ದೈವದ ಸದ್ದಿಗೆ ನಡುಗಿದ ಬಾಲಿವುಡ್ ; 'ಕಾಂತಾರ'ಗೆ ಸವಾಲು ಹಾಕಿದ್ದ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ' ಕಥೆ ಢಮಾರ್ 

ಚಿತ್ರರಂಗದಲ್ಲಿ ಈಗ ದಕ್ಷಿಣ ಭಾರತೀಯ ಚಿತ್ರಗಳ ಪಾರುಪಥ್ಯ ಇದೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರಗಳು ಎಂದರೆ ಮೂಗು ಮುರಿಯುತ್ತಿದ್ದ ಹಿಂದಿ ಉದ್ಯಮದವರೇ ಈಗ ಸೌತ್ ಸಿನಿಮಾಗಳ ಅಬ್ಬರ ಕಂಡು ಬೆರಗಾಗಿದ್ದಾರೆ. ಸತತ ಸೋಲುಗಳನ್ನು ಕಂಡು ಹೈರಾಣಾಗಿದ್ದಾರೆ. ದಕ್ಷಿಣಕ್ಕೆ ಸೆಡ್ಡು ಹೊಡೆಯುವ ಪ್ರಯತ್ನವನ್ನೇನೋ ಬಾಲಿವುಡ್‌ನವರು ಮಾಡುತ್ತಲೇ ಇದ್ದಾರೆ. ಆದರೆ.. ಯಶಸ್ಸು ಮಾತ್ರ ಇವರಿಗೆ ಸಿಗುತ್ತಿಲ್ಲ.

''ಛಾವಾ'' .. ''ಸೈಯಾರ''.. ಹೀಗೆ ಅಲ್ಲೊಂದು.. ಇಲ್ಲೊಂದು.. ಚಿತ್ರ ಹೊರತು ಪಡಿಸಿದರೆ ಬೇರೆ ಯಾವ ಹಿಂದಿ ಚಿತ್ರ ಕೂಡ ಈ ವರ್ಷ ದಾಖಲೆಯ ಗಳಿಕೆಯನ್ನು ಮಾಡಿಲ್ಲ. ಹೀಗಿರುವಾಗ ಕನ್ನಡದ ನೆಲದಿಂದ ಕೇಳಿಸಿದ ದೈವದ ಕೂಗಿಗೆ ಬಾಲಿವುಡ್ ಬೆಚ್ಚಿ ಬಿದ್ದಿದೆ.

60-crore-box-office-tsunami-kantara-chapter-1-drowns-varun-dhawans-sunny-sanskari-9-cr-on-day-1

ಹೌದು, 2022ರಲ್ಲಿ ಬಂದ ''ಕಾಂತಾರ'' ಮತ್ತು ಆ ಚಿತ್ರಕ್ಕೆ ಸಿಕ್ಕಿದ್ದ ಅತ್ಯದ್ಭುತ ಗೆಲುವನ್ನು ಗಮನಿಸಿದ್ದ ಹಲವರು ಈ ಬಾರಿ ''ಕಾಂತಾರ ಚಾಪ್ಟರ್ 1'' ಎದುರು ತಮ್ಮ ಚಿತ್ರವನ್ನು ಇಳಿಸುವ ಧೈರ್ಯ ಮಾಡಿರಲಿಲ್ಲ. ಆದರೆ.. ಕೊನೆ ಕೊನೆಯಲ್ಲಿ ಪಕ್ಕದ ಚೆನ್ನೈದಿಂದ ಧನುಷ್ ತಮ್ಮ ''ಇಡ್ಲಿ ಕಡೇ'' ಚಿತ್ರವನ್ನು ತೆಗೆದುಕೊಂಡು ಬಂದರು.

ಮತ್ತೊಂದು ಕಡೆ ಬಂದದ್ದು ಬರಲಿ ಎಂಬ ಹುಂಬು ಧೈರ್ಯ ಮಾಡಿದ ಕರಣ್ ಜೋಹರ್ ತಮ್ಮ ''ಸನ್ನಿ ಸಂಸ್ಕಾರಿ ಕೀ ತುಳಸಿ ಕುಮಾರಿ'' ಚಿತ್ರವನ್ನು ''ಕಾಂತಾರ ಚಾಪ್ಟರ್ 1'' ಎದುರು ಬಿಡುಗಡೆ ಮಾಡಿದರು.

ಮಾಡಿದ ಈ ತಪ್ಪಿಗೆ ಕರಣ್ ಜೋಹರ್ ಈಗ ಪಶ್ಚಾತಾಪ ಪಡುವಂತಾಗಿದೆ. ದೈವ ನರ್ತನದ ಮುಂದೆ ಮೊದಲ ದಿನವೇ ''ಸನ್ನಿ ಸಂಸ್ಕಾರಿ ಕೀ ತುಳಸಿ ಕುಮಾರಿ'' ಚಿತ್ರ ಧೂಳಿಪಟವಾಗಿದೆ. ಮೊದಲ ದಿನ ಹತ್ತು ಕೋಟಿಯನ್ನು ಕೂಡ ಈ ಚಿತ್ರ ಗಳಿಸಲಿಲ್ಲ.

