ 'ಮುಖದ್ದರ್ ಕಾ ಸಿಕಂದರ್', ಮುಂದೆ 1979ರಲ್ಲಿ 'ಸುಹಾಗ್' ಹಾಗೂ 1980ರಲ್ಲಿ 'ಅಲಿಬಾಬಾ ಔರ್ 40 ಚೋರ್' ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎನಿಸಿಕೊಂಡಿತ್ತು.

80 ಹಾಗೂ 90ರ ದಶಕಗಳಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳು

1981- ಕ್ರಾಂತಿ

1982- ಡಿಸ್ಕೋ ಡ್ಯಾನ್ಸರ್

1983- ಕೂಲಿ

1984- ಜಾಗಿರ್

1985- ರಾಮ್ ತೇರಿ ಗಂಗಾ ಮೈಲಿ

1986- ಕರ್ಮ

1987- ಡ್ಯಾನ್ಸ್ ಡ್ಯಾನ್ಸ್

1988- ತೆಜಬ್

1989- ಮೈನೆ ಪ್ಯಾರ್ ಕಿಯಾ

1990- ಗಾಯಲ್

1991- ಸೌದಾಗರ್

1992- ಬೆಟಾ

1993- ಆಂಖೇನ್

1994- ಹಮ್ ಆಪ್ಕೆ ಹೈ ಕೌನ್

1995- ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ

1996- ರಾಜಾ ಹಿಂದೂಸ್ತಾನಿ

1997- ದಿಲ್ ತೊ ಪಾಗಲ್ ಹೈ

1998- ಕುಚ್ ಕುಚ್ ಹೋತಾ ಹೈ

1999- ಹಮ್ ಸಾಥ್ ಸಾಥ್ ಹೈ

2000- ಮೊಹಬ್ಬತೇನ್

ಕಳೆದ 25 ವರ್ಷಗಳಲ್ಲಿ ಯಾವೆಲ್ಲಾ ಸಿನಿಮಾ ಅತಿಹೆಚ್ಚು ಕಲೆಕ್ಷನ್ ಮಾಡಿದೆ ಎನ್ನುವುದು ಸಿನಿರಸಿಕರಿಗೆ ಗೊತ್ತೇಯಿದೆ. 2001ರಲ್ಲಿ 'ಕಭಿ ಖುಷಿ ಕಭಿ ಗಮ್', 2002ರಲ್ಲಿ 'ದೇವದಾಸ್', 2003ರಲ್ಲಿ 'ಕಲ್ ಹೋ ನ ಹೋ', 2004ರಲ್ಲಿ 'ವೀರ್‌ಜರಾ' ಸಿನಿಮಾ ಅತಿಹೆಚ್ಚು ಕಲೆಕ್ಷನ್ ಮಾಡಿದ್ದ ದಾಖಲೆ ಮಾಡಿತ್ತು. 2005ರಲ್ಲಿ ಮೊದಲ ಬಾರಿಗೆ ದಕ್ಷಿಣದ 'ಚಂದ್ರಮುಖಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ಸಂಚಲನ ಸೃಷ್ಟಿಸಿತ್ತು.

2006- ಧೂಮ್-2

2007- ಓಂ ಶಾಂತಿ ಓಂ

2008- ಗಜನಿ(ಹಿಂದಿ)

2009- 3 ಈಡಿಯಟ್ಸ್

2010- ರೋಬೊ(ತಮಿಳು)

2011- ಬಾಡಿಗಾರ್ಡ್

2012- ಎಕ್ ಥಾ ಟೈಗರ್

2013- ಧೂಮ್- 3

2014- ಪಿಕೆ

2015- ಭಜರಂಗಿ ಭಾಯಿಜಾನ್

2016- ದಂಗಲ್

2017- ಬಾಹುಬಲಿ- 2

2018- 2.O (ತಮಿಳು)

2019- ವಾರ್

2020- ತಾನಾಜಿ

2021- ಪುಷ್ಪ

ಅಂದಹಾಗೆ 2022ರಲ್ಲಿ ಕನ್ನಡ 'KGF -2' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಆದರೆ ಅದೇ ವರ್ಷ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕೂಡ ಬಂದು ಗೆದ್ದಿತ್ತು. 'KGF -2' ಚಿತ್ರದ ವಿಶ್ವದಾದ್ಯಂತ 1200ರಿಂದ 1250 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು ಎನ್ನಲಾಗ್ತಿದೆ. ತೆಲುಗಿನ 'RRR' ಸಿನಿಮಾ 1300ರಿಂದ 1387 ಕೋಟಿ ರೂ. ಬಾಚಿತ್ತು ಎನ್ನುವ ಅಂದಾಜಿದೆ. ಹಾಗಾಗಿ ಆ ವರ್ಷ ರಾಜಮೌಳಿ ಸಿನಿಮಾ ಮೊದಲ ಸ್ಥಾನಕ್ಕೇರಿತ್ತು.

2023ರಲ್ಲಿ ಶಾರುಖ್ ಖಾನ್ ನಿರ್ಮಿಸಿ ನಟಿಸಿದ 'ಜವಾನ್' ಸಿನಿಮಾ ಕಲೆಕ್ಷನ್ 1000 ಕೋಟಿ ರೂ. ಗಡಿ ದಾಟಿತ್ತು. ಕಳೆದ ವರ್ಷ ಈ ದಾಖಲೆ 'ಪುಷ್ಪ- 2' ಚಿತ್ರದ ಹೆಸರಿನಲ್ಲಿತ್ತು. ಅಲ್ಲು ಅರ್ಜುನ್ ಸಿನಿಮಾ 1800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಈ ವರ್ಷ ಕನ್ನಡದ 'ಕಾಂತಾರ- 1' ಚಿತ್ರ ಆ ದಾಖಲೆ ತನ್ನದಾಗಿಸಿಕೊಂಡಿದೆ.

More from Filmibeat

Read more about: kantara chapter 1 kgf
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X