Ghaati Box Office Day 2: ಯಶ್ ತಾಯಿ ಪುಷ್ಪಾಗೆ ಮತ್ತೊಂದು ಸೋಲು, ಸಂಪೂರ್ಣ ಕುಸಿದ ಅನುಷ್ಕಾ ಶೆಟ್ಟಿ ಘಾಟಿ

ಹೆಚ್ಚೇನು ಇಲ್ಲ ಒಂದೇಳು ವರ್ಷದ ಹಿಂದೆ ಅನುಷ್ಕಾ ಶೆಟ್ಟಿ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಇತ್ತು.‌ ಸ್ವೀಟಿಯ ಸಿನಿಮಾ ಬರ್ತಿದೆ ಅಂದರೆ ಸಾಕು. ಚಿತ್ರಮಂದಿರದ ಮುಂದೆ ಒಂದು ವರ್ಗ ಹಾಜರಾಗುತ್ತಿತ್ತು. ಚಿತ್ರರಂಗದಲ್ಲಿ ಕೂಡ ಅನುಷ್ಕಾಗೆ ಹಾಗೇ ಬೆಲೆ ಲೂಡ ಇತ್ತು. ತಮಿಳಿಗೆ ನಯನತಾರಾ ಲೇಡಿ ಸೂಪರ್ ಸ್ಟಾರ್ ಆದರೆ ತೆಲುಗಿಗೆ ಅನುಷ್ಕಾ ಎಂದು ಬೀಗುತ್ತಿತ್ತು ತೆಲುಗು ಉದ್ಯಮ.

ಆದರೆ..ಬಾಹುಬಲಿ‌‌ ಮಾಡಿದ್ದೇ ಕೊನೆ. ಆ ನಂತರ ಅನುಷ್ಕಾ ಶೆಟ್ಟಿಗೆ ವೃತ್ತಿ ಬದುಕಿಗೆ ಗ್ರಹಣ ಹಿಡಿಯಿತು. ಇಲ್ಲಿಂದಾಚೆ ಅನುಷ್ಕಾ ಮಾಡಿದ ಯಾವ ಚಿತ್ರ ಕೂಡ ಗೆಲ್ಲಲೇ ಇಲ್ಲ. "ಭಾಗ್ಮತಿ".. "ನಿಶ್ಯಬ್ದಂ".. "ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ"..ಹೀಗೆ ಒಂದಾದ ಮೇಲೊಂದು ಬಂದ ಸಿನಿಮಾ ಮಕಾಡೆ ಮಲಗಿದವು.

A Costly Lesson for Yash s Mom Pushpa Arun Kumar s First Film as Distributor Ghaati Fails to Im

ಈ ಹಿನ್ನೆಲೆ "ಘಾಟಿ" ಮೇಲೆ ಎಲ್ಲರ ಭರವಸೆ ಇತ್ತು. ಸೋಲಿನ ಸರಪಳಿ ಕಳಚುವ ಭರವಸೆ ಇತ್ತು. ಆದರೆ ಅದು ಕೂಡ ಈಗ ಹುಸಿಯಾಗಿದೆ. "ಘಾಟಿ" ಬಾಕ್ಸಾಫೀಸ್ ನಲ್ಲಿ ಕುಸಿದಿದೆ. ಹೌದು, ಬಾಕ್ಸಾಫೀಸ್‌ನ ಲೆಕ್ಕಾಚಾರವನ್ನು ತಪ್ಪದೇ ನೀಡುವ ''ಸ್ಯಾಕ್ನಿಲ್'' ಸದ್ಯ ''ಘಾಟಿ'' ಚಿತ್ರದ ಕುಂಡಲಿಯನ್ನು ಹಂಚಿಕೊಂಡಿದೆ.

ಆ ಪ್ರಕಾರ ನೋಡುವುದಾದರೆ ಮೊದಲ ದಿನ (ಸೆಪ್ಟೆಂಬರ್ 5) ಕೇವಲ ₹2 ಕೋಟಿಯನ್ನು ಗಳಿಸಿದ್ದ ಚಿತ್ರ ಇಂದು (ಸೆಪ್ಟೆಂಬರ್ 6) ಅಂದಾಜು ₹ 1.74 ಕೋಟಿಯನ್ನಷ್ಟೇ ಗಳಿಸಿದೆ. ಈ ಮೂಲಕ ಪಾತಾಳದತ್ತ ಚಿತ್ರದ ಗಳಿಕೆ ದಾಪುಗಾಲು ಹಾಕುತ್ತಿದೆ. ಇನ್ನು.. ಎರಡು ವರ್ಷದ ಗಜ ಪ್ರಸವ ಇದು. ಈ ಹಿನ್ನೆಲೆ ಹಲವರಿಗೆ ಚಿತ್ರ ಇಷ್ಟವಾಗಿಲ್ಲ. ಚಿತ್ರದ ಕಥೆ ಮತ್ತು ಚಿತ್ರಕಥೆಯಲ್ಲಿ ಇರುವ ಕುಂದು ಕೊರತೆ ಕಣ್ಣಿಗೆ ಬಿದ್ದಿದೆ. ಪ್ರೇಕ್ಷಕರಲ್ಲಿಯೇ ಈ ಚಿತ್ರದ ಕುರಿತು ಅಸಹನೆ.. ಅಸಮಾಧಾನ ಇದೆ. ''ಘಾಟಿ'' ಚಿತ್ರದ ಗಳಿಕೆಯಲ್ಲಿ ಕುಸಿತ ಕಾಣಲು ಇದೆಲ್ಲ ಕಾರಣ ಎನ್ನುವ ಅಭಿಪ್ರಾಯ ಸದ್ಯ ಕೇಳಿ ಬರುತ್ತಿದೆ.