ಹೌದು. ಬಾಕ್ಸಾಫೀಸ್‌ನ ಅಂಕಿ -ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಕಾಂತಾರ- ಅಧ್ಯಾಯ 1'' ಮೊದಲ ದಿನ ಭಾರತದಲ್ಲಿ ₹60 ಕೋಟಿ ಹಣವನ್ನು ದೋಚಿದೆ. ಆ ಪೈಕಿ ಕೇವಲ ಹಿಂದಿ ಭಾಷೆಯಿಂದ ಹರಿದು ಬಂದ ಮೊತ್ತವೇ ₹18.50 ಕೋಟಿ ಇದೆ. ಆದರೆ.. ಹಿಂದಿ ಅವರದ್ದೇ ಚಿತ್ರವಾದ ''ಸನ್ನಿ ಸಂಸ್ಕಾರಿ ಕೀ ತುಳಸಿ ಕುಮಾರಿ'' ಮೊದಲ ದಿನ ಗಳಿಸಿದ್ದು ಕೇವಲ ₹ 9.25 ಕೋಟಿಯನ್ನು ಮಾತ್ರ.

60-crore-box-office-tsunami-kantara-chapter-1-drowns-varun-dhawans-sunny-sanskari-9-cr-on-day-1

ಇನ್ನೂ ವರುಣ್ ಧವನ್-ಜಾಹ್ನವಿ ಕಪೂರ್ ಅಭಿನಯದ ಈ ರೆಗ್ಯೂಲರ್ ಮಸಾಲಾ ಕಮರ್ಷಿಯಲ್ ಚಿತ್ರ ''ಸನ್ನಿ ಸಂಸ್ಕಾರಿ ಕೀ ತುಳಸಿ ಕುಮಾರಿ'' ನೋಡಿದ ಅನೇಕ ಪ್ರೇಕ್ಷಕರು ಚಿತ್ರ ಅಷ್ಟಕಷ್ಟೇ ಎಂಬ ಮಾತುಗಳನ್ನಾಡಿದ್ದಾರೆ. ವಿಮರ್ಷಕರು ಕೂಡ ಈ ಚಿತ್ರದ ಕೈ ಬಿಟ್ಟಿದ್ದಾರೆ.

''ದಿ ಇಂಡಿಯನ್ ಎಕ್ಸ್‌ಪ್ರೆಸ್'' ಈ ಚಿತ್ರಕ್ಕೆ ಕೇವಲ 2 ಸ್ಟಾರ್‌ಗಳನ್ನು ನೀಡಿದ್ದರೆ ''NDTV'' 2.5 ಸ್ಟಾರ್‌ಗಳನ್ನು ಮಾತ್ರ ನೀಡಿದೆ. ಇನ್ನೂ ಬಾಲಿವುಡ್‌ನ ಪ್ರಖ್ಯಾತ ಟ್ರೇಡ್ ವಿಶ್ಲೇಷಕ ''ತರಣ್ ಆದರ್ಶ'' ಅವರ ಪ್ರಕಾರ ದಕ್ಷಿಣ ಭಾರತದ ಹಲವೆಡೆ ಈ ಚಿತ್ರಕ್ಕೆ ''ಕಾಂತಾರ'' ಚಿತ್ರದಿಂದ ಭಾರೀ ಹೊಡೆತ ಬಿದ್ದಿದೆ.

ಈ ಎಲ್ಲಾ ಕಾರಣಗಳಿಂದ ಮುಂಬರುವ ದಿನಗಳಲ್ಲಿ ''ಸನ್ನಿ ಸಂಸ್ಕಾರಿ ಕೀ ತುಳಸಿ ಕುಮಾರಿ'' ಬಾಕ್ಸಾಫೀಸ್‌ನಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಎನ್ನುವ ಅಭಿಪ್ರಾಯ ಸದ್ಯ ವ್ಯಕ್ತವಾಗುತ್ತಿದೆ. ಈ ವಾರಾಂತ್ಯದ ಗಳಿಕೆಯ ಮೇಲೆ ಈ ಚಿತ್ರದ ಭವಿಷ್ಯ ಕೂಡ ನಿಂತಿದೆ. ಶನಿವಾರ ಮತ್ತು ಭಾನುವಾರ ಕೂಡ ''ಕಾಂತಾರ'' ಅಬ್ಬರಿಸಿದರೆ ಸೋಮವಾರದ ಹೊತ್ತಿಗೆ ಸನ್ನಿ ಸಂಸ್ಕಾರಿ ತುಳಸಿ ಕುಮಾರಿಯ ಕಥೆ ಬಹುತೇಕ ಮುಗಿದಂತೆಯೇ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Kantara Chapter 1 vs Sunny Sanskari Ki Tulsi Kumari Day 1 BO: Rishab Shetty's film collects a whopping ₹60 Cr., while the Varun-Janhvi starrer manages only ₹9 Cr.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X