a-costly-lesson-for-yashs-mom-pushpa-arun-kumars-first-film-as-distributor-ghaati-fails-to-im

ಇನ್ನು ''ಘಾಟಿ'' ಚಿತ್ರವನ್ನು ಪ್ರೇಕ್ಷಕರು ಮಾತ್ರವಲ್ಲ ವಿಮರ್ಷಕರು ಕೂಡ ಕೈ ಬಿಟ್ಟಿದ್ದಾರೆ. ಹಲವರು ಈ ಚಿತ್ರದ ಕುರಿತು ನೆಗೆಟಿವ್ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ಇದು ಕೂಡ ಚಿತ್ರದ ಸೋಲಿಗೆ ಪ್ರಮುಖ ಕಾರಣ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ''ಘಾಟಿ'' ಎದುರು ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಆ ಪೈಕಿ ''ಲೋಕಾ'' ಈ ''ಘಾಟಿ''ಗೆ ತುಸು ಹೆಚ್ಚೇ ಪೆಟ್ಟನ್ನೂ ನೀಡಿದೆ.

ಅಂದ್ಹಾಗೇ ಅನುಷ್ಕಾ ಶೆಟ್ಟಿ ಅಭಿನಯದ ''ಘಾಟಿ'' ಚಿತ್ರವನ್ನು ಕರುನಾಡಿನೆಲ್ಲೆಡೆ ತಲುಪಿಸುವ ಜವಾಬ್ಧಾರಿಯನ್ನು ಯಶ್ ಅವರ ತಾಯಿ ಪುಷ್ಪಾ ವಹಿಸಿಕೊಂಡಿದ್ದರು. ಚಿತ್ರದ ಬಿಡುಗಡೆಗೆ ಮುನ್ನ ಕರ್ನಾಟಕದಲ್ಲಿ ಚಿತ್ರ ಗೆಲ್ಲುತ್ತೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು. ಮೊದಲು ತೆಲುಗು ಬಿಡುಗಡೆ ಮಾಡ್ತೀನಿ ಕನ್ನಡ ಆ ನಂತರ ನೋಡೋಣ ಎಂದು ಹೇಳಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ನನಗೆ ನನ್ನ ನಿರ್ಮಾಣದ ಮೊದಲ ಚಿತ್ರ ''ಕೊತ್ತಲವಾಡಿ''ಯ ಸಮಯದಲ್ಲಿ ಚಿತ್ರಮಂದಿರದ ವಿಷಯದಲ್ಲಿ ಮೋಸ ಮಾಡಿದ್ದಾರೆ ಈ ಕಾರಣಕ್ಕೆ ನಾನೇ ವಿತರಣೆಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಕೂಡ ಹೇಳಿದ್ದರು. ಆದರೆ ಈಗ ಚಿತ್ರವೊಂದರ ಡಿಸ್ಟ್ರಿಬ್ಯೂಷನ್ ಸಮಸ್ಯೆ ಯಶ್ ಅವರ ತಾಯಿ ಪುಷ್ಪಾ ಅವರಿಗೆ ಗೊತ್ತಾಗಿದ್ದರೂ ಗೊತ್ತಾಗಿರಬಹುದು.

ಒಟ್ನಲ್ಲಿ ಸದ್ಯ ಬಾಕ್ಸಾಫೀಸ್‌ನಲ್ಲಿ ''ಘಾಟಿ'' ಸಂಪೂರ್ಣ ಕುಸಿದಿದೆ. ಭಾನುವಾರ ಕೂಡ ಚೇತರಿಕೆಯ ಲಕ್ಷಣ ಕಂಡು ಬಂದಿಲ್ಲ. ಈ ಹಿನ್ನೆಲೆ ಇಂದು ಅಂದರೆ ಸೋಮವಾರದ ಗಳಿಕೆಯ ಮೇಲೆ ಎಲ್ಲರ ಕಣ್ಣಿದೆ. ಚಿತ್ರದ ಗಳಿಕೆ 75 % ಕುಸಿಯುವ ಸಾಧ್ಯತೆ ಇದೆ. ಒಟ್ಟಾರೆ ಚಿತ್ರ ಎಷ್ಟ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

More from Filmibeat

English summary
Box office analysis: A rough start for PA Productions. Discover why Yash's mother, Pushpa Arun Kumar's, film distribution debut with 'Ghaati' is facing a major challenge after collections plummeted on day two.
Read more about: anushka shetty tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X